
ಮೈಸೂರು; ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಆರ್. ಗುಂಡುರಾವ್ ಅವರು ರಾಜ್ಯಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್ ಹೇಳಿದರು.
ಆರ್. ಗುಂಡುರಾವ್ ಅವರ 33ನೇ ಪುಣ್ಯಸ್ಮರಣೆ ಅಂಗವಾಗಿ ನಗರದ ಕಲಾಮಂದಿರದ ಆವರಣದಲ್ಲಿ ಗುಂಡುರಾವ್ ಅಭಿಮಾನಿಗಳ ಬಳಗದ ವತಿಯಿಂದ ಏರ್ಪಡಿಸಿದ್ದ ಗುಂಡುರಾಯರ ನೆನೆಪಿನಂಗಳ ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು,
ಗುಂಡುರಾಯರ ಕೊಡುಗೆ ಕರ್ನಾಟಕ ರಾಜ್ಯಕ್ಕೆ ಅಪಾರ. ಬಡವರ್ಗದ ಮನೆಗೆಳಲ್ಲಿ ಸರ್ಕಾರಿ ಕೆಲಸ ನೀಡುವ ಮೂಲಕ, ಅವರ ಜೀವನದ ಆರ್ಥಿಕ ಪರಿಸ್ಥಿತಿ ನಂದಾದೀಪವಾಗಿಸಿ, ಲಕ್ಷಾಂತರ ಮಂದಿ ಸ್ವಾಭಿಮಾನಿಯಾಗಿ ದುಡಿಯಲು ಪ್ರೇರೇಪಿಸಿದವರೇ ಗುಂಡುರಾಯರು ಎಂದು ಹೇಳಿದರು.
ಪೇ ಕಮಿಷನ್ ಜಾರಿಗೆ ತಂದರು ಮತ್ತು ರಾಜಧಾನಿಯೆಂದರೆ ಕೇಂದ್ರ ರೈಲ್ವೆ ನಿಲ್ದಾಣದ ಪಕ್ಕದಲ್ಲೇ ನಗರ ಮತ್ತು ಗ್ರಾಮೀಣ ಬಸ್ ನಿಲ್ದಾಣ ಸ್ಥಾಪಿಸುವ ಸಾರಿಗೆ ಯೋಜನೆ ಏಷ್ಯಾದಲ್ಲೆ ಪ್ರಪ್ರಥಮ ಮಹತ್ವದ ಪಡೆಯಿತು,. ಕುಗ್ರಾಮದಲ್ಲಿರುವ ಬಡವರಿಗೆ ಉಚಿತವಾಗಿ ವಿದ್ಯುತ್ ಯೋಜನೆ, ಬೆಂಗಳೂರಿಗೆ ಕಾವೇರಿ ನೀರು ಸಮರ್ಪಕ ಪೂರೈಕೆ, ಸೇರಿದಂತೆ ಸಾಕಷ್ಟು ಜನಪರ ಯೋಜನೆ ಮುಖ್ಯಮಂತ್ರಿಯಾಗಿ ಅನುಷ್ಠಾನಗೊಳಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಸಿ.ಎಸ್.ರಘು, ಕೆಪಿಸಿಸಿ ಸದಸ್ಯ ನಟರಾಜ್, ಲತಾ ಮೋಹನ್, ದಿನೇಶ್ ಗುಂಡೂರಾವ್ ಅಭಿಮಾನಿ ಬಳಗದ ಅಧ್ಯಕ್ಷ ವಿನಯ್ ಕಣಗಾಲ್, ರವಿತೇಜ, ರಾಕೇಶ್ , ಸುಚೇಂದ್ರ, ಲೋಕೇಶ್, ಪವನ್, ಎಸ್ ಎನ್ ರಾಜೇಶ್, ಹರೀಶ್ ನಾಯ್ಡು ಇನ್ನಿತರರು ಹಾಜರಿದ್ದರು.