
ಪಿರಿಯಾಪಟ್ಟಣ : ದೇಶದ ರಕ್ಷಣೆಯಲ್ಲಿ ಸೈನಿಕರ ಪಾತ್ರ ಅಪಾರವಾದದ್ದು ಎಂದು ಪಿರಿಯಾಪಟ್ಟಣ ರೋಟರಿ ಕ್ಲಬ್ ಅಧ್ಯಕ್ಷ ಬಲರಾಮ್ ತಿಳಿಸಿದರು.
ಪಿರಿಯಾಪಟ್ಟಣ ರೋಟರಿ ಕ್ಲಬ್ ವತಿಯಿಂದ ತಾಲೂಕಿನ ಕುಂದನಹಳ್ಳಿ ಕೂರ್ಗ್ ವಾಟರ್ ಪಾರ್ಕ್ ನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಮ್ಮ ದೇಶದ ಸೈನಿಕರು ಪಾಕಿಸ್ತಾನದ ವಿರುದ್ಧ ಶೌರ್ಯವನ್ನು ಮೆರೆದ ಈ ದಿನ ಮುಂದಿನ ಪೀಳಿಗೆಗೆ ಪ್ರೇರಣೆಯ ದಿನವಾಗಿದೆ ನಮ್ಮ ದೇಶದ ಸೈನಿಕರು ಮಳೆ, ಗಾಳಿ, ಬಿಸಿಲು, ಚಳಿ ಎನ್ನದೆ ಹಗಲಿರುಳು ದೇಶಕ್ಕಾಗಿ ದುಡಿಯುತ್ತಿದ್ದಾರೆ ಕಾರ್ಗಿಲ್ ಯುದ್ಧದಲ್ಲಿ 527ಕ್ಕೂ ಹೆಚ್ಚು ಯೋಧರು ಹುತಾತ್ಮರಾದರು 1500 ಕ್ಕೂ ಹೆಚ್ಚು ಸೈನಿಕರು ಶಾಶ್ವತ ಅಂಗವೈಕಲ್ಯರಾಗಿದ್ದು ಅವರ ತ್ಯಾಗ ಬಲಿದಾನ ಸ್ಮರಿಸುತ್ತಾ ಇಂದಿನ ಯುವ ಪೀಳಿಗೆಗೆ ತಲುಪಿಸಲು ಜುಲೈ 26 ರನ್ನು ಭಾರತ ಕಾರ್ಗಿಲ್ ವಿಜಯ ದಿವಸ್ ಎಂದು ಆಚರಿಸುತ್ತೇವೆ ಎಂದು ಹೇಳಿದರು.
ಪಿರಿಯಾಪಟ್ಟಣ ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ವಿಕ್ರಂ ರಾಜ್ ಮಾತನಾಡಿ ಕಾರ್ಗಿಲ್ ಬೆಟ್ಟಗಳಿಂದ ಉಗ್ರಗಾಮಿಗಳನ್ನು ಹೊಡೆದೋಡಿಸಿದ ಸಂದರ್ಭವನ್ನು ಸ್ಮರಿಸಲು ಇಂದು ದೇಶಾದ್ಯಂತ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಗುತ್ತಿದೆ. ಸೈನಿಕರು ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಮೂಡುಪಾಗಿಟ್ಟಿದ್ದಾರೆ
ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಹುತಾತ್ಮರಾದ ಮನೋಜ್ ಕುಮಾರ್ ಪಾಂಡೆ, ಸೌರಭ್ ಕಾಲಿಯ, ಮುಂತಾದವರ ಜೀವನ ಚರಿತ್ರೆಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು ಅವರ ದೇಶ ಪ್ರೇಮವನ್ನು ಯುವ ಸಮೂಹ ಮೈಗೂಡಿಸಿಕೊಂಡು ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡಬೇಕು ಎಂದರು.
ಜೋನಲ್ ಲೆಫ್ಟಿಂನೆಂಟ್ ರೋಟರಿಯನ್ ಎಂ ಎಂ ರಾಜೇಗೌಡ ಮಾತನಾಡಿ ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿ ಕೊಳ್ಳಲು ಸಂಚು ರೂಪಿಸುತ್ತಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತನ್ನ ಶೌರ್ಯವನ್ನು ಪ್ರದರ್ಶಿಸಿದ ದಿನ ಇದು ಆಪರೇಷನ್ ವಿಜಯ್ ಹೆಸರಿನಲ್ಲಿ ಯುದ್ಧ ಘೋಷಣೆ ಕೂಗುವ ಮೂಲಕ ಶತ್ರು ಪಡೆಗಳನ್ನು ಕಾರ್ಗಿಲ್‌ನಿಂದ ಓಡಿಸಿದ ಸಂದರ್ಭವನ್ನು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸುತ್ತೇವೆ ಈ ವಿಜಯೋತ್ಸವ ದೇಶದ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಸಂಕೇತವಾಗಿದೆಎಂದರು
ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರಾದ ಶಿವಪ್ಪ, ಯೋಗೇಶ್, ಲೋಕೇಶ್, ರಜೀತ್, ಪ್ರವೀಣ್, ಭರತ್ ರವರನ್ನು ಸನ್ಮಾನಿಸಿದರು
ಈ ಸಂದರ್ಭದಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ನರಸೇಗೌಡ, ರೋಟರಿಯನ್ ಎಂ ಎಂ ರಾಜೇಗೌಡ ಕಾರ್ಯದರ್ಶಿ ಹರೀಶ್ ಬಿ ಎಸ್ ಸೇರಿದಂತೆ ಇತರರು ಇದ್ದರು