Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ರೈತರ ನಡಿಗೆ-ದೆಹಲಿಯ ಕಡೆಗೆ ; ಆ. 16 ರಿಂದ ಕಿಸಾನ್ ಬಚಾವೋ ಪಾದಯಾತ್ರೆ ; ಕುರುಬೂರು ಶಾಂತಕುಮಾರ್


ಮೈಸೂರು; ರೈತರ ಹಕ್ಕುಗಳು ಮತ್ತು ಕೃಷಿಯ ಭವಿಷ್ಯವನ್ನು ಉಳಿಸುವ ಉದ್ದೇಶದಿಂದ ಹರಿಯಾಣ ಗಡಿ ಕನೋರಿಯಿಂದ ದೆಹಲಿಯ ತನಕ 13 ದಿನಗಳ “ಕಿಸಾನ್ ಬಚಾವೋ ಪಾದಯಾತ್ರೆ”ಯನ್ನು ಆಗಸ್ಟ್ 16ರಿಂದ 29ರವರೆಗೆ ನಡೆಸಲಾಗುತ್ತದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ರಾಷ್ಟಿçÃಯ ಸಹ ಸಂಚಾಲಕ ಕುರುಬುರು ಶಾಂತಕುಮಾರ್ ತಿಳಿಸಿದರು.
ಮಂಗಳವಾರ ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ನಡೆದ ರೈತರ ಸಭೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಕಳೆದ ವರ್ಷ ದೇಶದ ರೈತರಿಗಾಗಿ 130 ದಿನಗಳು ಉಪವಾಸ ಸತ್ಯಾಗ್ರಹ ನಡೆಸಿದ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ ) ರಾಷ್ಟಿçÃಯ ನೇತಾರ ಜಗಜಿತ್ ಸಿಂಗ್ ಧಲೆವಾಲಾ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಎಂದು ತಿಳಿಸಿದ್ದಾರೆ
ಈ ಐತಿಹಾಸಿಕ ಹೋರಾಟದಲ್ಲಿ ಪ್ರಮುಖವಾಗಿ ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿಗೆ ಕಾನೂನುಬದ್ಧ ಖಾತರಿ ನೀಡಬೇಕು.
ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಕಬ್ಬಿಗೆ ಎಫ್‌ಆರ್‌ಪಿ ದರವನ್ನು 5000 ರೂಗೆ ಹೆಚ್ಚಿಸಬೇಕು. ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ದಲ್ಲಿ ಕೃಷಿಯನ್ನು ಹೊರಗಿಡಬೇಕು. ದೇಶಾದ್ಯಂತ ರೈತರ ಹೋರಾಟದಲ್ಲಿ ದಾಖಲಾಗಿರುವ ಎಲ್ಲಾ ಪೊಲೀಸ್ ಮುಖದಮೆಗಳನ್ನ ವಾಪಸ್ ಪಡೆಯಬೇಕು ಎಂಬ ಒತ್ತಾಯಗಳಿಂದ ಮುಂದಿಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಾವೇರಿ ಭಾಗದ ಮೂರು ಜಲಾಶಯಗಳು ಭರ್ತಿಯಾಗಿ ಈಗಾಗಲೇ ತಮಿಳುನಾಡಿಗೆ 30 ಟಿಎಂಸಿಗೂ ಹೆಚ್ಚು ನೀರು ಹರಿಸಿರುವ ಕಾರಣ ಎಲ್ಲಾ ಅಚ್ಚುಕಟ್ಟು ನಾಲೆಗಳಿಗೆ ವ್ಯವಸಾಯ ಚಟುವಟಿಕೆಗಳಿಗೆ ಕೂಡಲೇ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಕಾವೇರಿ ಸಿಡಬ್ಲೂ÷್ಯಎಂಎ ಆದೇಶ ಸಮಂಜಸವಲ್ಲ ಈಗಾಗಲೇ ಪ್ರತಿನಿತ್ಯ ಒಂದುವರೆ ಟಿಎಂಸಿ ನೀರು ತಮಿಳುನಾಡಿಗೆ ಹರಿಯುತ್ತಿದೆ. ಆಕಸ್ಮಿಕವಾಗಿ ಮಳೆ ಕಡಿಮೆಯಾದರೆ ನಾವು ಏನು ಮಾಡಲು ಸಾಧ್ಯವಿಲ್ಲ. ಸಿಡಬ್ಲೂ÷್ಯಎಂಎ ಪ್ರಾಧಿಕಾರ ಕರ್ನಾಟಕದಲ್ಲಿ ಮೇಕೆದಾಟು ನಿರ್ಮಾಣ ಮಾಡಲು ತಮಿಳುನಾಡಿಗೆ ಕಠಿಣ ಎಚ್ಚರಿಕೆ ನೀಡಿ, ಜಲಾಶಯ ನಿರ್ಮಾಣಕ್ಕೆ ಅನುವು ಮಾಡಿಕೊಡಿ ಎಂಬುದು ನಮ್ಮ ಒತ್ತಾಯ ಎಂದು ಹೇಳಿದರು.
ಕಾವೇರಿ ಸಮಸ್ಯೆ ಬಗೆ ಸಂಘದ ಮುಖಂಡರ ಜೊತೆ ಚರ್ಚಿಸಿ, ಆ. 13ರ ಕರ್ನಾಟಕ ಬಂದ್ ಕೈ ಬಿಡುವುದು ಅಥವಾ ಮಾಡಬೇಕಾ ಎಂಬ ತೀರ್ಮಾನ ಹೇಳುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ನೀಲಕಂಠಪ್ಪ, ಪೈಲ್ವಾನ್ ವೆಂಕಟೇಶ್, ಕೆ.ಜಿ.ಗುರುಸ್ವಾಮಿ, ವಿಜೇಂದ್ರ, ವರಕೂಡು ನಾಗೇಶ್, ಸಿದ್ದೇಶ್, ಗೌರಿಶಂಕರ್,
ಕುರುಬೂರು ಸಿದ್ದೇಶ್, ಬಿ. ಪಿ.ಪರಶಿವಮೂರ್ತಿ, ಕೆಂಡಗಣ್ಣಪ್ಪ, ಗೌರಿಶಂಕರ್, ಕುರುಬೂರು ಪ್ರದೀಪ್, ರಾಜೇಶ್, ಕಿರಗಸೂರು ಪ್ರಸಾದ್ ನಾಯಕ, ಅಂಬಳೆ ಮಂಜುನಾಥ್, ಕೆಂಡಗಣ್ಣಸ್ವಾಮಿ, ಮಿಲಿಟರಿ ಕುಮಾರ್, ನಂಜುAಡಸ್ವಾಮಿ, ಮಂಜೇಶ್, ವಾಜಮಂಗಲ ಮಹಾದೇವ, ನಾಗೇಂದ್ರ, ರಂಗರಾಜು, ಉಮೇಶ್, ಮಾರ್ಬಳ್ಳಿ ಶಿವಣ್ಣ, ಜಯರಾಮು, ಪ್ರಭಾಕರ್, ನಂಜುAಡ, ಅರುಣ್, ಶ್ರೀಮತಿ ಪ್ರಭಾಮಣಿ ಶಿವಪ್ರಸಾದ್, ರಾಜು, ಮಹೇಶ್, ಸೇರಿದಂತೆ 150 ಕ್ಕೂ ಹೆಚ್ಚು ರೈತರು ಇದ್ದರು.

——–ಕೋಟ್ —
ಕಾವೇರಿ ಭಾಗದ ಮೂರು ಜಲಾಶಯಗಳು ಭರ್ತಿಯಾಗಿ ಈಗಾಗಲೇ ತಮಿಳುನಾಡಿಗೆ 30 ಟಿಎಂಸಿಗೂ ಹೆಚ್ಚು ನೀರು ಹರಿಸಿರುವ ಕಾರಣ ಎಲ್ಲಾ ಅಚ್ಚುಕಟ್ಟು ನಾಲೆಗಳಿಗೆ ವ್ಯವಸಾಯ ಚಟುವಟಿಕೆಗಳಿಗೆ ಕೂಡಲೇ ನೀರು ಹರಿಸಬೇಕು- ಕುರುಬೂರು ಶಾಂತಕುಮಾರ್, ರಾಜ್ಯಾಧ್ಯಕ್ಷರು, ರೈತ ಸಂಘಟನೆಗಳ ಒಕ್ಕೂಟ