
ಮೈಸೂರು; ನಗರದ ವಿ.ವಿ.ಮೊಹಲ್ಲಾದ 12ನೇ ಅಡ್ಡರಸ್ತೆಯಲ್ಲಿರುವ ಶ್ರೀ ಸಾಗರಕಟ್ಟೆರಾಯರ ಮಠದಲ್ಲಿ ಆ.29ರಿಂದ 31ರವರೆಗೆ ಶ್ರೀ ಗುರು ರಾಘವೇಂದ್ರ ರ 355ನೇ ಆರಾಧನಾ ಮಹೋತ್ಸವವನ್ನು ಏರ್ಪಡಿಸಲಾಗಿದೆ.ಆರಾಧನಾ ಸಮಯದಲ್ಲಿ ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಪಾದಪೂಜೆ, ಬೆಳಿಗ್ಗೆ 8.45ಕ್ಕೆ ಪಂಚಾಮೃತಅಭಿಷೇಕ, ಮಧ್ಯಾಹ್ನ 12ಕ್ಕೆ ಅಲಂಕಾರ ಬ್ರಾಹ್ಮಣ ಪೂಜೆ, ಸಂಜೆ 6.30ರಿಂದ 8.15ರವರೆಗೆ ಸಂಗೀತ ಕಾರ್ಯಕ್ರಮಆಯೋಜಿಸಲಾಗಿದೆ.ಸಂಗೀತಕಾರ್ಯಕ್ರಮದ ನಂತರ ಪಲ್ಲಕ್ಕಿ ಉತ್ಸವ, ರಥೋತ್ಸವ, ಮಹಾಮಂಗಳಾರತಿ, ಪ್ರಸಾದ ವಿನಿಯೋಗವಿರುತ್ತದೆ.ಆ.31ರಂದು ಸೋಮವಾರ ಬೆಳಿಗ್ಗೆ 11.30ಕ್ಕೆ ರಥೋತ್ಸವ ಇರುತ್ತದೆ.
ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆ.29ರಂದು ಪೂರ್ವಾರಾಧನೆ ಪ್ರಯುಕ್ತ ಸಂಜೆ 6.30ರಿಂದ 8.15ರವರೆಗೆ ವಿದುಷಿ ಕಲಾಂಬಿಕಾ ಸಹೋದರಿಯರಿಂದ ಗಾಯನ. ಇವರಿಗೆ ಪಕ್ಕವಾದ್ಯದಲ್ಲಿ ಪಿಟೀಲಿನಲ್ಲಿ ವಿದುಷಿ ಸಿ.ವಿ.ಶೃತಿ, ಮೃದಂಗದಲ್ಲಿ ವಿದ್ವಾನ್ ವಿಕ್ರಮ್ ಭಾರದ್ವಾಜ್ ಹಾಗೂ ಘಟಂನಲ್ಲಿ ವಿದ್ವಾನ್ ಶರತ್ ಕೌಶಿಕ್ ಸಾಥ್ ನೀಡಲಿದ್ದಾರೆ. ಆ.30ರಂದು ಮಧ್ಯಾರಾಧನೆ ಪ್ರಯುಕ್ತ ಸಂಜೆ 6.30ರಿಂದ 8.15ರವರೆಗೆ ವಿದ್ವಾನ್ ಆರ್.ಕೆ.ಪದ್ಮನಾಭರವರಿಂದ ವೀಣಾವಾದನ. ಇವರಿಗೆ ಪಕ್ಕವಾದ್ಯದಲ್ಲಿ ಮೃದಂಗದಲ್ಲಿ ವಿದ್ವಾನ್ ಡಾ.ಡಿ.ವಿ.ಪ್ರಹ್ಲಾದರಾವ್ ಹಾಗೂ ಘಟಂನಲ್ಲಿ ವಿದ್ವಾನ್ ಶರತ್ ಕೌಶಿಕ್ ಸಾಥ್ ನೀಡಲಿದ್ದಾರೆ.ಆ.31ರಂದು ಉತ್ತರಾರಾಧನೆ ಪ್ರಯುಕ್ತ ಸಂಜೆ 6.30ರಿಂದ 8.15ರವರೆಗೆ ವಿದ್ವಾನ್ ಸಮರ್ಥರಘುನಂದನ್ ತಂಡದಿAದ ಗಾಯನ. ಇವರಿಗೆ ಪಕ್ಕವಾದ್ಯದಲ್ಲಿ ಪಿಟೀಲಿನಲ್ಲಿ ವಿದ್ವಾನ್‌ರೂಪಂಗುಡಿರತ್ನತೇಜ, ಮೃದಂಗದಲ್ಲಿ ವಿದ್ವಾನ್ ವಿಕ್ರಮ್ ಭಾರದ್ವಾಜ್ ಹಾಗೂ ಘಟಂನಲ್ಲಿ ವಿದ್ವಾನ್ ಶರತ್ ಕೌಶಿಕ್ ಸಾತ್ ನೀಡಲಿದ್ದಾರೆ.ಪ್ರತಿದಿನ ಸಂಗೀತಕಾರ್ಯಕ್ರಮದ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗವಿರುತ್ತದೆ ಎಂದು ಶ್ರೀ ಸಾಗರಕಟ್ಟೆ ಮಠಟ್ರಸ್ಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.