Skip to main content

3Kaala News

ಸುಭಾಷಿತ 

ಬದುಕೆಂಬುದು ಚೈನಿನ ಸರಪಳಿ ಇದ್ದ ಹಾಗೆ. ಪ್ರತಿಕೊಂಡಿಯೂ ಗಟ್ಟಿಯಾಗಿರಬೇಕು. ಕೊಂಡಿಗಳ ನಡುವೆ ಬಿರುಕು ಬಿಟ್ಟಾಗ ಗಟ್ಟಿಯಾದ ಬೆಸುಗೆಗಳನ್ನು ನಿರಂತರವಾಗಿ ಹಾಕುತ್ತಿರಬೇಕು. ನಮ್ಮ ದೌರ್ಬಲ್ಯಗಳನ್ನು ಮೆಟ್ಟಿನಿಂತು; ಆದಮ್ಯ ಆತ್ಮವಿಶ್ವಾಸದಿಂದ ನಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ವೀರನಹೊಸಳ್ಳಿ ವಲಯ ವ್ಯಾಪ್ತಿಯಲ್ಲಿ ಇಬ್ಬರ ಮೇಲೆ ದಾಳಿ ನಡೆಸಿದ್ದ ಕರಡಿ ಕರಡಿ ಸೆರೆನಿಟ್ಟುಸಿರು ಬಿಟ್ಟ ಚಾಕಹಳ್ಳಿ, ಚಕ್ಕೋಡನಹಳ್ಳಿ ಗ್ರಾಮಸ್ಥರು


ಎಚ್.ಡಿ.ಕೋಟೆ; ತಾಲೂಕಿನ ವೀರನಹೊಸಹಳ್ಳಿ ಅರಣ್ಯ ವಲಯ ವ್ಯಾಪ್ತಿಯಲ್ಲಿ ಕರಡಿಯೊಂದು ಇಬ್ಬರ ಮೇಲೆ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ನಡೆದಿದೆ. ಗಾಯಾಳುಗಳನ್ನು ಚಾಕಹಳ್ಳಿ ಗ್ರಾಮದ ನಿವಾಸಿ ನಾರಾಯಣ್ ನಾಯಕ್ (60) ಹಾಗೂ ಚಕ್ಕೋಡನಹಳ್ಳಿ ಗ್ರಾಮದ ಮರಿಗೌಡ (ಶಿವಪ್ಪ) ಗಾಯಗೊಂಡವರಾಗಿದ್ದು, ಅವರನ್ನು ಎಚ್.ಡಿ.ಕೋಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಚ್.ಡಿ. ತಾಲೂಕಿನ ಚಾಕಹಳ್ಳಿ ಗ್ರಾಮದ ಹುಚ್ಚನಾಯಕ ಪುತ್ರ ನಾರಾಯಣ ನಾಯಕ್ ಎಂಬುವವರು, ತಮ್ಮ ಮೊಮ್ಮಗನ ಜೊತೆ ಬಹಿರ್ದೆಸೆಗೆ ತೆರಳುತ್ತಿದ್ದಾಗ, ಮೇಟಿಕುಪ್ಪೆ ಅರಣ್ಯ ವಲಯದಿಂದ ಬಂದ ಕರಡಿ ದಾಳಿ ಮಾಡಿದೆ. ಕೈಗೆ ಕಚ್ಚಿ ಗಾಯಗೊಳಿಸಿದೆ. ತಕ್ಷಣವೇ ಅರಣ್ಯ ಅಧಿಕಾರಿಗಳು ನಾರಾಯಣ ನಾಯಕ್ ಅವರನ್ನು ಎಚ್.ಡಿ.ಕೋಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಮೊಮ್ಮಗ ಕರಡಿ ದಾಳಿಯಿಂದ ಬಚಾವ್ ಆಗಿದ್ದಾನೆ. ಬಳಿಕ ಹೆಚ್ ಡಿ ಕೋಟೆ ವಲಯ ಅರಣ್ಯಾಧಿಕಾರಿ ರಾಮಾಂಜುನೇಯಲು ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿ ಮೇಟಿಕುಪ್ಪೆ ಅರಣ್ಯ ವಲಯದಿಂದ ಬೋನ್ ತಂದಿಟ್ಟು , ಕೂಬಿಂಗ್ ಶುರು ಮಾಡಿದ್ದಾರೆ.
ಅಲ್ಲಿಂದ ತಪ್ಪಿಸಿಕೊಂಡು ಬಂದ ಕರಡಿ, ಚಕ್ಕೋಡನಹಳ್ಳಿ ಗ್ರಾಮದ ತಿಮ್ಮೇಗೌಡ ಪುತ್ರ ಮರಿಗೌಡ( ಶಿವಪ್ಪ) ಎಂಬುವವರು ವೀರನಹೊಸಹಳ್ಳಿ ವ್ಯಾಪ್ತಿಯ ವಲಯದ ಪೊದೆಯೊಂದರಲ್ಲಿ ಮೇಕೆಗಳಿಗೆ ಸೊಪುö್ಪ ಕೀಳುತ್ತಿದ್ದಾಗ ಏಕಾಏಕಿ ದಾಳಿ ಮಾಡಿದೆ. ಕುತ್ತಿಗೆ, ಹೊಟ್ಟೆ ಪಕ್ಕೆಲುಗೆ ಕಚ್ಚಿ,ಪರಚಿ ಗಂಭೀರ ಗಾಯಗೊಳಿಸಿದೆ. ಅರಣ್ಯ ಸಿಬ್ಬಂದಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು ಕರಡಿಯನ್ನು ಸೆರೆಹಿಡಿದು, ಅರಣ್ಯಗೆ ಬಿಟ್ಟಿದ್ದಾರೆ.
ಕೂಬಿಂಗ್ ವೇಳೆ ಅರಣ್ಯ ಅಧಿಕಾರಿಗಳಾದ ರಾಮಾಂಜುನೇಯಲು, ವಿನೋದ್ ಗೌಡ, ರಶ್ಮಿ ಸೇರಿಡ್ನಾತೆ ಅರಣ್ಯ ಸಿಬ್ಬಂದಿ ಇದ್ದರು.