Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಇರಾನ್‌ ಯುದ್ಧದಿಂದ ನನ್ನ ಮಗನ ಮದುವೆಗೂ ಹೋಗಲು ಆಗ್ತಿಲ್ಲ: ಟ್ರಂಪ್‌ ಬೇಸರ

ವಾಷಿಂಗ್ಟನ್‌: ಇರಾನ್‌ ಮೇಲಿನ ಯುದ್ಧದಿಂದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರಿಗೆ ತಮ್ಮ ಮಗನ ಮದುವೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ‘ಇದು ಕೆಟ್ಟ ಘಳಿಗೆ’ ಎಂದು ಟ್ರಂಪ್‌ ಬೇಸರ ಹೊರಹಾಕಿದ್ದಾರೆ.

48 ವರ್ಷದ ಡೊನಾಲ್ಡ್ ಟ್ರಂಪ್ ಜೂನಿಯರ್ ಈ ವಾರಾಂತ್ಯದಲ್ಲಿ ಎರಡನೇ ಬಾರಿಗೆ ವಿವಾಹವಾಗಲಿದ್ದಾರೆ. ಬಹಾಮಾಸ್‌ನಲ್ಲಿ ಬೆಟ್ಟಿನಾ ಆಂಡರ್ಸನ್ ಅವರನ್ನು ವರಿಸಲಿದ್ದಾರೆ ಎಂದು ಅಮೆರಿಕದ ಮಾಧ್ಯಮ ವರದಿ ಮಾಡಿದೆ. ಆದರೆ, ಅದೇ ಸಮಯದಲ್ಲಿ ಟ್ರಂಪ್ ಇರಾನ್‌ನೊಂದಿಗಿನ ಯುದ್ಧವನ್ನು ಕೊನೆಗೊಳಿಸಲು ಒಪ್ಪಂದವೊಂದನ್ನು ರೂಪಿಸುತ್ತಿದ್ದಾರೆ. ಇದನ್ನೂ ಓದಿ: ಗಡಿಯಾರ ಓಡುತ್ತಿದೆ, ಸಮಯ ಮೀರುತ್ತಿದೆ – ಇರಾನ್‌ಗೆ ಟ್ರಂಪ್ ಭೀಕರ ಯುದ್ಧದ ವಾರ್ನಿಂಗ್‌

ನಿಮ್ಮ ಮಗನ ಮದುವೆಯಲ್ಲಿ ಭಾಗವಹಿಸುತ್ತೀರಾ ಎಂದು ಕೇಳಿದ ಪ್ರಶ್ನೆ, ‘ನಾನು ಮದುವೆಗೆ ಹಾಜರಾಗಬೇಕೆಂದು ಅವರು ಬಯಸುತ್ತಾರೆ. ಇದು ಕೇವಲ ಒಂದು ಸಣ್ಣ ಖಾಸಗಿ ವಿಷಯ. ನಾನು ಅದನ್ನು ಮಾಡಲು ಪ್ರಯತ್ನಿಸುತ್ತೇನೆ’ ಎಂದು ಟ್ರಂಪ್‌ ಪ್ರತಿಕ್ರಿಯಿಸಿದ್ದಾರೆ.