
ಮೈಸೂರು: ಜವಳಿ ಕ್ಷೇತ್ರದಿಂದ ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಸಿಗುತ್ತಿದೆ ಎಂದು ಜವಳಿ ಅಭಿವೃದ್ದಿ ಆಯುಕ್ತ ಎ.ಬಿ.ಬಸವರಾಜು ತಿಳಿಸಿದರು.
ಶುಕ್ರವಾರ ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜವಳಿ ಮತ್ತು ಕೈಮಗ್ಗ ಇಲಾಖೆ ವತಿಯಿಂದ ಏರ್ಪಡಿಸಿದ್ದ ಜಾಗತಿಕ ಮಾರುಕಟ್ಟೆಗೆ ಜವಳಿ ಜಿಲ್ಲಾ ಮಟ್ಟದ ಆಂತರಿಕ ಸಲಹಾ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜವಳಿ-ಕೈ ಮಗ್ಗ ಕ್ಷೇತ್ರ ಅತಿ ಹೆಚ್ಚು ಉದ್ಯೋಗ ಸೃಷ್ಟಿ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, 2030ಕ್ಕೆ ಕರ್ನಾಟಕದಲ್ಲಿ 75,200 ಕೋಟಿ ರೂ.ನಷ್ಟು ಉತ್ಪನ್ನಗಳನ್ನು ರಫುö್ತಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
1912ರಲ್ಲಿ ಮೈಸೂರಿನಲ್ಲಿ ಆರಂಭವಾದ ರೇಷ್ಮೆ ನೇಯ್ದೆ ಕಾರ್ಖಾನೆಯಿಂದ ಇಂದು, ಹೊರ ರಾಜ್ಯಗಳವರು ತರಬೇತಿ ಪಡೆದು ರೇಷ್ಮೆ ಕಾರ್ಖಾನೆಗಳನ್ನು ಆರಂಭಿಸಿದ್ದಾರೆ. ಕೃಷಿ ಕ್ಷೇತ್ರ ಹೊರತುಪಡಿಸಿದರೆ ಅತಿ ಹೆಚ್ಚು ಉದ್ಯೋಗವನ್ನು ಜವಳಿ ಕ್ಷೇತ್ರದಿಂದ ಸೃಷ್ಟಿಸಲಾಗುತ್ತಿದೆ ಎಂದು ಹೇಳಿದರು.
ಕೇಂದ್ರಸರ್ಕಾರ ರಫುö್ತ ಪ್ರಮಾಣ ಹೆಚ್ಚು ಮಾಡುವ ಉದ್ದೇಶದಿಂದ ದೇಶದ ಎಲ್ಲಾ ರಾಜ್ಯಗಳಿಗೂ ಗುರಿಯನ್ನು ನೀಡಿದೆ. ಅದರಂತೆ ಕರ್ನಾಟಕಕ್ಕೂ 75,200 ಕೋಟಿ ರೂ. ರಫುö್ತ ಮಾಡುವ ಗುರಿ ಕೊಡಲಾಗಿದೆ. ಇದನ್ನು ಮುಟ್ಟಬೇಕಾದರೆ, ನಾವು ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ಜವಳಿ ಮತ್ತು ಕೈಮಗ್ಗ ಕ್ಷೇತ್ರದಲ್ಲಿ ಉತ್ಪಾದಕರು,ರಫುö್ತದಾರರು,ಮರ್ಚೆಂಟ್ಸ್ಗಳ ಸಮಸ್ಯೆಗಳನ್ನು ಆಲಿಸಲಾಗುವುದು. ಒಂದು ಜಿಲ್ಲೆ-ಒಂದು ಉತ್ಪನ್ನಕ್ಕೆ ಒತ್ತು ನೀಡಿದಂತೆ ಜವಳಿ ಕ್ಷೇತ್ರದ ಉದ್ಯಮದಾರರಿಗೂ ಉತ್ತೇಜನ ನೀಡಲಾಗುತ್ತದೆ ಎಂದರು.
ರಾಜ್ಯದ ಚಾಂಪಿಯನ್ ಜಿಲ್ಲೆಗಳಲ್ಲಿ ಬೆಂಗಳೂರು ನಗರ,ಗ್ರಾಮಾಂತರ ಜಿಲ್ಲೆ,ಹಾಸನ ಹಾಗೂ ಮೈಸೂರು ಸೇರಿದೆ. ಜವಳಿ ಕ್ಷೇತ್ರದಿಂದ ಅತಿ ಹೆಚ್ಚು ವಿದೇಶಗಳಿಗೆ ರಫುö್ತ ಆಗುತ್ತಿರುವ ಕಾರಣ, ಮತ್ತಷ್ಟು ಪೂರಕವಾದ ಉತ್ತೇಜನ ನೀಡಲಾಗುವುದು ಎಂದು ಭರವಸೆ ನೀಡಿದರು.
ಕೈಮಗ್ಗ ಮತ್ತು ಜವಳಿ ಇಲಾಖೆ ಅಪರ ನಿರ್ದೇಶಕ ಸಿ.ಎಸ್.ಯೋಗೇಶ್ ಮಾತನಾಡಿ, ಜವಳಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲು ಕಲಬುರಗಿಯಲ್ಲಿ ಟೆಕ್ಸ್ಟೈಲ್ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ಅದೇ ರೀತಿ ಬೇರೆ ಜಿಲ್ಲೆಗಳಲ್ಲಿ ಸ್ಥಾಪಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಮೈಸೂರು ಜಿಲ್ಲೆ ಶೇ.37ರಷ್ಟು ಬಿಲಿಯನ್ ಡಾಲರ್ ರಫುö್ತ ಮಾಡಲಾಗುತ್ತಿದ್ದು,100 ಬಿಲಿಯನ್ ಡಾಲರ್ ರಫುö್ತ ಮಾಡುವ ಗುರಿ ಹೊಂದಿರುವ್ಯದರಿAದ, ಅದಕ್ಕೆ ಬೇಕಾದ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರತಿವರ್ಷ 20ರಷ್ಟು ಬಿಲಿಯನ್ ಡಾಲರ್ ರಫುö್ತ ಪ್ರಮಾಣ ಹೆಚ್ಚಿಸುವ ಪ್ಲಾನ್ ಮಾಡಲಾಗಿದೆ. ಯುಎಸ್,ನೆದರ್ ಲ್ಯಾಂಡ್, ಜರ್ಮನಿ, ಯುಕೆ, ಫ್ರಾನ್ಸ್ ದೇಶಗಳಿಗೆ ಮೈಸೂರು ಭಾಗದಿಂದ ಕೈಮಗ್ಗ,ಜವಳಿ ವಸ್ತುಗಳು ರಫ್ತಾಗುತ್ತಿವೆ. ಟೆಕ್ನಿಕಲ್ ಟೆಕ್ಸ್ಟೈಲ್ನಿಂದ ಶೇ.45, ಗಾರ್ಮೆಂಟ್ಸ್ನಿAದ ಶೇ.30,ಫ್ಯಾಬ್ರಿಕ್ಸ್ನಿಂದ ಶೇ.15,ಹೋಮ್ ಟೆಕ್ಸ್ಟೈಲ್ಸ್ನಿಂದ ಶೇ.10ರಷ್ಟು ರಫುö್ತ ಮಾಡುವುದಕ್ಕೆ ಗುರಿ ಇಟ್ಟುಕೊಳ್ಳಲಾಗಿದೆ ಎಂದು ನುಡಿದರು.
ಸಮಾರಂಭವವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಜಿ.ಲಕ್ಷಿ÷್ಮಕಾಂತ್ ರೆಡ್ಡಿ ಮಾತನಾಡಿ, ದೇಶದಲ್ಲಿ ಅತಿ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಕ್ಷೇತ್ರ ಜವಳಿ ಕ್ಷೇತ್ರವಾಗಿದೆ. ಈ ವಲಯಕ್ಕೆ ಕಾರ್ಮಿಕರು ಬೇಕಿರುವಷ್ಟು ಬೇರೆ ಉದ್ಯಮಕ್ಕೆ ಬೇಕಿಲ್ಲ ಎಂದರು. ಬಾಂಗ್ಲಾದೇಶ,ವಿಯೆಟ್ನಾA ದೇಶಗಳು ಜವಳಿ ಕ್ಷೇತ್ರದಿಂದಲೇ ಬೇರೆ ದೇಶಗಳಿಗೆ ಹೆಚ್ಚಿನ ಉತ್ಪನ್ನಗಳನ್ನು ರಫುö್ತ ಮಾಡುತ್ತಿದೆ. ಮೈಸೂರು ಜಿಲ್ಲೆಯಲ್ಲಿ 100 ಬಿಲಿಯನ್ ಡಾಲರ್ ರಫುö್ತ ಮಾಡುವುದಕ್ಕೆ ಗುರಿ ತಲುಪಲು ಜಿಲ್ಲಾಡಳಿತ ಎಲ್ಲಾ ನೆರವನ್ನು ನೀಡಲಿದೆ ಎಂದು ಆಶ್ವಾಸನೆ ನೀಡಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್, ಕೈಮಗ್ಗ ಮತ್ತು ಜವಳಿ ಇಲಾಖೆ ದಕ್ಷಿಣವಿಭಾಗದ ಜಂಟಿ ನಿರ್ದೇಶಕ ಬಿ.ಆರ್.ಯೋಗೀಶ್, ಮೈಸೂರು ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ಅಧ್ಯಕ್ಷ ಕೆ.ಬಿ.ಲಿಂಗರಾಜು, ಕೇಂದ್ರೀಯ ರೇಷ್ಮೆ ಸಂಶೋಧನಾ ಮಂಡಳಿಯ ಶ್ರೀದೇವಿ ಮತ್ತಿತರರು ಹಾಜರಿದ್ದರು. ಅಂತಾರಾಷ್ಟಿçÃಯ ವ್ಯಾಪಾರ ಮತ್ತು ಸಾಂಸ್ಥಿಕ ವ್ಯವಸ್ಥೆ, ಮೈಸೂರು ಜಿಲ್ಲೆಯ ರಫುö್ತ ವಹಿವಾಟು, ಎಇಪಿಸಿ,ಭಾರತದಲ್ಲಿನ ರಫುö್ತ ಉತ್ತೇಜನ ಮಂಡಳಿ ಮತ್ತು ನೀಡಲಾಗುವ ಸೇವೆಗಳು, ವಿದೇಶಿ ವ್ಯಾಪಾರ ನೀತಿ ಮತ್ತು ಕಾರ್ಯ ವಿಧಾನಗಳ ಒಂದು ನೋಟ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.