Skip to main content

3Kaala News

ಸುಭಾಷಿತ 

ಬದುಕೆಂಬುದು ಚೈನಿನ ಸರಪಳಿ ಇದ್ದ ಹಾಗೆ. ಪ್ರತಿಕೊಂಡಿಯೂ ಗಟ್ಟಿಯಾಗಿರಬೇಕು. ಕೊಂಡಿಗಳ ನಡುವೆ ಬಿರುಕು ಬಿಟ್ಟಾಗ ಗಟ್ಟಿಯಾದ ಬೆಸುಗೆಗಳನ್ನು ನಿರಂತರವಾಗಿ ಹಾಕುತ್ತಿರಬೇಕು. ನಮ್ಮ ದೌರ್ಬಲ್ಯಗಳನ್ನು ಮೆಟ್ಟಿನಿಂತು; ಆದಮ್ಯ ಆತ್ಮವಿಶ್ವಾಸದಿಂದ ನಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ನಂಜನಗೂಡಿನ ಶ್ರೀ ನಂಜು0ಡೇಶ್ವರ ದೇವಾಲಯದಲ್ಲಿ ಸ್ನೇಹಿತರ ಸಮಾಗಮ ಮತ್ತು ಸಮ್ಮಿಲನ ಕಾರ್ಯಕ್ರಮ.


ನಮ್ಮ ಸ್ನೇಹಕ್ಕೆ 20 ವರುಷ, ತಂದಿತು 40 ರಲ್ಲಿ ಹರುಷ.
ನಂಜನಗೂಡು;
ಸೋಮಹಳ್ಳಿ ಶ್ರೀ ಗಂಗಾಧರೇಶ್ವರ ಡಿ.ಎಡ್ ಕಾಲೇಜಿನಲ್ಲಿ 2005-06 ಸಾಲಿನಲ್ಲಿ ಪ್ರಥಮ ಬ್ಯಾಚ್ ನಲ್ಲಿ ಪ್ರಶಿಕ್ಷಣ ತರಬೇತಿ ಪಡೆದ ಎಲ್ಲಾ ಸ್ನೇಹಿತರು ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಸಮಾಗಮಗೊಂಡರು. ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರಾಂಶುಪಾಲರಾಗಿದ್ದ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, 20 ವರ್ಷಗಳ ಹಿಂದಿನ ಸವಿ ಸವಿ ನೆನಪು ನೀಡಿದೆ. ಅಂದಿನ ದಿನಗಳನ್ನು ಮೆಲುಕು ಹಾಕಿ, ಮತ್ತೊಮ್ಮೆ ಆ ಕಾಲೇಜಿನ ದಿನಗಳಿಗೆ ಜಾರಿದ್ದವೆ. ಬದುಕಿನ ಜಂಜಾಟದಿAದ ಹೊರಬಂದು ನಕ್ಕಿ ನಲಿದಿದ್ದೇವೆ ಮನಸ್ಸು ಹಗುರವಾಯಿತು ಎಂದು ಅನುಭವದ ಮನದಾಳ ನುಡಿಗಳನ್ನು ಹಂಚಿಕೊAಡರು.
ಅಲ್ಲಿ ತರಬೇತಿ ಪಡೆದ 20ಕ್ಕೂ ಹೆಚ್ಚು ಮಂದಿ ಸರ್ಕಾರಿ ಹುದ್ದೆಯಲ್ಲಿ, ಇನ್ನು ಕೆಲವರು ಶಿಕ್ಷಕರಾಗಿ ಖಾಸಗಿ ಸಂಸ್ಥೆಗಳಲ್ಲಿ ಮತ್ತು ಕೆಲವರು ಉತ್ತಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಇದರ ನೇರ ನಿದರ್ಶನಕ್ಕೆ ಈ ಸಮಾಗಮವೇ ಸಾಕು.. ತಮ್ಮ ಹುದ್ದೆ, ತಮ್ಮ ಸ್ಥಾನಮಾನ, ಎಲ್ಲವನ್ನು ಮರೆತು ಎಲ್ಲರಲ್ಲೂ ಒಬ್ಬರಾಗಿ ಪ್ರತಿಯೊಬ್ಬರು ಬೆಸೆದುಕೊಂಡ ಸ್ನೇಹದ ಬೆಸುಗೆ ಸುಂದರ.. ಸುಮಧುರ.. ಮನೋಹರ.. “ಸ್ನೇಹ ಅತಿ ಮಧುರ, ಸ್ನೇಹ ಅದು ಅಮರ”…
ನಮ್ಮೀ…ಸ್ನೇಹಕ್ಕೆ……
ಮಾಸದಿರಲಿ ವೈಮನಸ್ಸಿನ ಬೇಗೆ.
ಸ್ನೇಹ ಮೊಗದಲ್ಲಿ ನಗೆ..
ಹೊಳೆಯಲಿ ಹುಣ್ಣಿಮೆ ಚಂದ್ರನ ಹಾಗೆ..
ನಮ್ಮೇಲ್ಲರ ಈ ಸ್ನೇಹದ ಬೆಸುಗೆ..
ಇರಲೀ ಎಂದೆAದಿಗೂ ಹೀಗೆ ಇರಲಿ ಎಂದು ಪ್ರಶಿಕ್ಷಣಾರ್ಥಿಯಾದ ಮಹದೇವ ಪ್ರಸಾದ್ ಅವರು ಕವನವನ್ನು ಹೇಳಿ ಮಾತನಾಡಿದರು.
ಪ್ರಶಿಕ್ಷಣಾರ್ಥಿಗಳಾಗಿದ್ದ ಗಿರೀಶ್ ಕುಮಾರ್ ಡಿ ಬಿ, ಜ್ಯೋತಿಪ್ರಸಾದ್, ಶಿವರಾಮು ಸತೀಶ್, ದೇವಿರಮ್ಮ, ಸೋಮೇಶ್ವರಿ ತಮ್ಮ ಅನುಭವವನ್ನು ಹಂಚಿಕೊAಡರು. ಬೇರೆ ಬೇರೆ ಜಿಲ್ಲೆಗಳಿಂದ 40ಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳು ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.