Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಯಾವುದೇ ಯೋಜನೆ ಯಶಸ್ವಿಯಾಗಬೇಕಾದರೆ ಆಡಳಿತ ಮತ್ತು ಸಾರ್ವಜನಿಕರ ನಡುವೆ ಉತ್ತಮ ಸಂವಹನ ಅತ್ಯಗತ್ಯ


ಮೈಸೂರು: ಯಾವುದೇ ಯೋಜನೆ ಯಶಸ್ವಿಯಾಗಬೇಕಾದರೆ ಆಡಳಿತ ಮತ್ತು ಸಾರ್ವಜನಿಕರ ನಡುವೆ ಉತ್ತಮ ಸಂವಹನ ಅತ್ಯಗತ್ಯ ಎಂದು ಮೈಸೂರು ನಗರಪಾಲಿಕೆಯ ಆಯುಕ್ತರಾದ ಕೆ.ಎಂ.ಸವಿತಾ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಆಕರ್ಷಕ ಸುದ್ದಿ ಛಾಯಾಚಿತ್ರ ಪ್ರದರ್ಶನ ಮತ್ತು ಸ್ಪರ್ಧೆ, ಹಿರಿಯ ಛಾಯಾಗ್ರಾಹಕರಿಗೆ ಅಭಿನಂದನೆ ಮತ್ತು ಮೂಲಕ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ನಗರವನ್ನು ಸ್ವಚ್ಛ, ಸುಂದರ, ಆರೋಗ್ಯಕರ ಹಾಗೂ ಸುಸ್ಥಿರ ನಗರವನ್ನಾಗಿ ರೂಪಿಸುವಲ್ಲಿ ಸ್ಥಳೀಯ ಪತ್ರಿಕೋದ್ಯಮದ ಪಾತ್ರ ಮಹತ್ವದ್ದಾಗಿದೆ. ಏಕೆಂದರೆ, ಒಂದು ನಗರದ ರಸ್ತೆ, ಕುಡಿಯುವ ನೀರು, ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಆರೋಗ್ಯ, ಸಂಚಾರ, ಪರಿಸರ, ಮೂಲಸೌಕರ್ಯ ಸೇರಿದಂತೆ ಜನರ ದಿನನಿತ್ಯದ ಸಮಸ್ಯೆಗಳನ್ನು ಪತ್ರಕರ್ತರು ಹತ್ತಿರದಿಂದ ಗಮನಿಸುತ್ತಾರೆ ಎಂದು ತಿಳಿಸಿದರು.
ಆಡಳಿತ ಮತ್ತು ಸಾರ್ವಜನಿಕರ ನಡುವೆ ಮಾಧ್ಯಮ ಸೇತುವೆಯಾಗಿ ಕೆಲಸ ಮಾಡುವುದರ ಜೊತೆಗೆ ತಮ್ಮ ಕೆಲಸದಲ್ಲಿ ತಪುö್ಪಗಳಿದ್ದರೆ ಅವುಗಳನ್ನು ನಮ್ಮ ಗಮನಕ್ಕೆ ತರುವುದು ಕೂಡ ಪತ್ರಕರ್ತರ ಜವಾಬ್ದಾರಿ. ಅದೇ ರೀತಿ ಉತ್ತಮ ಕೆಲಸ ಮಾಡಿದಾಗ ಅದನ್ನು ಜನರಿಗೆ ತಲುಪಿಸುವುದನ್ನೂ ಪತ್ರಕರ್ತರು ಮಾಡಬೇಕೆಂದು ಹೇಳಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅಂತಾರಾಷ್ಟಿçÃಯ ಛಾಯಾಗ್ರಾಹಕ ಡಾ. ತಿಪ್ಪೇಸ್ವಾಮಿ, ತಮ್ಮ ವೃತ್ತಿ ಜೀವನದ ಮೈಲಿಗಲ್ಲುಗಳನ್ನು ಮೆಲಕು ಹಾಕಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಜ್ಞಾನಿ ಡಾ. ಶೇಖರ್ ಮತ್ತು ಸಂಘದ ಮಾಜಿ ಅಧ್ಯಕ್ಷ ಸಿ.ಕೆ. ಮಹೇಂದ್ರ ಅವರು ಛಾಯಾಗ್ರಹಣದ ಪರಂಪರೆಯನ್ನು ಮೆಲಕು ಹಾಕಿದರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಕೆ.ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ಹಿರಿಯ ಛಾಯಾಗ್ರಾಹಕ ಪ್ರಗತಿ ಗೋಪಾಲಕೃಷ್ಣ, ಉಪಾಧ್ಯಕ್ಷ ರವಿ ಪಾಂಡವರಪುರ, ಖಜಾಂಚಿ ಎನ್. ಸುರೇಶ್, ಗ್ರಾ. ಕಾರ್ಯದರ್ಶಿ ದಾರಾ ಮಹೇಶ್, ಕಾರ್ಯದರ್ಶಿ ಕೃಷ್ಣೋಜಿ ರಾವ್ ಹಾಜರಿದ್ದರು.
ಬಹುಮಾತ ವಿತೇತರು:
ಸುದ್ದಿ ಛಾಯಾಚಿತ್ರ ಸ್ಪರ್ಧೆಯಲ್ಲಿ ಆಂದೋಲ ದಿನಪತ್ರಿಕೆ ಛಾಯಾಗ್ರಾಹಕ ರವಿ ಗವಿಮಠ ಪ್ರಥಮ, ಕನ್ನಡ ಪ್ರಭ ಪತ್ರಿಕೆಯ ಎಂ.ಎಸ್. ಬಸವಣ್ಣ ದ್ವೀತೀಯ, ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯ ಉದಯಶಂಕರ್ ತೃತೀಯ ಬಹುಮಾನ ಪಡೆದರೆ, ಪ್ರಜಾವಾಣಿ ಪತ್ರಿಕೆಯ ಅನೂಪ್ ಟಿ. ರಾಘ್, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಎಸ್.ಆರ್. ಮಧುಸೂದನ್, ವಿಜಯ ಕರ್ನಾಟಕ ಪತ್ರಿಕೆಯ ನಾಗೇಶ್ ಕುಮಾರ್ ಪಿ.ಬಿ. ಸಮಾಧಾನಕರ ಬಹುಮಾನ ಪಡೆದರು. ತೀರ್ಪುಗಾರರಾಗಿ ಹಿರಿಯ ಪತ್ರಕರ್ತ ಕೃಷ್ಣಕುಮಾರ್, ಹಿರಿಯ ಛಾಯಾಗ್ರಾಹಕ ರಾಮಪ್ರಸಾದ್, ಮೈವಿವಿಯ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಸ್ವಪ್ನ ಕಾರ್ಯ ನಿರ್ವಹಿಸಿದರು.