Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಶ್ರೀ ಗುರುರಾಘವೇಂದ್ರತೀರ್ಥ, ಗುರುಸಾರ್ವಭೌಮರ 355ನೇ ಮಧ್ಯಾರಾಧನೆ ವಿಶೇಷ ಅಲಂಕಾರ

ಮೈಸೂರು; ಅರಮನೆ ನಗರಿ ಮೈಸೂರಿನ ವಿವಿಧೆಡೆ ಇರುವ ಶ್ರೀರಾಘವೇಂದ್ರಸ್ವಾಮಿ ದೇವಸ್ಥಾನ, ಮಠಗಳಲ್ಲಿ ಶ್ರೀ ಗುರುರಾಘವೇಂದ್ರತೀರ್ಥ, ಗುರುಸಾರ್ವಭೌಮರ 355ನೇ ಮಧ್ಯಾರಾಧನೆ ಮಹೋತ್ಸವ ಸಡಗರ, ಸಂಭ್ರಮದಿAದ ನಡೆಯಿತು.

ರಾಮಕೃಷ್ಣನಗರದ ಐ ಬ್ಲಾಕ್‌ನ ಸ್ವಾಮಿವಿವೇಕಾನಂದರಸ್ತೆಯಲ್ಲಿರುವ ಶ್ರೀ ಶ್ರೀನಿವಾಸ ದೇವಸ್ಥಾನದಆವರಣದಲ್ಲಿ ಶ್ರೀ ಗುರುರಾಘವೇಂದ್ರತೀರ್ಥ, ಗುರುಸಾರ್ವಭೌಮರ 355ನೇ ಮಧ್ಯಾರಾಧನೆ ಅಂಗವಾಗಿ ರಾಯರಿಗೆ ಅಭಿಷೇಕ, ಹೂವಿನ ಅಲಂಕಾರ, ಮಹಾಮಂಗಳಾರತಿ, ನೈವೇಧ್ಯ, ಪ್ರಸಾದ ವಿನಿಯೋಗ ನೆರವೇರಿಸಲಾಯಿತು.

ಕುವೆಂಪುನಗರದಲ್ಲಿರುವ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಮಧ್ಯಾರಾಧನೆ ಸಡಗರದಿಂದ ನಡೆಯಿತು. ಶ್ರೀಗುರುರಾಘವೇಂದ್ರಸ್ವಾಮಿಯವರಿಗೆ ವಿಶೇಷ ಅಭಿಷೇಕ, ಪೂಜೆಗಳನ್ನು ನೇರವೇರಿಸಿ, ಅಲಂಕಾರ ಮಾಡಲಾಗಿತ್ತು. ನೂರಾರು ಮಂದಿ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.