
*ರೊಚ್ಚಿಗೆದ್ದ ಮೃತನ ಸಂಬAಧಿಕರು, ಗ್ರಾಮಸ್ಥರಿಂದ ಅರಣ್ಯ ಇಲಾಖೆಯ ಕಚೇರಿ ಧ್ವಂಸ
ಹನೂರು; ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಶಾಗ್ಯ ಸಮೀಪದ ಹೊಳೆದಟ್ಟಿ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ-ಬೇಟೆಗಾರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಬಲಿಯಾಗಿರುವ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಮೃತರ ಸಂಬAಧಿಕರು ಅರಣ್ಯ ಇಲಾಖೆಯ ಕಚೇರಿಯನ್ನ ಧ್ವಂಸಗೊಳಿಸಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು,ಸ್ಥಳೀಯರು ಆತಂಕಗೊAಡಿದ್ದಾರೆ.
ಶಾಗ್ಯ ವ್ಯಾಪ್ತಿಯ ದಟ್ಟಿ ಅರಣ್ಯ ಪ್ರದೇಶದಲ್ಲಿ ಕಾಡಿಗೆ ನುಗ್ಗಿ ಬೇಟೆಗಾರರು ಕಾಡುಪ್ರಾಣಿಯನ್ನು ಬೇಟೆಯಾಡಿ ಅದರ ಮಾಂಸವನ್ನು ಬೇರ್ಪಡಿಸುತ್ತಿದ್ದರು. ಗಸ್ತಿನಲ್ಲಿದ್ದ ಕಾವೇರಿ ವನ್ಯಜೀವಿಧಾಮದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬಂದು
ತಕ್ಷಣ ಶಸ್ತಾçಸ್ತçಗಳನ್ನು ಕೆಳಗಿಟ್ಟು ಶರಣಾಗುವಂತೆ ಸಿಬ್ಬಂದಿ ಬೇಟೆಗಾರರಿಗೆ ಸೂಚಿಸಿದ್ದಾರೆ. ಆದರೆ ಆ ಮೂವರು ಅರಣ್ಯ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಅರಣ್ಯ ಸಿಬ್ಬಂದಿ ಆತ್ಮರಕ್ಷಣೆಗಾಗಿ ನಡೆಸಿದ ಕೌಂಟರ್ ಫೈರಿಂಗ್ನಲ್ಲಿ ಮೂವರು ಮೃತಪಟ್ಟಿದ್ದಾರೆ.
ಹನೂರು ತಾಲೂಕಿನ ತೋಮಿಯರ್ ಪಾಳ್ಯದ ನಿವಾಸಿಗಳಾದ ಕುಮಾರ್, ಆಂಥೋಣಿ ಸ್ವಾಮಿ ಹಾಗೂ ಪೀಟರ್ ಗುಂಡೇಟಿಗೆ ಬಲಿಯಾದವರು. ಮೂವರ ಶವಗಳನ್ನು ಮೈಸೂರಿನ ಕೆ. ಆರ್. ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಘಟನೆಯಲ್ಲಿ ಮಹಿಮದಾಸ್ ಎಂಬಾತ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಮೃತರ ಸಂಬAಧಿಕರು ಹಾಗೂ ಗ್ರಾಮಸ್ಥರು ಹನೂರು ತಾಲೂಕಿನ ಶಾಗ್ಯ ಡಿಆರ್ಎಫ್ಒ ಕಚೇರಿಗೆ ಒಳನುಗ್ಗಿ ಪೀಠೋಪಕರಣ ಧ್ವಂಸ ಮಾಡಿದ್ದಾರೆ. ಗುಂಡೇಟಿಗೆ ಬಲಿಯಾದ ಮೂವರು ಕಳ್ಳ ಬೇಟೆಗಾರರಲ್ಲ, ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿಯನ್ನೇ ಮಾಡರಲಿಲ್ಲ. ಆದರೂ ಸಹ ಪ್ರತಿ ದಾಳಿಯ ಹೆಸರಿನಲ್ಲಿ ಅವರನ್ನು ಗುಂಡಿಟ್ಟು ಕೊಲ್ಲಲಾಗಿದೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಮೃತರು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿ ಮಾಡಿಲ್ಲ. ಪ್ರತಿದಾಳಿಯ ನೆಪದಲ್ಲಿ ಮೂವರನ್ನು ಗುಂಡಿಟ್ಟು ಕೊಂದಿದ್ದಾರೆ. ಈ ಪ್ರಕರಣ ನಿವೃತ್ತ ನ್ಯಾಯಾಧೀಶರಿಂದ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಘಟನೆ ಬಗ್ಗೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಪ್ರತಿಕ್ರಿಯೆ ನೀಡಿ, ಈ ಕುರಿತು ಕಾವೇರಿ ವನ್ಯಜೀವಿಧಾಮದ ಅಧಿಕಾರಿಗಳ ಜೊತೆ ಮಾತನಾಡಿದ್ದು, ಕಳ್ಳಬೇಟೆಗೆ ತೆರಳಿದ್ದವರು ಸಿಬ್ಬಂದಿ ಮೇಲೆ ನಾಡ ಬಂದೂಕುಗಳಿAದ ದಾಳಿ ಮಾಡಿದಾಗ ಪ್ರತಿದಾಳಿ ಮಾಡಿದಾಗ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಸ್ಥಳೀಯರು, ಮೃತಪಟ್ಟವರು ಅಮಾಯಕರಾಗಿದ್ದು ಬೇಟೆಗೆ ಹೋಗಿರಲಿಲ್ಲ ಅವರು ಕೃಷಿಕರು. ಒಂದು ವೇಳೆ ಬೇಟೆ ಮಾಡಲು ಹೋಗಿದ್ದೇ ಆಗಿದ್ದರೆ ಅವರನ್ನು ಬಂಧಿಸಬೇಕಿತ್ತು,ಯಾಕೆ ಶೂಟ್ ಮಾಡಿದರು, ತರಬೇತಿಯಲ್ಲಿರುವ ಗಾರ್ಡ್ಗಳು ಈ ಕೆಲಸ ಮಾಡಿದ್ದಾರೆ. ನಾವು ಅವರನ್ನು ಕುಟುಂಬದವರAತೆ ನೋಡುತ್ತೇವೆ. ಈ ಬಗ್ಗೆ ತನಿಖೆ ಆಗಬೇಕು ಎನ್ನುತ್ತಿದ್ದಾರೆ. ಪರಿಶೀಲಿಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ.
ಮೃತಪಟ್ಟ ಮೂವರು ನಮ್ಮ ಸಂಬAಧಿಕರು. ಅವರೆಲ್ಲ ರೈತರು. ಕಾಡಿಗೆ ಹೋದಾಗ ಏಕಾಏಕಿ ಶೂಟ್ ಮಾಡಿದ್ದಾರೆ. ಅರಣ್ಯ ಸಿಬ್ಬಂದಿಯು ಎನ್ ಕೌಂಟರ್ ಮಾಡುವ ಅಗತ್ಯ ಏನಿತ್ತು?, ನಮ್ಮವರು ಯಾರ ಮೇಲೆ ಗುಂಡು ಹಾರಿಸಿದ್ದಾರೆ ತೋರಿಸಲಿ. ಮೃತರಿಗೆ ಮದುವೆಯಾಗಿದ್ದು, ಮೂವರಿಗೂ ಚಿಕ್ಕಮಕ್ಕಳಿದ್ದಾರೆ. ನಮಗೆ ನ್ಯಾಯ ಬೇಕು ಎಂದು ಮೃತ ಸಂಬAಧಿ ವಿಜಯ್ ಮೈಸೂರಿನಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಸ್ಥಳೀಯರಿಂದ ಬೃಹತ್ ಪ್ರತಿಭಟನೆ: ತೋಮಿಯಾರ್ ಪಾಳ್ಯ, ಮಾರ್ಟಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹನೂರು ಪಟ್ಟಣದಲ್ಲಿ ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿ ರಸ್ತೆ ತಡೆ ನಡೆಸುತ್ತಿದ್ದಾರೆ.
ಉದ್ದೇಶಪೂರ್ವಕವಾಗಿ ಅರಣ್ಯ ಇಲಾಖೆ ಶೂಟೌಟ್ ಮಾಡಿದ್ದು, ಬೇಟೆಗಾರರ ಹೆಸರಿನಲ್ಲಿ ಕೊಂದಿದ್ದಾರೆ ಎಂದು ಪೋಸ್ಟರ್ಗಳನ್ನು ಹಿಡಿದು ಆಕ್ರೋಶ ಹೊರಹಾಕುತ್ತಿದ್ದಾರೆ. ಸ್ಥಳಕ್ಕೆ ಹನೂರು ಶಾಸಕ ಮಂಜುನಾಥ್ ಭೇಟಿ ನೀಡಿದ್ದು, ಉಸ್ತುವಾರಿ ಸಚಿವರು ಬರುವ ತನಕ ಧರಣಿ ಕೈ ಬಿಡಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಹನೂರಿನ ಅರಣ್ಯ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸುವ ಹಿನ್ನೆಲೆ 200 ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಿ ಭಾರೀ ಭದ್ರತೆ ಕೈಗೊಳ್ಳಲಾಗಿದೆ.
