Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಪ್ರಸ್ತುತ ಭಾರತದ ಯುವಶಕ್ತಿಯಿಂದಾಗಿಯೇ ಭಾರತದ ಅರ್ಥವ್ಯವಸ್ಥೆಯು ಅತ್ಯಂತ ವೇಗವಾಗಿ ಬೆಳೆಯುತ್ತಿದೆ ; ಪ್ರಧಾನ ಮಂತ್ರಿ ನರೇಂದ್ರ ಮೋದಿ

ಮೈಸೂರು; ಪ್ರಸ್ತುತ ಭಾರತದ ಯುವಶಕ್ತಿಯಿಂದಾಗಿಯೇ ಭಾರತದ ಅರ್ಥವ್ಯವಸ್ಥೆಯು ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ಶನಿವಾರ ಮೈಸೂರಿನಲ್ಲಿ ರಾಮಕೃಷ್ಣ ಆಶ್ರಮದಿಂದ ನಿರ್ಮಿಸಲಾಗಿರುವ ವಿವೇಕ ಸ್ಮಾರಕವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಭಾರತದ ಯುವಶಕ್ತಿಯಿಂದಾಗಿಯೇ ಇಂದು ಭಾರತವು ವಿಶ್ವದಲ್ಲೇ 3ನೇ ಅತಿ ದೊಡ್ಡ ಸ್ಟಾರ್ಟ್ಅಪ್ ವ್ಯವಸ್ಥೆ ಹೊಂದಿದೆ ಎಂದು ತಿಳಿಸಿದರು. ದೇಶವೇ ಮೊದಲು. ಯುವಕರೇ ದೇಶದ ಶಕ್ತಿಯಾಗಿದ್ದಾರೆ. ದೇಶದ ಅಭಿವೃದ್ಧಿಗೆ ಯುವ ಶಕ್ತಿ ಅತ್ಯಗತ್ಯವಾಗಿದೆ. ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಬಹಳ ಮಹತ್ವವಾದದ್ದು, ಹಾಗಾಗಿ ಯುವಕರಿಗೆ ಸರಿಯಾದ ಮಾರ್ಗದರ್ಶನದ ಅಗತ್ಯವಿದೆ. ಯುವಕರ ಸಾಮಾರ್ಥ್ಯವನ್ನು ಊಹಿಸಲು ಅಸಾಧ್ಯವಾಗಿದೆ ಎಂದರು.
ಯಾವುದೇ ದೇಶದಲ್ಲಾದರೂ, ಯುವಜನತೆಗೆ ಸರಿಯಾದ ಅವಕಾಶಗಳು, ಸೂಕ್ತ ಮಾರ್ಗದರ್ಶನ ಹಾಗೂ ದೊಡ್ಡ ಕನಸುಗಳನ್ನು ಕಾಣುವ ಮತ್ತು ಆ ಕನಸುಗಳನ್ನು ತಮ್ಮದೇ ನೆಲದಲ್ಲಿ ನನಸಾಗಿಸಿಕೊಳ್ಳುವ ಆತ್ಮವಿಶ್ವಾಸ ಸಿಕ್ಕಾಗ ಮಾತ್ರ, ಅವರ ಸಾಮರ್ಥ್ಯವು ರಾಷ್ಟಿçÃಯ ಶಕ್ತಿಯಾಗಿ ರೂಪಾಂತರಗೊಳ್ಳುತ್ತದೆ. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಭಾರತದಲ್ಲಿ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಸತತವಾಗಿ ಏರಿಕೆಯಾಗುತ್ತಿರುವುದು ನನಗೆ ಸಂತಸ ತಂದಿದೆ. ಇಂದು ದೇಶದಲ್ಲಿ ಸುಮಾರು 1,40,000 ಎಂ.ಬಿ.ಬಿ.ಎಸ್ ಸೀಟುಗಳಿವೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆ 823ಕ್ಕೆ ಏರಿದೆ.
ಕಳೆದ 12 ವರ್ಷಗಳಲ್ಲಿ ದೇಶದಲ್ಲಿ 650ಕ್ಕೂ ಹೆಚ್ಚು ಹೊಸ ವಿಶ್ವವಿದ್ಯಾಲಯಗಳು, 14 ಸಾವಿರಕ್ಕೂ ಹೆಚ್ಚು ಕಾಲೇಜುಗಳು, 4 ಸಾವಿರಕ್ಕೂ ಹೆಚ್ಚು ಐಟಿಐಗಳು ಆರಂಭಗೊAಡಿವೆ. 9 ಐಐಎಂ, 7 ಐಐಟಿ ಸ್ಥಾಪನೆಯಾಗಿವೆ. ವಾರ್ಷಿಕ ಎಂಬಿಬಿಎಸ್ ಸೀಟುಗಳ ಸಂಖ್ಯೆ 1.40 ಲಕ್ಷಕ್ಕೆ ಏರಿಕೆಯಾಗಿದೆ. ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ 838ಕ್ಕೆ ತಲುಪಿದೆ ಎಂದು ತಿಳಿಸಿದರು. ದೇಶದಾದ್ಯಂತ 14 ಸಾವಿರ ಪಿಎಂಶ್ರೀ ಶಾಲೆಗಳನ್ನು ಆರಂಭಿಸಲಾಗಿದೆ. ಎಂಜಿನಿಯರಿAಗ್ ಶಿಕ್ಷಣವನ್ನು ಮಾತೃಭಾಷೆಯಲ್ಲೂ ಪಡೆಯುವ ಅವಕಾಶ ಕಲ್ಪಿಸಲಾಗಿದೆ ಎಂದರು. ರಾಷ್ಟಿçÃಯ ಶಿಕ್ಷಣ ನೀತಿಯು 21ನೇ ಶತಮಾನಕ್ಕೆ ಭಾರತದ ಯುವಜನತೆಯನ್ನು ಸಜ್ಜುಗೊಳಿಸುವ ವಾಹಕವಾಗುತ್ತಿದೆ ಎಂದು ತಿಳಿಸಿದರು.
ಭಾರತದ ಮೊದಲ ಖಾಸಗಿ ರಾಕೆಟ್ ಅನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡುವುದರಿಂದ ಹಿಡಿದು ಡಿಜಿಟಲ್ ಅರ್ಥವ್ಯವಸ್ಥೆ, ಸ್ಟಾರ್ಟ್ಅಪ್‌ಗಳು, ಮುದ್ರಾ-ಚಾಲಿತ ಉದ್ಯಮಶೀಲತೆ, ಆತ್ಮನಿರ್ಭರ ಭಾರತ ಹಾಗೂ ಮೇಕ್ ಇನ್ ಇಂಡಿಯಾಗೆ ಬಲ ತುಂಬುವವರೆಗೆ ದೇಶದ ಯುವಜನತೆ ವಿವಿಧ ಕ್ಷೇತ್ರಗಳಲ್ಲಿ ನಾವೀನ್ಯತೆಯನ್ನು ಮುನ್ನಡೆಸುತ್ತಿದ್ದಾರೆ. ಹಿಂದೆ ಸಂಕೋಲೆಯಲ್ಲಿದ್ದ ಭಾರತದ ಯುವಜನತೆ, ಇಂದು ವಿಶ್ವದ ಅಭಿವೃದ್ಧಿಯನ್ನು ವೇಗಗೊಳಿಸುತ್ತಿದ್ದಾರೆ ಎಂದು ಹೇಳಿದರು.
ಕ್ರೀಡೆ ಮತ್ತು ಪರಿಸರದ ಬಗ್ಗೆ ಕಾಳಜಿ;
ಕ್ರೀಡೆಗೆ ಆದ್ಯತೆ ನೀಡುವ ರಾಷ್ಟçವೇ ಬಲಿಷ್ಠ ಯುವಶಕ್ತಿಯನ್ನು ನಿರ್ಮಿಸುತ್ತದೆ. ಖೇಲೋ ಇಂಡಿಯಾ ಯೋಜನೆಯ ಮೂಲಕ ಗ್ರಾಮದಿಂದ ರಾಷ್ಟçಮಟ್ಟದವರೆಗೆ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಭಾರತೀಯ ಯುವಕರು ಮತ್ತು ಯುವತಿಯರು ಅಂತರರಾಷ್ಟಿçÃಯ ಕ್ರೀಡಾಕೂಟಗಳಲ್ಲಿ ದೇಶದ ಕೀರ್ತಿ ಹೆಚ್ಚಿಸುತ್ತಿದ್ದಾರೆ ಎಂದು ಹೇಳಿದರು.
ಪ್ರತಿಯೊಬ್ಬರೂ ಸ್ವಚ್ಛತೆ, ಪರಿಸರ ಸಂರಕ್ಷಣೆ ಮತ್ತು ಜಲಸಂರಕ್ಷಣೆಯ ಸಂಕಲ್ಪ ಮಾಡಬೇಕು. ಪ್ರಾಕೃತಿಕ ಸಂಪತ್ತನ್ನು ಉಳಿಸುವ ಕೆಲಸದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಈ ವಿವೇಕ ಸ್ಮಾರಕವು ಅನ್ವೇಷಕರು ಮತ್ತು ಭಕ್ತರಿಗೆ ಆಧ್ಯಾತ್ಮಿಕ ಉನ್ನತಿಗಾಗಿ ಒಂದು ತೀರ್ಥಯಾತ್ರೆಯ ಸ್ಥಳವಾಗಲಿದೆ ಎಂದು ನನಗೆ ವಿಶ್ವಾಸವಿದೆ. ಈ ವಿವೇಕ ಸ್ಮಾರಕದ ಮೂಲಕ, ನಾವು ಸಮಾಜ ಮತ್ತು ರಾಷ್ಟçದ ಹಿತಾಸಕ್ತಿ, ತಮ್ಮ ವೈಯಕ್ತಿಕ ಸಂತೋಷ ಮತ್ತು ದುಃಖಗಳಿಗಿಂತ ಹೆಚ್ಚಾಗಿ ಬಡವರು ಮತ್ತು ದೀನದಲಿತರ ನೋವಿನ ಬಗ್ಗೆ ಕಾಳಜಿ ಹೊಂದಿರುವ ಯುವಜನರನ್ನು ರೂಪಿಸಬೇಕು. ‘ರಾಷ್ಟç ಮೊದಲು’ ಎಂಬುದು ಅತ್ಯುನ್ನತ ಮಾರ್ಗದರ್ಶಿ ತತ್ವವಾಗಿದ್ದು, ಭಾರತ ಮಾತೆಯ ಸೇವೆಯೇ ಅವರ ಜೀವನದ ಧ್ಯೇಯವಾಗಿದೆ ಎಂದು ಹೇಳಿದರು.

ನಾನು ಎಲ್ಲಿಂದ ಬದುಕಿನ ಪಯಣ ಆರಂಭಿಸಿದೆನೋ, ಈಗೆಲ್ಲಿದ್ದೇನೋ ಅದರಲ್ಲಿ ರಾಮಕೃಷ್ಣ ಮಠದ ಕೊಡುಗೆ ಅಪಾರವಿದೆ. ಕೇವಲ 2 ತಿಂಗಳ ಹಿಂದಷ್ಟೇ ಬೇಲೂರಿನ ರಾಮಕೃಷ್ಣ ಮಠಕ್ಕೆ ತೆರಳಿ ಸಂತರ ಆಶೀರ್ವಾದ ಪಡೆದಿದ್ದೆ. ಇದೀಗ ಮೈಸೂರಿನಲ್ಲಿ ರಾಮಕೃಷ್ಣ ಆಶ್ರಮಕ್ಕೆ ಆಗಮಿಸಿ ಧನ್ಯನಾಗಿದ್ದೇನೆ ಎಂದರು. ಇದಕ್ಕೂ ಮುನ್ನಾ ಪ್ರಧಾನಿ ನರೇಂದ್ರ ಮೋದಿಯವರು ವಿವೇಕಾನಂದರು, ರಾಮಕೃಷ್ಣರ ಭಾವಚಿತ್ರಗಳಿಗೆ ನಮಿಸಿದರು. ಕೆಲಹೊತ್ತು ಕುಳಿತು ಧ್ಯಾನ ಮಾಡಿದರು. ತಮ್ಮ ನೆನಪಿಗಾಗಿ ಬಿಲ್ವಪತ್ರ ಗಿಡವನ್ನು ನೆಟ್ಟು ಅದಕ್ಕೆ ನೀರೆರೆದರು. ಅಲ್ಲದೆ ಹಾಜರಾತಿ ಪುಸ್ತಕದಲ್ಲಿ ತಮ್ಮ ಅನುಭವ ಬರೆದು ಸಹಿ ಮಾಡಿದರು.