Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

Jr.NTR ಹುಟ್ಟುಹಬ್ಬಕ್ಕೆ ‘ಡ್ರ್ಯಾಗನ್’ ಫಸ್ಟ್ ಗ್ಲಿಂಪ್ಸ್ ರಿಲೀಸ್ – ಆಫ್ಘಾನ್ ಮಾಫಿಯಾ ಅನಾವರಣ ಮಾಡಿದ ಪ್ರಶಾಂತ್ ನೀಲ್

– ಕೆಜಿಎಫ್ ನರಾಚಿ, ಸಲಾರ್ ಖಾನ್ಸಾರ್, ಡ್ರ್ಯಾಗನ್‌ನಲ್ಲಿ ಗೋಲ್ಡನ್ ಟ್ರಯಾಂಗಲ್ ಸಾಮ್ರಾಜ್ಯ ಸೃಷ್ಟಿಸಿದ ನೀಲ್
– ಮೈಂಡ್ ಬ್ಲಾಕಿಂಗ್ ಗ್ಲಿಂಪ್ಸ್; ರಗಡ್ ಮಾಸ್ ಲುಕ್‌ನಲ್ಲಿ ಜೂ.ಎನ್‌ಟಿಆರ್

ಬೆಂಗಳೂರು: ಜೂ.ಎನ್‌ಟಿಆರ್-ನೀಲ್ ಕಾಂಬಿನೇಷನ್‌ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಡ್ರ್ಯಾಗನ್ (Dragon Teaser) ಸಿನಿಮಾದ ಗ್ಲಿಂಪ್ಸ್ ಔಟ್ ಆಗಿದೆ. ಜ್ಯೂನಿಯರ್ ಎನ್‌ಟಿಆರ್ (Jr.NTR) ಬರ್ತ್‌ಡೇ ಹಿನ್ನೆಲೆ ಚಿತ್ರತಂಡ ಗ್ಲಿಂಪ್ಸ್ ರಿಲೀಸ್ ಮಾಡಿದೆ. ಮಧ್ಯರಾತ್ರಿ 11.59 ಕ್ಕೆ 4 ನಿಮಿಷ 35 ಸೆಕೆಂಡ್‌ನ ಬಹುದೊಡ್ಡ ಗ್ಲಿಂಪ್ಸ್ ರಿಲೀಸ್ ಆಗಿದ್ದು ಜೂ.ಎನ್‌ಟಿಆರ್‌ ಮಾಸ್ ಲುಕ್ ಮತ್ತು ಆ್ಯಕ್ಷನ್ ದೃಶ್ಯಗಳು ಗೂಸ್ ಬಂಪ್ಸ್ ತರಿಸುತ್ತಾ ಇದೆ. ಇದೇ ಜೂನ್ 11 ರಂದು ಸಿನಿಮಾ ರಿಲೀಸ್ ಆಗ್ತಾ ಇರೋದನ್ನ ಚಿತ್ರತಂಡ ಖಚಿತಪಡಿಸಿದೆ.