Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸಿಎಂ ಕುರ್ಚಿ ಗೊಂದಲ ಹೈಕಮಾಂಡ್ ಇತ್ಯರ್ಥ ಮಾಡಬೇಕು: ಬಂಗಾರಪೇಟೆ ನಾರಾಯಣಸ್ವಾಮಿ

ಬೆಂಗಳೂರು: ಸಿಎಂ ಕುರ್ಚಿ ಗೊಂದಲ ಹೈಕಮಾಂಡ್ ಶೀಘ್ರವೇ ಇತ್ಯರ್ಥ ಮಾಡಬೇಕು ಎಂದು ಕಾಂಗ್ರೆಸ್ ಶಾಸಕ ಬಂಗಾರಪೇಟೆ ನಾರಾಯಣಸ್ವಾಮಿ (Bangarpete Narayanaswamy) ಹೈಕಮಾಂಡ್‌ಗೆ ಒತ್ತಾಯಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿಎಂ (Siddaramaiah) ಕುರ್ಚಿ ವಿಚಾರದಲ್ಲಿ ಗೊಂದಲ ಆಗಬಾರದಿತ್ತು. ಜನ 136 ಸೀಟು ಕೊಟ್ಟಿದ್ದಾರೆ. 2.5 ವರ್ಷದ ಆದ ಮೇಲೆ ಸಂಪುಟ ಪುನರ್ ರಚನೆ ಮಾಡಿ ಕೆಲಸ ಮಾಡದ ಮಂತ್ರಿಗಳನ್ನು ಕೈ ಬಿಟ್ಟಿದ್ದರೆ ಎಲ್ಲವು ಸರಿ ಆಗ್ತಿತ್ತು. ಸಿಎಂ ಕುರ್ಚಿ ವಿಚಾರ ಜನ ಸಾಮಾನ್ಯರಲ್ಲಿ ಚರ್ಚೆ ಆಗ್ತಿದೆ. ಹೈಕಮಾಂಡ್ ಇದನ್ನ ಇತ್ಯರ್ಥ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸೋಷಿಯಲ್‌ ಮೀಡಿಯಾದಲ್ಲಿ ಕಾಕ್ರೋಚ್‌ ಜನತಾ ಪಾರ್ಟಿ ಅಬ್ಬರ – ಫಾಲೋವರ್ಸ್‌ ಸಂಖ್ಯೆಯಲ್ಲಿ BJPಯನ್ನೇ ಹಿಂದಿಕ್ಕಿದ CJP