Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಆಲಮಟ್ಟಿ ಜಲಾಶಯದಲ್ಲಿದೆ ಕೇವಲ 9 ಟಿಎಂಸಿಯಷ್ಟು ನೀರು – ಕೃಷ್ಣೆಯ ಒಡಲಲ್ಲಿ ನೀರಿಗಾಗಿ ಹಾಹಾಕಾರ

ವಿಜಯಪುರ: ಪಂಚನದಿಗಳ ಬೀಡು ಎಂದೇ ಹೆಸರಾಗಿರುವ ವಿಜಯಪುರ (Vijayapura) ಜಿಲ್ಲೆಯಲ್ಲಿ ಇದೀಗ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಆಲಮಟ್ಟಿ ಜಲಾಶಯದಲ್ಲಿ (Almatti Dam) ಕೇವಲ 9 ಟಿಎಂಸಿ ನೀರಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.

ಜಿಲ್ಲೆಯ ಜನರು ನೀರಿಗಾಗಿ ಕೃಷ್ಣಾ ನದಿ (Krishna River) ಮೇಲೆ ಅವಲಂಬಿತರಾಗಿದ್ದಾರೆ. ಪಕ್ಕದ ಬಾಗಲಕೋಟೆ (Bagalkote) ಜಿಲ್ಲೆ ಕೂಡ ಕೃಷ್ಣಾ ನದಿ ಮೇಲೆ ಅವಲಂಬಿತವಾಗಿದೆ. ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗೆ ಆಲಮಟ್ಟಿ ಜಲಾಶಯದಿಂದಲೇ ನೀರು ಸಪ್ಲೈ ಆಗುತ್ತದೆ. ಆದರೆ ಸದ್ಯ ಜಲಾಶಯದಲ್ಲಿ 9 ಟಿಎಂಸಿ ನೀರು ಮಾತ್ರ ಬಳಕೆಗೆ ಸಂಗ್ರಹವಿದ್ದು, ಇಷ್ಟರಲ್ಲಿಯೇ ಜೂನ್ ತಿಂಗಳು ಕೂಡ ಕಳೆಯಬೇಕಾಗಿದೆ. ಇದರಿಂದ ಅವಳಿ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ. ಇದನ್ನೂ ಓದಿ: ಕಾಕ್ರೋಚ್‌ ಜನತಾ ಪಾರ್ಟಿ ಎಕ್ಸ್‌ ಖಾತೆಗೆ ಭಾರತದಲ್ಲಿ ನಿರ್ಬಂಧ – ಯಾರಿದು ಅಭಿಜಿತ್ ದಿಪ್ಕೆ?