
ಮೈಸೂರು ; ಆಯಾಕ್ಷೇತ್ರದ ಜನರು ನಿಷ್ಠೆಮತ್ತುಪ್ರಾಮಾಣಿಕತೆಯಿಂದ ತಮ್ಮ ಕರ್ತವ್ಯ ಪಾಲಿಸಿದರೆ ಅಷ್ಟೇ ಸಾಕು, ದೇಶ ಸುಭಿಕ್ಷವಾಗಿರುತ್ತದೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ನಿರಂಜನವಾನಳ್ಳಿ ಹೇಳಿದರು.
ಶನಿವಾರ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿಏರ್ಪಡಿಸಿದ್ದ 80ನೇ ಸ್ವಾತಂತ್ರ÷್ಯದಿನಾಚರಣೆಯ ಮುಖ್ಯಅತಿಥಿಯಾಗಿಆಗಮಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, “ಬದುಕು ನಡೆಸಲು ಹಣಬೇಕು, ಅದನ್ನು ಖರ್ಚು ಮಾಡಲು ಸಮಯಬೇಕು. ಆದರೆ, ಈ ಎರಡೂ ಇದ್ದುಸ್ವಾತಂತ್ರ÷್ಯವೇ ಇಲ್ಲದಿದ್ದರೆ ಅವೆರಡೂ ವ್ಯರ್ಥ. ಸ್ವಾತಂತ್ರ÷್ಯದ ಬೆಲೆ ಅದನ್ನು ಕಳೆದುಕೊಂಡಾಗ ಮಾತ್ರ ಗೊತ್ತಾಗುತ್ತದೆ” ಎಂದರು.
“ನಮ್ಮಲ್ಲಿಒಗ್ಗಟ್ಟಿಲ್ಲದ ಕಾರಣಕ್ಕೇ ವ್ಯಾಪಾರಕ್ಕೆ ಬಂದ ಬ್ರಿಟಿಷರು ಮುನ್ನೂರಕ್ಕೂ ಹೆಚ್ಚು ವರ್ಷಗಳ ಕಾಲ ನಮ್ಮನ್ನು ಆಳಿದರು. ನಂತರ ಹಲವಾರು ಮಹನೀಚಿiÀÄರ ತ್ಯಾಗ-ಬಲಿದಾನಗಳ ಫಲವಾಗಿ ನಮಗೆ ಸ್ವಾತಂತ್ರ÷್ಯಸಿಕ್ಕಿದ್ದು, ಇಂದು ನಾವು ಸ್ವತಂತ್ರವಾಗಿ ಬಾಳುವ ಅವಕಾಶ ದೊರೆತಿದೆ ಎಂದು ತಿಳಿಸಿದರು.
“ಕೇವಲ ಈ ಒಂದು ದಿನಕ್ಕೆ ಮಾತ್ರ ಆ ಮಹನೀಯರನ್ನು ಸ್ಮರಿಸುವುದನ್ನು ಸೀಮಿತಗೊಳಿಸದೆ, ನಾವೆಲ್ಲರೂ ಅವರ ಹೋರಾಟ, ತ್ಯಾಗ ಮತ್ತುದೇಶಪ್ರೇಮವನ್ನು ನಿತ್ಯವೂಸ್ಮರಿಸಬೇಕು. ಅವರ ತತ್ವ-ಆದರ್ಶಗಳನ್ನು ನಮ್ಮದಿನಚರಿಯಲ್ಲಿಆಚರಣೆಗೆ ತಂದಾಗ ಮಾತ್ರ, ಇಂತಹಕಾರ್ಯಕ್ರಮಗಳು ಅರ್ಥಪೂರ್ಣವಾಗುತ್ತವೆ” ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಾ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಪ್ರೊ. ಎ.ಪಿ. ಜ್ಞಾನಪ್ರಕಾಶ್ ವಹಿಸಿದ್ದರು.
ವ್ಯವಸ್ಥಾಪನ ಮಂಡಳಿ ಸದಸ್ಯ ಡಾ. ಮಹೇಶ್ ಎಸ್. ಕುಲಸಚಿವಪ್ರೊ. ಎಸ್.ಕೆ. ನವೀನ್ ಕುಮಾರ್, ಶೈಕ್ಷಣಿಕ ಡೀನ್ ಪ್ರೊ. ರಾಮನಾಥಂನಾಯ್ಡು, ಪರೀಕ್ಷಾಂಗಕುಲಸಚಿವ ಪ್ರೊ. ಸಿ.ಎಸ್. ಆನಂದ್ ಕುಮಾರ್, ಹಣಕಾಸು ಅಧಿಕಾರಿ ಡಾ. ಎಸ್. ನಿರಂಜನ್ ರಾಜ್, ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸ್ಟೂಡಿಯೋವಿಭಾಗದ ಸಿದ್ದೇಗೌಡ ಹಾಗೂ ವಿಶ್ವವಿದ್ಯಾನಿಲಯದ ಬೋಧಕ ಮತ್ತುಬೋಧಕೇತರ ಸಿಬ್ಬಂದಿ ಹಾಜರಿದ್ದರು.