ಸಾಹಿತ್ಯಿಕ, ಸಾಂಸ್ಕöÈತಿಕ, ಆರ್ಥಿಕ ಗಟ್ಟಿಗೊಳಿಸಲು ಬದ್ಧ ; ಡಾ.ಸಿ.ಸೋಮಶೇಖರ
ಮೈಸೂರು: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾದ ಮೇಲೆ ಸಾಹಿತ್ಯಿಕವಾಗಿ, ಸಾಂಸ್ಕöÈತಿಕವಾಗಿ ಹಾಗೂ ಆರ್ಥಿಕವಾಗಿ ಗಟ್ಟಿಗೊಳಿಸುವ ದಿಸೆಯಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿ.ಸೋಮಶೇಖರ ಹೇಳಿದರು.ಮಂಗಳವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ನಾಡು-ನುಡಿ ಸಮ್ಮೇಳನ, ಮಕ್ಕಳ ಸಮ್ಮೇಳನ, ಲೇಖಕಿಯರ ಸಮ್ಮೇಳನ ಆಯೋಜಿಸುವ ಮೂಲಕ ಕಸಾಪಕ್ಕೆ ವೈಭವ ಮರುಕಳಿಸುವಂತೆ ಶ್ರಮಿಸುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕನ್ನಡವೆಂದರೆ ಮಮತೆ ಹಾಗೂ ನಿಷ್ಠೆ. ಇದಕ್ಕೆ ಬದ್ಧನಾಗಿರುವೆ. ಮುಖ್ಯವಾಗಿ ಕಸಾಪ ಅಧ್ಯಕ್ಷನಾದ ಮೇಲೆ…