Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಜಾನಕಿ ಅವರ ಸ್ಮಾರಕವನ್ನು ರಾಜ್ಯ ಸರ್ಕಾರ ನಿರ್ಮಿಸಬೇಕು; ಹಂಸಲೇಖ


*ಪರಿಪೂರ್ಣ ಗಾಯನ, ಸಂಪೂರ್ಣ ಜೀವನ
ಮೈಸೂರು
; ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಹಲೋಕ ತ್ಯಜಿಸಿರುವ ಖ್ಯಾತ ಬಹುಭಾಷ ಗಾಯಕಿ ಎಸ್.ಜಾನಕಿಯವರ ಸ್ಮಾರಕವನ್ನು ಮೈಸೂರಿನಲ್ಲಿಯೇ ರಾಜ್ಯ ಸರ್ಕಾರ ನಿರ್ಮಿಸಬೇಕು ಎಂದು ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಒತ್ತಾಯಿಸಿದರು.
ಭಾನುವಾರ ನಗರದ ಮಹಾರಾಜ ಕಾಲ್ಭೆಜ್ ಮೈದಾನದಲ್ಲಿ ಎಸ್.ಜಾನಕಿಯವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಭಾವಪೂರ್ಣ ನಮನ ಸಲ್ಲಿಸಿ, ಕುಟುಂಬದವರಿಗೆ ಸಾಂತ್ವಾನ ಹೇಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಜಾನಕಿ ಅಂದರೆ ನಮಗೆ ಸೀತೆ, ಸೀತೆ ಎಂದರೆ ನಮಗೆ ಗೀತೆ. ಅವರ ಕೊನೆಯ ಆಸೆ ಕರುನಾಡಿನಲ್ಲೇ ಇರುವುದಾಗಿತ್ತು. ಹಾಗಾಗಿಯೇ ಜಾನಕಿ ಅಮ್ಮ ಕರುನಾಡಿನ ಮಣ್ಣಲ್ಲಿ ಕಣ್ಣು ಮುಚ್ಚಿದ್ದಾರೆ. ಅವರಿಗಾಗಿ ಕರುನಾಡ ಜನ ಈಗ ಕಣ್ಣು ತೆರೆಯಬೇಕು ಮತ್ತು ಸ್ಮಾರಕ ನಿರ್ಮಾಣಕ್ಕೆ ಕೈಜೋಡಿಸಬೇಕು ಗಾಯಕಿ ಎಸ್. ಜಾನಕಿ ಅವರ ನೆನಪನ್ನು ಶಾಶ್ವತವಾಗಿ ಉಳಿಸಲು ಮೈಸೂರಿನಲ್ಲಿ ಭವ್ಯ ಸ್ಮಾರಕ ನಿರ್ಮಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಜಾನಕಮ್ಮ ಅವರದ್ದು ಅತ್ಯಂತ ಪರಿಪೂರ್ಣವಾದ ಜೀವನ. ಅವರು ದೊಡ್ಡ ದೈವಭಕ್ತೆ ಹಾಗೂ ಎಲ್ಲಾ ಭಾಷೆ, ಧರ್ಮಗಳನ್ನು ಸಮಾನವಾಗಿ ಪ್ರೀತಿಸುತ್ತಿದ್ದರು. ಅವರ ಪ್ರಿಯ ಶಿಷ್ಯ ಒಪ್ಪಿಗೆ ನೀಡಿದರೆ ಜಾನಕಮ್ಮ ಅವರ ಹೆಸರಿನಲ್ಲಿ ಒಂದು ಭವ್ಯ ಸಂಗೀತ ಮೆಮೋರಿಯಲ್’ (ಸ್ಮಾರಕ) ನಿರ್ಮಾಣ ಮಾಡುತ್ತೇವೆ. ಈ ಕಾರ್ಯಕ್ಕೆ ಸರ್ಕಾರ ಕೂಡ ಕೈಜೋಡಿಸಬೇಕು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಯತೀಂದ್ರ ಸಿದ್ದರಾಮಯ್ಯ ದೇವರ ಭಕ್ತರು, ಸಂಗೀತವೇ ದೇವರಿಗೆ ಪ್ರಿಯವಾಗಿರುವುದರಿಂದ, ಅವರು ತಕ್ಷಣವೇ ಜಾಗ ಗುರುತಿಸಿ ಸ್ಮಾರಕ ನಿರ್ಮಾಣದ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಮನವಿ ಮಾಡಿದರು