
ಮೈಸೂರು: ಈ ಬಾರಿಯ ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸದಲ್ಲಿ ಮೊದಲ ಬಾರಿಗೆ ಕಂಬಳವನ್ನು ಆಯೋಜಿಸುತ್ತಿರುವುದಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು ನಾಡ ಹಬ್ಬ ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ವಿಚಾರ ಕುರಿತು ಮರು ಚಿಂತನೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಮೈಸೂರಿನ ದಸರಾದಲ್ಲಿ ಕಂಬಳ ನಡೆಸಲು ಚರ್ಚೆ ನಡೆಯುತ್ತಿದೆ. ಕಂಬಳ ಕರಾವಳಿ ಭಾಗದ ಮಣ್ಣು ಸಂಸ್ಕöÈತಿಯ ಸಂಕೇತ. ಇದು ಶತಮಾನಗಳ ಇತಿಹಾಸ ಹೊಂದಿದ್ದು, ತನ್ನದೇ ಆದ ಸಂಪ್ರದಾಯ ಧಾರ್ಮಿಕ ಮೌಲ್ಯ ಹೊಂದಿದೆ. ಕಂಬಳ ವಾಣಿಜ್ಯೀಕರಣ ಅಥವಾ ಮನರಂಜನೆ ದೃಷ್ಟಿಕೋನದಿಂದ ನೋಡಿ ಅದರ ಘನತೆ ಕುಗ್ಗಿಸಬಾರದು ಎಂದು ತಿಳಿಸಿದ್ದಾರೆ.
ನಿರ್ಧಿಷ್ಟ ಪರಿಸರ ಮತ್ತು ಪ್ರಾದೇಶಿಕ ನಂಬಿಕೆಗೆ ಸೀಮಿತವಾಗಿರುವ ವಿಶಿಷ್ಟ ಆಚರಣೆ ಕಂಬಳ. ಅದನ್ನು ಮೂಲ ನೆಲದಿಂದ ಬೇರ್ಪಡಿಸುವುದು ಅದರ ಆಂತರಿಕ ಪಾವಿತ್ರ÷್ಯಕ್ಕೆ ಧಕ್ಕೆ ತರುವ ಅಪಾಯ ಹೊಂದಿದೆ. ಈ ಕುರಿತು ಸರ್ಕಾರ ಚಿಂತನೆ ನಡೆಸಬೇಕು ಎಂದು ತಿಳಿಸಿದ್ದಾರೆ.