Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಆಸ್ಟ್ರೇಲಿಯಾದಲ್ಲಿ ಮೊಳಗಿದ ಮೊಳಗಿದ ಕನ್ನಡದ ಕನ್ನಡ ಡಿಂಡಿಮ

ಆಸ್ಟ್ರೇಲಿಯಾದಲ್ಲಿ ಮೊಳಗಿದ ಮೊಳಗಿದ ಕನ್ನಡದ ಕನ್ನಡ ಡಿಂಡಿಮ

ಪರ್ತ್:
ಮೂರು ಮಹಾಸಾಗರ ಗಳು, ಅನೇಕ ಸಮುದ್ರಗಳ ಮಧ್ಯದಲ್ಲಿರುವ ಆಸ್ಟ್ರೇಲಿಯಾ ದೇಶದಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ತಾಯ್ನಾಡನ್ನು ಮರೆತಿಲ್ಲ. ಪ್ರತೀ ರಾಜ್ಯದಲ್ಲೂ ಕನ್ನಡ ಸಂಘಗಳನ್ನು ಕಟ್ಟಿಕೊಂಡು ಅನೇಕ ವರ್ಷಗಳಿಂದ ಕನ್ನಡ ನಾಡು, ನುಡಿ, ಸಾಹಿತ್ಯ ಮತ್ತು ಸಂಗೀತದ ಪ್ರಸಾರ ಮಾಡುತಿದ್ದಾರೆ.ಅವರ ನಾಡು ನುಡಿಯ ಪ್ರೀತಿಗೆ ಬೆಲೆ ಕಟ್ಟಲಾಗದು. ಕರ್ನಾಟಕದಲ್ಲಿ ಆಚರಿಸುವ ಹಬ್ಬಗಳು, ಸಾಂಸ್ಕೃತಿಕ ಸಮ್ಮೇಳನಗಳು ಮತ್ತು ಸಮಾವೇಶಗಳನ್ನು ಆಸ್ಟ್ರೇಲಿಯಾದಲ್ಲಿಯೂ ಸಹ ಕನ್ನಡಿಗರು ಆಚರಿಸುತ್ತಾರೆ. ಅವರ ಸಾಂಸ್ಕೃತಿಕ ಐಕ್ಯಮತ್ಯ ಅನನ್ಯವಾದುದು.
ವೆಸ್ಟರ್ನ್ ಆಸ್ಟ್ರೇಲಿಯಾ ಸ್ಟೇಟ್ ಆಸ್ಟ್ರೇಲಿಯಾದ ಆ ದೇಶದ ವಿಶಾಲವಾದ ರಾಜ್ಯ. ಕಳೆದ ಹದಿನಾರು ವರ್ಷಗಳಿಂದ ಈ ರಾಜ್ಯದಲ್ಲಿರುವ ಕನ್ನಡಿಗರು ವೆಸ್ಟರ್ನ್ ಆಸ್ಟ್ರೇಲಿಯಾ ಕನ್ನಡ ಸಂಘ ಎಂಬ ಸಂಸ್ಥೆ ಕಟ್ಟಿಕೊಂಡು ಪ್ರತಿವರ್ಷ ಕನ್ನಡಿಗರ ಹಬ್ಬಗಳು ಮತ್ತು ರಾಜ್ಯೋತ್ಸವ ಮತ್ತು ಸಾಂಸ್ಕೃತಿಕ ಸಮ್ಮೇಳನಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಇದೇ ಜುಲೈ 18 ರಂದು ಈ ಕನ್ನಡ ಸಂಘ ರಾಜಧಾನಿ ಪರ್ತ್ ನಲ್ಲಿ ತಮ್ಮ 17ನೇ ವರ್ಷದ ವಾರ್ಷಿಕೋತ್ಸವ ಸಂಘಟಿಸಿತ್ತು. ಪರ್ತ್ ನ ಅತ್ಯಾಧುನಿಕ ಇಂಡಿಯನ್ ಕಮ್ಯುನಿಟಿ ಸೆಂಟರ್ ನಲ್ಲಿ ನಡೆದ ಹಾಸ್ಯ ಗಾನೋತ್ಸವ ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಖ್ಯಾತ ಜಾನಪದ ಕಲಾವಿದರಾದ ಡಾ ಕಾ ರಾಮೇಶ್ವರಪ್ಪ, ಜನಪ್ರಿಯ ಹಾಸ್ಯ ಕಲಾವಿದರಾದ ಗೋಪಿ, ಖ್ಯಾತ ಹಿನ್ನೆಲೆ ಗಾಯಕಿ ಸಿಂಚನ್ ದೀಕ್ಷಿತ್ ಅವರುಗಳನ್ನು ಆಹ್ವಾನಿಸಲಾಗಿತ್ತು.

ಆಸ್ಟ್ರೇಲಿಯಾದಲ್ಲಿ ಧರೆಗೆ ದೊಡ್ಡವರ ಕಂಡಾಗ ಮೆರವಣಿಗೆ
ಅಮೇರಿಕಾದ ವರ್ಜೀನಿಯಾ ಮತ್ತು ಮೇರಿಲ್ಯಾಂಡ್ ರಾಜ್ಯಗಳಲ್ಲಿರುವ ರಿಚ್ಮಂಡ್ ಕನ್ನಡ ಸಂಘ ಮತ್ತು ಕಾವೇರಿ ಕನ್ನಡ ಸಂಘಗಳು ಇದೇ ಏಪ್ರಿಲ್ 18 ಮತ್ತು ಮೇ 2 ರಂದು ಆಚರಿಸಿದ ಉಗಾದಿ ಹಬ್ಬದ ಉತ್ಸವಗಳಿಗೆ ನಾಡಿನ ಹೆಸರಾಂತ ಜಾನಪದ ಕಲಾವಿದರಾದ ಡಾ ಕಾ ರಾಮೇಶ್ವರಪ್ಪ ಅವರನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಲಾಗಿತ್ತು. ಕನ್ನಡ ಜಾನಪದದ ಸಂರಕ್ಷಣೆ ಮತ್ತು ಪ್ರಸಾರಕ್ಕೆ ನಾಲ್ಕು ದಶಕಗಳಿಂದ ಅವಿರತ ಹೋರಾಟ ಮಾಡುತ್ತಿರುವ ಡಾ ಕಾ ರಾಮೇಶ್ವರಪ್ಪ ಅವರು ಅಮೇರಿಕಾದಲ್ಲಿರುವ ಆಸಕ್ತರಿಗೆ ಜನಪದ ಸಂಗೀತ ಕಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮೈಸೂರಿನಲ್ಲಿರುವ ತಮ್ಮ ಇನಿದನಿ ಮಣ್ಣ ಮಕ್ಕಳ ಹೊನ್ನ ಪದಗಳ ಬಳಗದಂತೆ ಅಮೇರಿಕಾದಲ್ಲಿ ಇನಿದನಿ ಇಂಟರ್ನ್ಯಾಷನಲ್ ಎಂಬ ತಂಡ ಬೆಳೆಸುತ್ತಿದ್ದಾರೆ. ಇದೀಗ ಸಂಪನ್ನಗೊಂಡಿರುವ ರಿಚ್ಮಂಡ್ ಕನ್ನಡ ಸಂಘ ಮತ್ತು ಕಾವೇರಿ ಕನ್ನಡ ಸಂಘದ ಉಗಾದಿ ಉತ್ಸವಗಳಲ್ಲಿ ಕನ್ನಡ ಜಾನಪದದ ಬಗ್ಗೆ ಮಾತನಾಡಿದ್ದಾರೆ. ಕನ್ನಡ ಜನಪದ ಸಂಗೀತದ ವೈಶಿಷ್ಟ್ಯಗಳನ್ನು ವಿವರಿಸಿದ್ದಾರೆ. ಏಪ್ರಿಲ್ 18 ರಂದು ರಿಚ್ಮಂಡ್ ನಲ್ಲಿ ಮತ್ತು ಮೇ 2 ರಂದು ವಾಷಿಂಗ್ಟನ್ ನಲ್ಲಿ ನಡೆದ ಉಗಾದಿ ಹಬ್ಬದ ಉತ್ಸವದಲ್ಲಿ ನಮ್ಮ ಹೆಮ್ಮೆಯ ಜನಪದ ಮಹಾಕಾವ್ಯಗಳಾದ ಮಲೆ ಮಹದೇಶ್ವರರ ಕಾವ್ಯ, ಮಂಟೇಸ್ವಾಮಿ ಕಾವ್ಯ, ಚಾಮುಂಡೇಶ್ವರಿ ಕಾವ್ಯಗಳಲ್ಲಿ ಬರುವ ಸಾಲುಗಳು ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ಬೆಳೆದುಕೊಂಡು ಬಂದಿರುವ ಜನಪದ ಗೀತೆಗಳನ್ನು ಇನಿದನಿ ಇಂಟರ್ನ್ಯಾಷನಲ್ ತಂಡ ಪ್ರಸ್ತುತ ಪಡಿಸಿದೆ. ವಿಶೇಷವೆಂದರೆ ಡಾ ಕಾ ರಾಮೇಶ್ವರಪ್ಪ ಅವರ ಕಲಾತಂಡ ಕರ್ನಾಟಕದಲ್ಲಿ ಪ್ರಸ್ತುತಪಡಿಸುವ ಹಾಡಿನ ಜೊತೆಗಿನ ಮೈಸೂರು ಪ್ರಾಂತ್ಯದ ವೀರ ಮಕ್ಕಳ ಕುಣಿತಕ್ಕೆ ಅಮೇರಿಗನ್ನಡಿಗರು ಮೈಮರೆತು ಕುಣಿದು ನಲಿದರೆಂಬುದು ಹೆಮ್ಮೆಯ ವಿಷಯ. ಈ ಎರಡೂ ಉಗಾದಿ ಉತ್ಸವಗಳಲ್ಲಿ ಕನ್ನಡ ಜಾನಪದದ ಝೇಂಕಾರ ಮೊಳಗಿರುವುದು ಸಂತಸದ ವಿಷಯ. ಕನ್ನಡ ಜನಪದ ಸಂಗೀತದ ಇಂಥ ವೈವಿಧ್ಯಮಯವಾದ ಕಾರ್ಯಕ್ರಮ ಪ್ರಸ್ತುತಪಡಿಸುವ ಡಾ ಕಾ ರಾಮೇಶ್ವರಪ್ಪ ಅವರಿಗೆ ಎರಡೂ ಕನ್ನಡ ಸಂಘಗಳು ಸ್ಮರಣಿಕೆ ನೀಡಿ ಅಭಿನಂದಿಸಿ ಗೌರವಿಸಿರುತ್ತವೆ.
ಅಮೇರಿಕಾದಲ್ಲಿ ಇನಿದನಿ ಇಂಟರ್ನ್ಯಾಷನಲ್ ಕಲಾತಂಡ ಕಟ್ಟಲು ಪ್ರೋತ್ಸಾಹ ನೀಡುತ್ತಿರುವ ಅಕ್ಕ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಅಮರನಾಥ ಗೌಡರು ಮತ್ತು ಕಲಾ ತಂಡದ ಸಂಘಟಕರಾದ ಶ್ರೀ ಮಾದೇಶ್ ಬಸವರಾಜ್ ಮತ್ತು ಪ್ರೋತ್ಸಾಹ ನೀಡುತ್ತಿರುವ ಅಕ್ಕ ಸಂಸ್ಥೆ ಮತ್ತು ನಾವಿಕ ಸಂಸ್ಥಗಳು ಹಾಗೂ ವಿವಿಧ ಕನ್ನಡ ಸಂಘಟನೆಗಳಿಗೆ ಡಾ ಕಾ ರಾಮೇಶ್ವರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.
ಅಮೇರಿಕಾದಲ್ಲಿ ನೆಲೆಸಿರುವ ಮಾದೇಶ್ ಬಸವರಾಜ್, ಸೌಮ್ಯ ಚಿಕ್ಕಮಗಳೂರು, ರಘು ಹಾಲೂರು, ಸ್ಮಿತಾ ಎಸ್ತರ್ ಮುಂತಾದವರು ಇನಿದನಿ ಇಂಟರ್ನ್ಯಾಷನಲ್ ಜಾನಪದ ತಂಡದ ಕಲಾವಿದರಾಗಿ ಅಮೋಘ ಪ್ರದರ್ಶನ ನೀಡಿ ಕನ್ನಡಿಗರ ಮನ ಗೆದ್ದಿದ್ದಾರೆ. ಈ ಎರಡೂ ಉತ್ಸವಗಳನ್ನು ಚಿಕ್ಕಮಗಳೂರಿನವರಾದ ರಿಚ್ಮಂಡ್ ನಿವಾಸಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಕಲಾವಿದೆ ಶ್ರೀಮತಿ ಸೌಮ್ಯ ಚಿಕ್ಕಮಗಳೂರು ಸಂಘಟಿಸಿ ಮೆಚ್ಚುಗೆ ಗಳಿಸಿದ್ದಾರೆ. ಇನಿದನಿ ಕಲಾ ಬಳಗ ಪ್ರಸ್ತುತಪಡಿಸಿದ ಜನಪದ ಝೇಂಕಾರ ಕಾರ್ಯಕ್ರಮಕ್ಕೆ ಅಮೇರಿಕಾದಲ್ಲಿರುವ ಅನ್ಯ ಭಾಷಿಕ ವಾದ್ಯಗಾರರನ್ನು ಡಾ ಕಾ ರಾಮೇಶ್ವರಪ್ಪ ಸಿದ್ದಪಡಿಸಿಕೊಂಡಿರುವುದು ಮತ್ತೊಂದು ವಿಶೇಷವಾಗಿದೆ.
ಅಮೇರಿಕಾದಲ್ಲಿ ನಡೆದ ಉಗಾದಿ ಹಬ್ಬದ ಉತ್ಸವಗಳಿಗೆ ಜಾನಪದ ಕಾರ್ಯಕ್ರಮಗಳನ್ನೆ ಆಯ್ಕೆ ಮಾಡಿಕೊಂಡಿರುವ ರಿಚ್ಮಂಡ್ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಸುದರ್ಶನ್ ಮಾಗಡಿ, ಕಾರ್ಯದರ್ಶಿ ಶ್ರೀಮತಿ ಶ್ವೇತಾ ಪ್ರಸಾದ್ ಹಾಗೂ ಆಡಳಿತ ಮಂಡಳಿಯ ಸದಸ್ಯರಿಗೆ ಮತ್ತು ವಾಷಿಂಗ್ಟನ್ ಕಾವೇರಿ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಮೋಹನ್ ವೆಂಕೋಬರಾವ್, ಕಾರ್ಯದರ್ಶಿ ಶ್ರೀಮತಿ ಪ್ರತಿಮಾ ಮೂರ್ತಿಹಾಗೂ ಆಡಳಿತ ಮಂಡಳಿಯ ಸದಸ್ಯರಿಗೆ ಮತ್ತು ಉತ್ಸವಗಳಲ್ಲಿ ಹಾಡಿ ಕುಣಿದು ಕುಪ್ಪಳಿಸಿ ಝೇಂಕರಿಸಿದ ಅಮೇರಿಗನ್ನಡಿಗರಿಗೆ ಡಾ ಕಾ ರಾಮೇಶ್ವರಪ್ಪ ತಮ್ಮ ಆಭಾರಿತ್ವ ಪ್ರಕಟಿಸಿದ್ದಾರೆ.
ಇದೇ ಸಂದರ್ಭದಲ್ಲಿ ಡಾ ಕಾ ರಾಮೇಶ್ವರಪ್ಪ ಅವರು ತಮ್ಮ ಕನ್ನಡಿಗ ಮಿತ್ರರೊಂದಿಗೆ ಹೆಮ್ಮೆಯ ಶ್ರೀ ಸುತ್ತೂರು ಮಹಾ ಸಂಸ್ಥಾನ ಮಠ ಅಮೇರಿಕಾದ ಮೇರಿಲ್ಯಾಂಡ್ ರಾಜ್ಯದ ಗೇದರ್ಸ್ಬರ್ಗ್ ನಲ್ಲಿ ಸ್ಥಾಪಿಸಿರುವ ಜೆಎಸ್ಎಸ್ ಸ್ಪಿರಿಚ್ಯುವಲ್ ಮಿಷನ್ ಗೆ ಭೇಟಿ ನೀಡಿ ಶ್ರೀ ಮಠವು ನಿರ್ಮಿಸುತ್ತಿರುವ ದೇವಾಲಯಗಳು, ಕಲಾ ಶಾಲೆಗಳು, ಪ್ರವಚನ ಸಭಾಂಗಣ ಮತ್ತು ಪ್ರಸಾದ ವ್ಯವಸ್ಥೆಗಳನ್ನು ವೀಕ್ಷಿಸಿ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರಿಗೆ ಗೌರವಪೂರ್ವಕವಾಗಿ ವಂದನೆ ಸಲ್ಲಿಸಿದ್ದಾರೆ. ಅಮೇರಿಕಾದಲ್ಲಿರುವ ಕನ್ನಡ ಸಂಘಗಳ ಕಾರ್ಯಕ್ರಮಗಳಿಗೆ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಪ್ರೋತ್ಸಾಹ ಮತ್ತು ಬೆಂಬಲ ನೀಡಬೇಕೆಂದು ಸಹ ಡಾ ಕಾ ರಾಮೇಶ್ವರಪ್ಪ ಕೋರಿದ್ದಾರೆ.