
ಮೈಸೂರು; ಕೆಆರ್ ಕ್ಷೇತ್ರದ ವಾರ್ಡ್ ನಂಬರ್ 63 ರಲ್ಲಿ ಬರುವ ನವೋದಯ ಬಡಾವಣೆಯ ಕಾಲೋನಿಯಲ್ಲಿ 25-26 ನೇ ಸಾಲಿನ ಪ್ರಗತಿ ಕಾಲೋನಿ ಯೋಜನೆ ಅಡಿಯಲ್ಲಿ 200 ಲಕ್ಷ ರೂಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಟಿ.ಎಸ್ ಶ್ರೀವತ್ಸ ರವರು ಗುದ್ದಲಿ ಪೂಜೆ ಮಾಡಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯರಾದ ಶಾರದಮ್ಮ ಈಶ್ವರ್, ದೇವರಾಜೇಗೌಡ, ವೆಂಕಟೇಶ್, ಹರ್ಷ, ಅಕ್ಷಯ್, ಪ್ರದೀಪ್ ಕುಮಾರ್, ಕಿಶೋರ್, ಶಾಸಕರ ಆಪ್ತ ಸಹಾಯಕ ಆದಿತ್ಯ, ಕಾಲೋನಿಯ ಯಜಮಾನರು, ಸ್ಥಳೀಯ ಮುಖಂಡರು ಹಾಗೂ ಕೆ ಆರ್ ಡಿ ಎಲ್ ಅಧಿಕಾರಿಗಳಾದ ಅರ್ಚನಾ, ಹುಸೇನ್ ಮುಂತಾದವರು ಇದ್ದರು.