
*ಕಳೆದ ಬಾರಿ 80 ಲಕ್ಷರೂ ಖರ್ಚು ಮಾಡಲಾಗಿತ್ತು, ಈ ಬಾರಿ 2 ಕೋಟಿ ರೂ ನೀಡಲು ಬೇಡಿಕೆ
ಮೈಸೂರು; ಈ ಬಾರಿ ವಿಜೃಂಭಣೆಯಿAದ ನಡೆಯಲಿರುವ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲೆಂದು ಕಾಡಿನಿಂದ ಅರಮನೆ ನಗರಿ ಮೈಸ್ರರಿಗೆ ಆಗಮಿಸಲಿರುವ ಗಜಪಡೆಯ 50 ದಿನಗಳಿಗೂ ಹೆಚ್ಚು ಕಾಲದ ವಿಶೇಷ ಆತಿಥ್ಯದ ಪೋಷಣೆ ಹಾಗೂ ಅವುಗಳ ನಿರ್ವಹಣೆಗಾಗಿ ಅರಣ್ಯ ಇಲಾಖೆ ಎರಡು ಕೋಟಿ ರೂ. ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಕಳೆದ ವರ್ಷ 80 ಲಕ್ಷರೂಗಳನ್ನು ಗಜಪಡೆಯ ಆತಿಥ್ಯಕ್ಕೆಂದು ನೀಡಲಾಗಿತ್ತು. ಆದರೆ ಈಗ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿರುವುದರಿಂದ ಹಾಗೂ ವಿಶೇಷ ಆತಿಥ್ಯವನ್ನು ಗಜಪಡೆ, ಅದರ ಮಾವುತರು, ಕಾವಾಡಿಗಳಿಗೂ ನೀಡಬೇಕಾಗಿರುವ ಕಾರಣ 2 ಕೋಟಿರೂಗಳನ್ನು ಬಿಡುಗಡೆ ಮಾಡಿಕೊಡುವಂತೆ ಪ್ರಸ್ತಾವನೆಯನ್ನು ಅರಣ್ಯಾಧಿಕಾರಿಗಳು ಸಲ್ಲಿಸಿದ್ದಾರೆ.
ಆ.26ಕ್ಕೆ ಗಜಪಯಣ : ಈ ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸುವ 12 ಆನೆಗಳಲ್ಲಿ ಮೊದಲ ಹಂತದ ಆನೆಗಳನ್ನು ಆಗಸ್ಟ್ 26ರ ಗಜಪಯಣದ ಮೂಲಕ ಜಿಲ್ಲೆಯ ಹುಣಸೂರು ತಾಲೂಕಿನ ನಾಗರಹೊಳೆಯ ಹೆಬ್ಬಾಗಿಲು ವೀರನಹೊಸಹಳ್ಳಿಯಿಂದ ಮೈಸೂರಿನ ಅರಣ್ಯ ಭವನಕ್ಕೆ ಲಾರಿಗಳಲ್ಲಿ ತರಲಾಗುವುದು. ಅರಣ್ಯ ಭವನದಲ್ಲಿ ಎರಡು ದಿನ ವಾಸ್ತವ್ಯ ಹೂಡಿ ನಂತರ ಆಗಸ್ಟ್ 28ರ ಬೆಳಗ್ಗೆ 9:52-10:15 ಶುಭ ತುಲಾ ಲಗ್ನದಲ್ಲಿ ಅರಮನೆಯ ಜಯಮಾರ್ತಾಂಡ ದ್ವಾರದ ಮೂಲಕ ಅರಮನೆಯ ಆಡಳಿತ ಮಂಡಳಿಯಿAದ 9 ಗಜಪಡೆಗಳನ್ನು ಬರಮಾಡಿಕೊಳ್ಳಲಾಗುವುದು. ಆನಂತರ ಅರಮನೆಯ ಕೋಡಿ ಸೋಮೇಶ್ವರ ದೇವಾಲಯದ ಆವರಣದ ಆನೆ ಟೆಂಟ್‌ಗಳಲ್ಲಿ ಗಜಪಡೆ ವಾಸ್ತವ್ಯ ಮಾಡಲಾಗುವುದು. ಬಳಿಕ ಅದೇ ದಿನ ಸಂಜೆ 9 ಆನೆಗಳನ್ನು ತೂಕ ಹಾಕಲಾಗುವುದು. ನಂತರ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಆನೆಗಳಿಗೆ ತಾಲೀಮು ನಡೆಸಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಈ ಬಾರಿ ದಸರಾಗೆ ಬರುವ ಆನೆಗಳಿವು; ಗಜಪಯಣದ ಮೂಲಕ ಮೊದಲ ತಂಡದಲ್ಲಿ ಬರುವ ಆನೆಗಳಂದರೆ ದುಬಾರೆ ಆನೆ ಶಿಬಿರದಿಂದ ಧನಂಜಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ ಹಾಗೂ ಕಾವೇರಿ. ಬಳ್ಳೆ ಆನೆ ಶಿಬಿರದಿಂದ ಮಹೇಂದ್ರ ಹಾಗೂ ಲಕ್ಷಿ÷್ಮÃ ಆನೆ ಹಾಗೂ ಇದರ ಜೊತೆ ಭೀಮನಕಟ್ಟೆ ಆನೆ ಶಿಬಿರದಿಂದ ಏಕಲವ್ಯ ಆಗಮಿಸಲಿದ್ದಾರೆ.
ಇದರ ಜೊತೆ ಎರಡನೇ ತಂಡದಲ್ಲಿ ನಾಗರಹೊಳೆಯ ದೊಡ್ಡ ಹರವೆ ಆನೆ ಶಿಬಿರದಿಂದ ರೂಪ, ಬಂಡೀಪುರದ ರಾಂಪುರ ಆನೆ ಶಿಬಿರದಿಂದ ಚೈತ್ರಾ ಹಾಗೂ ಮತ್ತಿಗೋಡು ಆನೆ ಶಿಬಿರದಿಂದ ಶ್ರೀಕಂಠ ಬರಲಿದ್ದಾರೆ.
ಇದರ ಜೊತೆಗೆ ಅಭಿಮನ್ಯು ಆನೆಯನ್ನು ಕರೆತಂದು ಸಾಂಪ್ರದಾಯಿಕವಾಗಿ ಬೀಳ್ಕೊಡುವ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ಅರಣ್ಯ ಸಚಿವರ ಮಾರ್ಗದರ್ಶನದ ನಂತರ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆಯೂ ಸಹ ಚರ್ಚೆ ನಡೆದಿದೆ.
ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ಭೀಮ : ಕಳೆದ ಬಾರಿ ದಸರಾದ ಸಂದರ್ಭದಲ್ಲಿ ಅತ್ಯಂತ ಹೆಚ್ಚಿನ ಅಭಿಮಾನಿಗಳನ್ನು ಸಂಪಾದಿಸುವ ಹಾಗೂ ಜಾಲತಾಣಗಳಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕಿರಿಯ ಆನೆ ಎಂಬ ಖ್ಯಾತಿ ಪಡೆದ ಭೀಮ ಆನೆಗೆ ಮದ ಬಂದ ಕಾರಣ, ಆತನನ್ನು ಈ ಬಾರಿ ದಸರಾಗೆ ಆಯ್ಕೆ ಮಾಡಿಲ್ಲ. ಆದರೆ ಮದ ಕಡಿಮೆಯಾದರೆ ಎರಡನೇ ತಂಡದಲ್ಲಿ ಮತ್ತಿಗೋಡು ಆನೆ ಶಿಬಿರದಲ್ಲಿರುವ ಭೀಮ ಆನೆಯನ್ನು ಕರೆತರಲು ಅರಣ್ಯ ಇಲಾಖೆ ಪ್ಲಾನ್ ಮಾಡಿದ್ದು, ಸದ್ಯ ಭೀಮ ಆನೆ ಮೀಸಲು ಆನೆ ಪಟ್ಟಿಯಲ್ಲಿದೆ.