
ನಾಗ ಎಕ್ಸ್ಪರ್ಟ್ ಪಬ್ಲಿಕ್ ಶಾಲೆಯಲ್ಲಿ ಅದ್ದೂರಿ ಸ್ವಾತಂತ್ರ್ಯೋತ್ಸವ
ಪಿರಿಯಾಪಟ್ಟಣ: ಅನೇಕರ ತ್ಯಾಗದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಅಂತಹ ಮಹನೀಯರನ್ನು ನೆನೆಯುವುದು ನಮ್ಮ ಕರ್ತವ್ಯ ಎಂದು ನಾಗ ಎಕ್ಸ್ಪರ್ಟ್ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ದೇವೇಂದ್ರ ತಿಳಿಸಿದರು
ತಾಲೂಕಿನ ಕಂಪಲಾಪುರ ನಾಗ ಎಕ್ಸ್ಪರ್ಟ್ ಪಬ್ಲಿಕ್ ಶಾಲೆಯಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದ ಅವರು ಬ್ರಿಟಿಷರ ದಾಸ್ಯದಿಂದ ಭಾರತವನ್ನು ಬಿಡುಗಡೆಗೊಳಿಸಿದರ ಫಲವಾಗಿ ಇಂದು ಭಾರತ ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರಗಳ ಸಾಲಿಗೆ ಸೇರಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ದೇಶ ಸಾಕಷ್ಟು ಸಮಸ್ಯೆಗಳಿಂದ ಹಿಂದುಳಿದಿತ್ತು ಈಗ ಸಾಮಾಜಿಕ ಪ್ರಗತಿಯ ಜೊತೆಗೆ, ಶೈಕ್ಷಣಿಕ, ಕೈಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನದಲ್ಲೂ ನಾವು ಮುಂದುವರೆದಿದ್ದೇವೆ.
ಬ್ರಿಟಿಷರ ಕಪಿಮುಷ್ಠಿಯಲ್ಲಿದ್ದ ಭಾರತಕ್ಕೆ ಸುಲಭವಾಗಿ ಸ್ವಾತಂತ್ರ್ಯ ಸಿಗಲಿಲ್ಲ ಅನೇಕ ಮಹಾತ್ಮರು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೆ ಕಳೆದುಕೊಂಡಿದ್ದಾರೆ ಅಂತಹ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಬೇಕು ಅವರ ಆದರ್ಶಗಳನ್ನು ಸ್ವಲ್ಪಮಟ್ಟಿಗಾದರೂ ಮೈಗೂಡಿಸಿಕೊಂಡು ದೇಶಪ್ರೇಮ ಬೆಳೆಸಿಕೊಳ್ಳಬೇಕು ಎಂದರು.
ಶಿಕ್ಷಕಿ ಮಮತ ಮಾತನಾಡಿ ಮಕ್ಕಳಲ್ಲಿ ಬಾಲ್ಯ ವ್ಯವಸ್ಥೆಯಲ್ಲಿಯೇ ದೇಶಪ್ರೇಮದ ಬೀಜ ಬಿತ್ತಬೇಕು ಆ ನಿಟ್ಟಿನಲ್ಲಿ ಶಿಕ್ಷಕರು, ಪೋಷಕರು ತಮ್ಮ ಸಮಯವನ್ನು ಮೀಸಲಿಡಬೇಕು ದೇಶ ರಕ್ಷಣೆಗಾಗಿ ಹಗಲಿರುಳು ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈನಿಕರ ಸೇವೆಯನ್ನು ಎಲ್ಲರೂ ಗೌರವಿಸಬೇಕು 1947ರ ಹಿಂದೆ ನಮ್ಮ ದೇಶ ಬ್ರಿಟಿಷರ ಕಪಿಮುಷ್ಠಿಯಲ್ಲಿತ್ತು ಅಂತಹ ಸಂದರ್ಭದಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಅನೇಕ ಮಹನೀಯರು ತ್ಯಾಗ ಬಲಿದಾನ ಮಾಡಿದ್ದಾರೆ ಅಂತಹ ಮಹನೀಯರ ತ್ಯಾಗ ಬಲಿದಾನವನ್ನು ನಾವೆಲ್ಲರೂ ಅರ್ಥೈಸಿಕೊಂಡು ಸುಭದ್ರ ದೇಶ ಕಟ್ಟುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು
ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಶಾಲೆಯ ಮಕ್ಕಳಿಂದ ನಡೆದ ಆಕರ್ಷಕ ವೇಷಭೂಷಣ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆದವು
ಈ ಸಂದರ್ಭದಲ್ಲಿ ಶ್ರೀ ಹರಿ ಕ್ಲಿನಿಕ್ ಡಾಕ್ಟರ್ ಶೋಭ ಶಿಕ್ಷಕರಾದ ಆನಂದ್ ಬಸಲಾಪುರ, ಸಿಬ್ಬಂದಿಗಳಾದ ಸಂತೋಷ್, ಕಾವ್ಯ ಸೇರಿದಂತೆ ಇತರರು ಇದ್ದರು