
ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗ ಇನ್ನಷ್ಟು ಸಕ್ರಿಯ ಆಗಬೇಕು. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಕಾಂಗ್ರೆಸ್ ಗೆ ಶಕ್ತಿ ತುಂಬಬೇಕು ಎಂದು ವಿಧಾನಸಭೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.
ಮಂಗಳವಾರ ನಗರದ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಲಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ 79ನೇ ಹುಟ್ಟುಹಬ್ಬದ ಹಿನ್ನೆಲೆ ನಡೆದ ಪೊಲಿಟಿಕಲ್ ಮಾರ್ಚ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ವಿಶ್ರಾಂತಿ ಪಡೆಯದೇ ಪಕ್ಷಕ್ಕೆ ದುಡಿಯಬೇಕು. ಪಕ್ಷದತ್ತ ಜನರನ್ಮು ಸೆಳೆಯುವ ಶಕ್ತಿ ಸಿದ್ದರಾಮಯ್ಯ ಅವರಿಗೆ ಅವಕಾಶ ಇದ್ದು, ಅವರ ಬೆನ್ನಿಗೆ ನಾವೆಲ್ಲ ನಿಲ್ಲಬೇಕಿದೆ. ಕಾಂಗ್ರೆಸ್ ಹೈಕಮಾಂಡ್ ಅವರನ್ನು ನಂಬಿ ಮುಖ್ಯಮಂತ್ರಿ ಮಾಡಿದೆ. ಅವರು ಅದನ್ನು ಉಳಿಸಿಕೊಂಡು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸೇರಿ ಪಕ್ಷ ಕಟ್ಟಬೇಕು. 2028ರ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು. ಆ ಶಕ್ತಿ ಸಿದ್ದರಾಮಯ್ಯ ಅವರಲ್ಲಿ ಇದೆ ಎಂದರು.
ಡಿ.ಕೆ. ಶಿವಕುಮಾರ್ ಅವರನ್ನು ಸಿದ್ದರಾಮಯ್ಯ ರಕ್ಷಣೆ ಮಾಡುವ ಕೆಲಸ ಮಾಡಬೇಕು. ಡಿಕೆಶಿ ಅವರಲ್ಲಿ ಏನೆ ಲೋಪದೋಷಗಳು ಕಂಡುಬAದರೂ ಪಕ್ಷದ ಚೌಕಟ್ಟಿನಲ್ಲಿ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಎಲ್ಲಾ ನಾಯಕರು ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತು, ಅವರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದರು.
ಸಿದ್ದರಾಮಯ್ಯ ರೆಡಿಯಾದ ಮನೆಗೆ ಪ್ರವೇಶ ಪಡೆದವರು. ಹೀಗಾಗಿ ಡಿ. ದೇವರಾಜ ಅರಸು ಅವರಷ್ಟು ಸವಾಲನ್ನು ಅವರು ಎದುರಿಸಬೇಕಾಗಲಿಲ್ಲ ಮಾರ್ಮಿಕವಾಗಿ ಹೇಳಿದರು.
1969ರ ಕಾಂಗ್ರೆಸ್ ನ ಆಂತರೀಕ ಬೆಳವಣಿಗೆಯಿಂದ ಎರಡು ಭಾಗ ಆಯ್ತು. ನನ್ನ ತಂದೆ ಸಮಾನರಾದ ದೇವರಾಜು ಅರಸು ಅವರು ದಿಟ್ಟ ನಿರ್ಧಾರ ತೆಗೆದುಕೊಂಡರು. ಪರಿಣಾಮ ತುಂಬಾ ನೋವು ಅನುಭವಿಸಿದರು. ಸಿದ್ದರಾಮಯ್ಯ ರೆಡಿಯಾಗಿದ್ದ ಮನೆಗೆ ಎಂಟ್ರಿ ಕೊಟ್ಟವರು. ಅವರಿಗೆ ಆ ಸನ್ನಿವೇಶಗಳು ಎದುರಾಗಲಿಲ್ಲ. ಮೈಸೂರಿನ ತುಳಸಿದಾಸಪ್ಪ, ಎನ್. ರಾಚಯ್ಯ, ನಾಗರತ್ನಮ್ಮ ಅವರು ಮುಖ್ಯಮಂತ್ರಿ ಸ್ಥಾನದ ಅಕ್ಷಾಂಕ್ಷಿಗಳಾಗಿದ್ದರು. ಆದರೆ ಅವರಿಗೆ ಅವಕಾಶ ಸಿಗಲೇ ಇಲ್ಲ. ಇಂದಿರಾಗಾAಧಿ ಮನೆಗೆ ಯಾವುದೇ ಅಡತಡೆ ಇಲ್ಲದೆ ಹೋಗುವ ಸಲುಗೆಯನ್ನು ತುಳಸಿ ದಾಸಪ್ಪ ಇಟ್ಟುಕೊಂಡಿದ್ದರು. ತುಳಸಿ ದಾಸಪ್ಪನವರು ಇಂದಿರಾಗಾAಧಿಯವರ ಮನೆಗೆ ಹೋದರೆ ದಾಸಪ್ಪಾಜೀ ಬನ್ನಿ ಎಂದು ಕರೆದು ಕೂರಿಸುತ್ತಿದ್ದರು. ಆದರೂ ಅವರು ಮುಖ್ಯಮಂತ್ರಿ ಆಗುವುದಕ್ಕೆ ಆಗಲಿಲ್ಲ. ದೇವರಾಜ ಅರಸು ಅವರಿಗೆ ಜಾತಿಯ ಶಕ್ತಿ ಇರಲಿಲ್ಲ ಎಂದರು.
ದೇವರಾಜ ಅರಸು ಒಬ್ಬ ಮನೋ ವಿಜ್ಞಾನಿ ಆಗಿದ್ದರು. ಎಲ್.ಜಿ. ಹಾವನೂರರ ಸಹಾಯ ಪಡೆದು, ದಮನಿತ ಸಮುದಾಯಗಳಿಗೆ ಅವಕಾಶ ನೀಡಿದರು. ಅವರ ದೂರದೃಷ್ಟಿಯಿಂದಾಗಿ 1972ರ ಚುನಾವಣೆಯಲ್ಲಿ ಯಾರೂ ಊಹೆ ಮಾಡಲಾಗದ ಸಮುದಾಯಗಳ ಜನರು ಅವಕಾಶ ಪಡೆಯುವಂತಾಯಿತು. ಇದರ ಪ್ರಭಾವದಿಂದಾಗಿಯೇ ಜನತಾ ಪರಿವಾರದಿಂದ ಸಿದ್ದರಾಮಯ್ಯನಂತಹವರು ಅವಕಾಶ ಪಡೆಯುವಂತಾಯಿತು ಎಂದರು.
ಲೋಕದಳ ಮೂಲಕ ವಿಧಾನಸಭೆ ಪ್ರವೇಶ ಮಾಡಿದ ಸಿದ್ದರಾಮಯ್ಯ ಜನಾನುರಾಗಿ ಕಾರ್ಯಗಳ ಮೂಲಕ ಸಿದ್ದರಾಮನಹುಂಡಿಯಿAದ ದೆಹಲಿಗೆ ತಲುಪಿದ್ದಾರೆ. ಅಧಿಕಾರದಲ್ಲಿ ಇರದಿದ್ದರೂ ಇಲ್ಲಿ ಜನ ಸೇರಿರುವುದೇ ಅದಕ್ಕೆ ಸಾಕ್ಷಿ ಎಂದು ಹೇಳಿದರು.
ಐದು ವರ್ಷ ಕಾಲ ರಾಜ್ಯವನ್ನು ಆಳಿದ ಸಿದ್ದರಾಮಯ್ಯ, ನಂತರ ನಡೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲನಭವಿಸಿದರು. ಕಾಂಗ್ರೆಸ್ ನಾಯಕರನ್ನು ಸೋಲಿಸಲು ಈ ಜನುಮದಲ್ಲಿ ವಿರೋಧ ಪಕ್ಷಗಳಿಗೆ ಆಗದು. ಅದು ಕಾಂಗ್ರೆಸ್ ಒಳಗೆ ಇರುವ ಕೆಲವರಿಂದ ಕಾರಣ.
2018ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರದೇ ಇರಲು ಕಾಂಗ್ರೆಸ್ ನಾಯಕರೇ ಕಾರಣ ಹೊರತು ವಿರೋಧ ಪಕ್ಷದವರಲ್ಲ ಎಂದರು.
ಸಿದ್ದರಾಮಯ್ಯ ಬದುಕಿನಲ್ಲಿ ಕ್ರೂರವಾದ ಎರಡು ದಿನಗಳಲ್ಲಿ ಒಂದು ಅವರ ಮಗ ತೀರಿಕೊಂಡಿದ್ದು, ಇನ್ನೊಂದು 2018ರ ಚುನಾವಣೆ ಬಳಿಕ ಜೆಡಿಎಸ್ ಗೆ ಬೆಂಬಲ ಘೋಷಿಸಿದ್ದು. ವಿಪಕ್ಷಗಳು 2018ರ ಉಪಚುನಾವಣೆ ಬಳಿಕ ಕಾಂಗ್ರೆಸ್ ಒಳಗೇ ಕೆಲವರನ್ನು ಎತ್ತಿಕಟ್ಟಿ ಸಿದ್ದರಾಮಯ್ಯ ಅವರಿಗೆ ಕಾಟ ಕೊಟ್ಟರು. ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದ ಸಿದ್ದರಾಮಯ್ಯ ಮತ್ತೆ ಅದೇ ಸ್ಥಾನ ಏರಿ ನಿಷ್ಠುರವಾಗಿ ಕಾಂಗ್ರೆಸ್ ಅನ್ನು ಮುನ್ನಡೆಸಿದರು ಎಂದು ಹೇಳಿದರು.
—-ಕೋಟ್—–
ಸಿದ್ದರಾಮಯ್ಯ ಇಂದಿನ ಯುವಜನರಿಗೆ ಮಾದರಿ. ರಾಜಕೀಯ ನಾಯಕರಿಗೂ ಅವರು ಮಾದರಿ. ವೈಚಾರಿಕವಾಗಿ ಎಂದೂ ರಾಜಿ ಆಗದ ವ್ಯಕ್ತಿ ಅವರಾಗಿದ್ದಾರೆ.
– ಯು.ಟಿ. ಖಾದರ್, ಆರೋಗ್ಯ ಸಚಿವ.
ಸಿದ್ದರಾಮಯ್ಯ ಅವರು ನನ್ನ ಕೆಲಸ ಮುಗಿಯಿತು ಎಂದು ಸುಮ್ಮನೆ ಇರದೇ, ವಿಶ್ರಾಂತಿ ಪಡೆಯದೇ ಪಕ್ಷ ಸಂಘಟನೆಗೆ ಒತ್ತು ನೀಡಬೇಕು. ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಕೆಪಿಎ ಕಾಯ್ದೆ ಜಾರಿಗೊಳಿಸಬೇಕು.
-ರಮೇಶ್ ಕುಮಾರ್, ಮಾಜಿ ಸ್ಪೀಕರ್.