Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಎನ್‌ಆರ್ ಕ್ಷೇತ್ರದಲ್ಲಿ ತಲಾ 1.30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ 3 ನೀರಿನ ಟ್ಯಾಂಕ್‌ಗಳ ಉದ್ಘಾಟನೆ


ಮೈಸೂರು : ನಗರದ ಎನ್‌ಆರ್ ಕ್ಷೇತ್ರದ ಕೆಸರೆ ಬಡಾವಣೆಯ ಹೈದರ್ ಅಲೀ ಉದ್ಯಾನವನ, ನಾಯ್ಡು ನಗರದ ಮುಖ್ಯರಸ್ತೆ ಮತ್ತು ಶಿವಾಜಿ ರಸ್ತೆಯಲ್ಲಿರುವ ಶಿವಾಜಿ ಉದ್ಯಾನವನದಲ್ಲಿ ನೂತನವಾಗಿ ನಿರ್ಮಿಸಿರುವ ಬೃಹತ್ ಪ್ರಮಾಣದಲ್ಲಿ ನೀರು ಸಂಗ್ರಹ ಮಾಡುವ ಮೂರು ಟ್ಯಾಂಕ್‌ಗಳನ್ನು ಶಾಸಕ ತನ್ವೀರ್ ಸೇಠ್ ಸೋಮವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು , ಮೈಸೂರು ಮಹಾನಗರ ಪಾಲಿಕೆವತಿಯಿಂದ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಈ ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಐದು ಲಕ್ಷ ಲೀಟರ್ ನೀರು ಸಂಗ್ರಹಣೆ ಮಾಡಬಹುದಾಗಿದೆ. 1.30 ಕೋಟಿ ರೂ ವೆಚ್ಚದಲ್ಲಿ ಈ ಟ್ಯಾಂಕ್ ನಿರ್ಮಿಸಲಾಗಿದೆ. ಈ ಟ್ಯಾಂಕ್ ನಿರ್ಮಾಣದಿಂದ ಈ ಭಾಗದ ಹಲವು ಬಡಾವಣೆಗಳ ನೀರಿನ ಬವಣೆಯನ್ನು ನೀಗಿಸಲಾಗುವುದು. ಪ್ರಮುಖವಾಗಿ ಬೆಲವತ್ತ, ಉಸ್ಮಾನಿಯಾ ಬ್ಲಾಕ್ ಕೆಸರೆಯ ವಿವಿಧ ಹಂತಗಳ ನೀರಿನ ಸಮಸ್ಯೆ ನೀಗಲಿದೆ. ಎರಡು ತಿಂಗಳಿAದ ಟ್ರಯಲ್ ಮಾಡಲಾಗಿದ್ದು, ನೀರಿನ ಅಭಾವ ನೀಗಿಸಲಾಗುವುದು. ಇನ್ನೂ ಕೆಲವು ಕಡೆ ಪೈಪ್‌ಲೈನ್ ಹಾಕಬೇಕಿದೆ. ಇದುವರೆಗೂ ಕೆಸರೆಯ ಹಲವು ಭಾಗಗಳಿಗೆ ಟ್ಯಾಂಕ್ ಮೂಲಕ ನೀರು ಸರಬರಾಜು ಮಾಡುತ್ತಿರುವುದು ವಿಷಾದನೀಯ, ಈ ಸಮಸ್ಯೆಯನ್ನು ಇದೀಗ ನಿವಾರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಝೀಜುಲ್ಲಾ ಅಲಿಯಾಸ್ ಅಜ್ಜು, ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಇಕ್ಬಾಲ್, ಉಪಾಧ್ಯಕ್ಷ ಷಹೆನ್‌ಷಾ ಅಹಮದ್, ಮೈಸೂರು ಮಹಾನಗರಪಾಲಿಕೆ ಮಾಜಿ ಸದಸ್ಯರಾದ ಸಮಿ, ಸತೀಶ್ ಚಂದ್ರ, ಸೈಯದ್ ಹಸರತುಲ್ಲಾ, ಆಪ್ತಾಬ್ ಬೇಗ್, ವಿನೋದ್, ಕೆಪಿಸಿಸಿ ಸಂಯೋಜಕ ಶೌಕತ್ ಅಲಿಖಾನ್, ಮುಖಂಡರಾದ ಎನ್.ಮಾದೇಗೌಡ, ಇಲಿಯಾಸ್ ಬಾಬು, ಇರ್ಫಾನ್ ಪಾಷ, ಸೈಯದ್ ಫಾರೂಖ್, ಅಬ್ದುಲ್ ವಸೀಂ ಮುಂತಾದವರು ಇದ್ದರು