
ಮೈಸೂರು; ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ೮೦ನೇ ಸ್ವಾತಂತ್ರೊ÷್ಯÃತ್ಸವದ ಅಂಗವಾಗಿ ನಗರದ ೯ ವಲಯಗಳಲ್ಲಿ ಗುರುತಿಸಲಾದ ೮೦ ಕಸ ಸುರಿಯುವ ಅತಿಸೂಕ್ಷ÷್ಮ ಸ್ಥಳಗಳನ್ನು ಸ್ವಚ್ಛಗೊಳಿಸಿ ಸುಂದರ ತಾಣಗಳಾಗಿ ಪರಿವರ್ತಿಸಲಾಗಿದೆ. ಈ ಅಭಿಯಾನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳು, ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು, ಮೇಲ್ವಿಚಾರಕರು, ಪೌರಕಾರ್ಮಿಕರು ಹಾಗೂ ಚಾಲಕರನ್ನು ಪಾಲಿಕೆ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಅಧಿಕಾರಿ ವರ್ಗದಲ್ಲಿ ವಲಯ ಕಚೇರಿ ೪ರ ಗೋಕುಲಂ ಸ್ಮಶಾನ ಜಿವಿಪಿಯು ಪ್ರಥಮ ಬಹುಮಾನ, ವಲಯ ಕಚೇರಿ ೭ರ ಸಿ.ವಿ. ರಸ್ತೆ ಹಾಗೂ ವಲಯ ಕಚೇರಿ ೯ರ ಸಾತಗಳ್ಳಿ ರಿಂಗ್ ರಸ್ತೆಯ ಜಿವಿಪಿಯು ಗಳಿಗೆ ದ್ವಿತೀಯ ಬಹುಮಾನ ನೀಡಲಾಯಿತು. ವಲಯ ಕಚೇರಿ ೬ರ ಚಾಮರಾಜ ಡಬಲ್ ರಸ್ತೆ ಹಾಗೂ ವಲಯ ಕಚೇರಿ ೩ರ ಕಾವೇರಿ ಅಪಾರ್ಟ್ಮೆಂಟ್ ಶಾಂತದೇವಿ ನಗರ ಜಿವಿಪಿಯು ಗಳಿಗೆ ತೃತೀಯ ಬಹುಮಾನ ನೀಡಲಾಯಿತು. ವಲಯ ಕಚೇರಿ ೭ರ ಸಿ.ವಿ. ರಸ್ತೆ ಜಿವಿಪಿಯು ತಂಡಕ್ಕೆ ರೋಲಿಂಗ್ ಟ್ರೋಫಿ ಪ್ರದಾನ ಮಾಡಲಾಯಿತು.
ಅತ್ಯುತ್ತಮ ಪೌರಕಾರ್ಮಿಕರಾಗಿ ಅನಿತಾ (ವಾರ್ಡ್ ೫೫), ಸತ್ಯ (ವಾರ್ಡ್ ೫೫), ನವೀನ್ (ವಾರ್ಡ್ ೨೮), ಅಂಜಯ್ಯ (ವಾರ್ಡ್ ೧೭), ನರಸಿಂಹ (ವಾರ್ಡ್ ೨೫) ಹಾಗೂ ವಿಜಯ್ (ವಾರ್ಡ್ ೪೦) ಅವರನ್ನು ಸನ್ಮಾನಿಸಲಾಯಿತು.
೮೦ ಜಿವಿಪಿಯು ಗಳ ಪರಿವರ್ತನೆಯೊಂದಿಗೆ ಅಭಿಯಾನವನ್ನು ಮುಕ್ತಾಯಗೊಳಿಸದೆ, ನಗರದ ಎಲ್ಲ ಕಸ ಸುರಿಯುವ ಅತಿಸೂಕ್ಷ÷್ಮ ಸ್ಥಳಗಳನ್ನು ಹಂತ ಹಂತವಾಗಿ ಪರಿವರ್ತಿಸಿ ಮೈಸೂರನ್ನು ಕಸಮುಕ್ತ ತಾಣ ಹಾಗೂ ದೇಶದ ನಂ.೧ ಸ್ವಚ್ಛ ನಗರವನ್ನಾಗಿಸುವ ನಿಟ್ಟಿನಲ್ಲಿ ನಿರಂತರ ಕಾರ್ಯಾಚರಣೆ ಕೈಗೊಳ್ಳಲಾಗುವುದು.
ಸಾರ್ವಜನಿಕರು ರಸ್ತೆ, ಖಾಲಿ ನಿವೇಶನ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯದೆ, ಹಸಿ ಮತ್ತು ಒಣ ತ್ಯಾಜ್ಯವನ್ನು ಮೂಲದಲ್ಲಿಯೇ ಪ್ರತ್ಯೇಕಿಸಿ ಪಾಲಿಕೆಯ ಸಂಗ್ರಹಣಾ ವಾಹನಗಳಿಗೆ ನೀಡುವ ಮೂಲಕ ಸಹಕರಿಸುವಂತೆ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರು ಮನವಿ ಮಾಡಿದರು.