
ಮೈಸೂರು; ಪ್ರಾಧ್ಯಾಪಕ ವೃತ್ತಿಯಲ್ಲಿರುವವರು ಪ್ರತಿ ದಿನ ಅಧ್ಯಯನ ಮಾಡುತ್ತಾ ಹೊಸ ಹೊಸದನ್ನು ಕಲಿಯುತ್ತಾ ಕಾಲ ಕಾಲಕ್ಕೆ ಅಪ್ಡೇಟ್ ಆಗುತ್ತಾ ಹೋದರೆ ಮಾತ್ರ ಪರಿಪೂರ್ಣ ಜ್ಞಾನವನ್ನು ವಿದ್ಯಾರ್ಥಿ ಸಮೂಹಕ್ಕೆ ವಿಸ್ತರಿಸುತ್ತಾ ಹೋಗಬಹುದೆಂದು ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಎನ್. ನಾಗರಾಜು ತಿಳಿಸಿದರು.
ನಗರದ ಜ್ಞಾನಬುತ್ತಿ ಸಂಸ್ಥೆಯ ವತಿಯಿಂದ ಏರ್ಪಡಿಸಿದ್ದ ಕೆ-ಸೆಟ್ ಮತ್ತು ಯುಜಿಸಿ-ನೆಟ್ ಪರೀಕ್ಷಾ ಉಚಿತ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪದವಿಯ ಅಂಕಗಳು ಈಗ ಉದ್ಯೋಗಕ್ಕೆ ಮಾನದಂಡವಾಗಿ ಉಳಿದಿಲ್ಲ. ಬದಲಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹತೆಯಾಗಿದೆ ಎಂದು ಹೇಳಿದರು.
ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನದಿಂದ ಅಸಾಧ್ಯವಾದುದನ್ನು ಸಾಧಾರಣ ವಿದ್ಯಾರ್ಥಿಗಳು ಸಾಧಿಸಬಹುದು. ಪರೀಕ್ಷೆಗೆ ಪೂರ್ಣಪ್ರಮಾಣದಲ್ಲಿ ತಯಾರಾಗಬೇಕು. ನಿಗದಿತ ಪಠ್ಯಪುಸ್ತಕಗಳನ್ನು ಪ್ರತಿಸಾಲು ಬಿಡದಂತೆ ಓದಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ನಿಮ್ಮನ್ನು ನೀವು ಉತ್ತೇಜಿಸಿಕೊಂಡು ಪರೀಕ್ಷೆಗಳನ್ನು ಎದುರಿಸಿ ಜೀವನದಲ್ಲಿ ಯಶಸ್ಸುಗಳಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಬದುಕೆಂಬುದು ಚೈನಿನ ಸರಪಳಿ ಇದ್ದಹಾಗೆ. ಪ್ರತಿಕೊಂಡಿಯೂ ಗಟ್ಟಿಯಾಗಿರಬೇಕು. ಕೊಂಡಿಗಳ ನಡುವೆ ಬಿರುಕು ಬಿಟ್ಟಾಗ ಗಟ್ಟಿಯಾದ ಬೆಸುಗೆಗಳನ್ನು ನಿರಂತರವಾಗಿ ಹಾಕುತ್ತಿರಬೇಕು. ನಮ್ಮ ದೌರ್ಬಲ್ಯಗಳನ್ನು ಮೆಟ್ಟಿನಿಂತು; ಆದಮ್ಯ ಆತ್ಮವಿಶ್ವಾಸದಿಂದ ನಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಸ್ಮಾರ್ಟ್'' ಆಗಿ ಪರೀಕ್ಷೆ ಎದುರಿಸಿ ಮತ್ತು ಜೀವನದ ಸಮಸ್ಯೆಗಳನ್ನುಸ್ಮೆöÊಲ್” ಮುಖಭಾವದಿಂದ ಎದುರಿಸಿ ಎಂದು ಎರಡು ಪದಗಳ ಪ್ರತಿ ಅಕ್ಷರವನ್ನು ವಿಸ್ತರಿಸಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೊ. ಮಲ್ಲಿಕಾರ್ಜುನ ಶಾಸ್ತಿçಗಳು ಮಾತನಾಡಿ, ಕ್ರಿಕೆಟ್ನಲ್ಲಿ ಯಶಸ್ವಿ ಬೋಲರ್ ಹಿಂದಕ್ಕೆ ಹೋಗಿ, ಆನಂತರ ವೇಗವಾಗಿ ಮುಂದಕ್ಕೆ ಬಂದು ಬೊಲ್ ಮಾಡಿ, ವಿಕೆಟ್ ಬೀಳಿಸುತ್ತಾನೆ. ಇದರ ಅರ್ಥ ಸೋಲುಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಯಶಸ್ವಿಯಾಗಬೇಕು ಎಂದರು.
ಪ್ರೊ. ಪದ್ಮನಾಭ್ ಮಾತನಾಡಿ, “ಅನ್ನ ಹಾಕಿದ ಮನೆ, ಗೊಬ್ಬರ ಹಾಕಿದ ರೈತ ಮತ್ತು ವಿದ್ಯೆ ಕಲಿಸಿದ ಗುರುಗಳು ಚೆನ್ನಾಗಿರಬೇಕು” ಎಂದು ನಮ್ಮ ಹಿರಿಯರು ಮತ್ತು ಸಮಾಜ ಅಪೇಕ್ಷೆ ಪಡುತ್ತದೆ ಎಂದರು. ಡಾ. ಶೈಲೇಶ್ ರಾಜ್ ಅರಸು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಹಕಾರಿಗಳಾದ ವೈ.ಎನ್. ಶಂಕರೇಗೌಡ ವಹಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಣ ತಜ್ಞರಾದ ಪ್ರೊ. ಮಲ್ಲಿಕಾರ್ಜುನ ಶಾಸ್ತಿç, ಪ್ರೊ. ಆರ್. ಎನ್. ಪದ್ಮನಾಭ್, ವೈ.ಎನ್. ಶಂಕರೇಗೌಡ, ಪ್ರಾಂಶುಪಾಲರಾದ ಮಹದೇವ ನಾಯಕ್, ಡಾ. ಕೃ.ಪ. ಗಣೇಶ, ಡಾ. ಪುಟ್ಟರಾಜು ಸಿ, ಡಾ. ಶೈಲೇಶ್ ರಾಜೇ ಅರಸ್, ಜೈನಹಳ್ಳಿ ಸತ್ಯನಾರಾಯಣಗೌಡ, ಡಾ. ಹೊನ್ನಯ್ಯ, ಕಾರ್ಯದರ್ಶಿಎಚ್. ಬಾಲಕೃಷ್ಣ, ಪ್ರೊ. ಕಿರಣ್ ಕೌಶಿಕ್ ಹಿರಿಯ ಶಿಕ್ಷಣ ತಜ್ಞರಾದ ಪ್ರೊ. ಮಲ್ಲಿಕಾರ್ಜುನ ಶಾಸ್ತಿç, ಪ್ರೊ. ಆರ್. ಎನ್. ಪದ್ಮನಾಭ್, ವೈ.ಎನ್. ಶಂಕರೇಗೌಡ, ಪ್ರಾಂಶುಪಾಲರಾದ ಮಹದೇವ ನಾಯಕ್, ಡಾ. ಕೃ.ಪ. ಗಣೇಶ, ಡಾ. ಪುಟ್ಟರಾಜು ಸಿ, ಡಾ. ಶೈಲೇಶ್ ರಾಜೇ ಅರಸ್, ಜೈನಹಳ್ಳಿಸತ್ಯನಾರಾಯಣಗೌಡ, ಡಾ. ಹೊನ್ನಯ್ಯ, ಕಾರ್ಯದರ್ಶಿಎಚ್. ಬಾಲಕೃಷ್ಣ, ಇದ್ದರು.