Skip to main content

3Kaala News

ಸುಭಾಷಿತ 

ಯಾರಿಗಾದರೂ ಅವರು ಕೃತಜ್ಞತೆಯಿಂದ ಸ್ವೀಕರಿಸಲು ಸಾಧ್ಯವಾಗುವಷ್ಟು ಮಾತ್ರ ಸಹಾಯ ಮಾಡಿ. ನೀವು ಅವನಿಗೆ ಹೆಚ್ಚು ಸಹಾಯ ಮಾಡಿದರೆ, ಅವನು ಅದನ್ನು ತನ್ನ ಹಕ್ಕು ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಮತ್ತು ಅವನು ಅದನ್ನು ಪಡೆಯದಿದ್ದಾಗ, ಅದೇ ವ್ಯಕ್ತಿ ನಿಮ್ಮ ಶತ್ರುವಾಗುತ್ತಾನೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮೂರು ಪ್ರತ್ಯೇಕ ಪ್ರಕರಣದಲ್ಲಿ ಸಿಡಿಲು ಬಡಿದು ಮೂವರು ವ್ಯಕ್ತಿಗಳು, ಹಸು ಸಾವು


ಮೈಸೂರು; ಜಿಲ್ಲೆಯಲ್ಲಿ ನಡೆದ ಮೂರು ಪ್ರತ್ಯೇಕ ಪ್ರಕರಣದಲ್ಲಿ ಸಿಡಿಲು ಬಡಿದು ಮೂವರು ವ್ಯಕ್ತಿಗಳು ಹಾಗೂ ಹಸುವೊಂದು ಸಾವಿಗೀಡಾಗಿರುವ ಘಟನೆ ನಡೆದಿದೆ. ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಮಾಳದ ಹಾಡಿಯ ನಿವಾಸಿಯಾದ ಅಪ್ಪಯ್ಯ, ಹುಣಸೂರು ತಾಲೂಕಿನ ಹೊಸಪುರ ಗ್ರಾಮದ ನಿವಾಸಿಯಾದ ಯಶೋಧಮ್ಮ ಹಾಗೂ ಮಡಿಕೇರಿ ಜಿಲ್ಲೆಯ ಜಲಾಶಯ ಬಡಾವಣೆಯ ನಿವಾಸಿಯಾದ ರೋಷನ್ (೪೩) ಮೃತಪಟ್ಟವರು.
ಮೊದಲ ಪ್ರಕರಣದಲ್ಲಿ ಬುಧವಾರ ಮಧ್ಯಾಹ್ನ ೧ ರವೇಳೆಯಲ್ಲಿ ಹೆಚ್.ಡಿ.ಕೋಟೆ ತಾಲೂಕಿನ ಮಾಳದ ಹಾಡಿಯ ನಿವಾಸಿಯಾದ ಅಪ್ಪಯ್ಯ ಎಂಬುವರು ತಮ್ಮ ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸುತ್ತಿದ್ದ ವೇಳೆ ಗುಡುಗು, ಸಿಡಿಲಿನೊಂದಿಗೆ ಮಳೆ ಸುರಿಯುತ್ತಿದ್ದು, ರಕ್ಷಣೆಗೆಂದು ಮರದ ಕೆಳಗಡೆ ಬಂದ ಅವರಿಗೆ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮಹಿಳೆ ಸಾವು ಹುಣಸೂರು ತಾಲೂಕಿನ ಹೊಸಪುರ ಗ್ರಾಮದ ನಿವಾಸಿಯಾದ ಯಶೋಧಮ್ಮ ಹಳೇ ಪುರ ಗ್ರಾಮದಲ್ಲಿರುವ ಪತಿಯ ಜಮೀನಿಗೆ ಹೋಗಿದ್ದು, ಈ ವೇಳೆ ಸುರಿಯುತ್ತಿದ್ದ ಮಳೆಯಿಂದ ರಕ್ಷಣೆ ಪಡೆಯಲೆಂದು ಮರದ ಕೆಳಗಡೆ ಹೋದಾಗ ಸಿಡಿಲು ಬಡಿದು ಸ್ಥಳದಲ್ಲಿಯೇ ಅವರು ಅಸುನೀಗಿದ್ದಾರೆ. ಇವರಿಗೆ ಪತಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಹಸು ಸಾವು; ಮತ್ತೊಂದೆಡೆ ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ನೂರಲ ಕುಪ್ಪೆ ಎ ಗ್ರಾಮದಲ್ಲಿ ಸಿಡಿಲು ಬಡಿದು ಹಸುವೊಂದು ಸಾವಿಗೀಡಾಗಿದೆ.
ಐಟಿ ಉದ್ಯೋಗಿ ಸಾವು; ಮೂರನೇ ಪ್ರಕರಣದಲ್ಲಿ ಸಿಡಿಲು ಬಡಿದು ಐಟಿ ಉದ್ಯೋಗಿಯೊಬ್ಬರು ಸಾವಿಗೀಡಾಗಿರುವ ಘಟನೆ ಮೈಸೂರು ತಾಲೂಕಿನ ಇಲವಾಲದಲ್ಲಿ ನಡೆದಿದೆ. ಮಡಿಕೇರಿ ಜಿಲ್ಲೆಯ ಜಲಾಶಯ ಬಡಾವಣೆಯ ನಿವಾಸಿಯಾದ ರೋಷನ್ (೪೩) ಮೃತಪಟ್ಟವರು. ಬೆಂಗಳೂರಿನ ಐಟಿ ಕಂಪನಿಯೊAದರಲ್ಲಿ ಉದ್ಯೋಗಿಯಾ ಗಿದ್ದ ಅವರು ವರ್ಕ್ ಫ್ರಂ ಹೋಮ್ ಹಿನ್ನೆಲೆಯಲ್ಲಿ ವೃತ್ತಿ ಜೊತೆಗೆ ತಮ್ಮ ‘ಕುಟುಂಬದ ಕಾಫಿ ತೋಟದ ನಿರ್ವಹಣೆಯನ್ನೂ ನೋಡಿಕೊಳ್ಳುತ್ತಿದ್ದರು.
ಮಡಿಕೇರಿಯಿಂದ ತಮ್ಮ ಕುಟುಂಬದವರೊAದಿಗೆ ಮೈಸೂರಿಗೆ ಆಗಮಿ ಸಿದ್ದ ರೋಷನ್, ಇಲವಾಲದ ಬಳಿಯಿರುವ ತಮ್ಮ ನಿವೇಶನ ವನ್ನು ವೀಕ್ಷಿಸುತ್ತಿದ್ದರು. ಬಳಿಕ ಅಲ್ಲಿಯೇ ಇದ್ದ ಮಾವಿನ ಮರದ ಬಳಿ ತೆರಳಿ ಹಣ್ಣು ಕೀಳುವಾಗ ಮಳೆ ಬಾರದಿದ್ದರೂ ಗುಡುಗು-ಮಿಂಚು ಜೋರಾಗಿತ್ತು.
ಮಾವಿನ ಹಣ್ಣು ಕೀಳುವ ವೇಳೆ ಪಕ್ಕದ ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ. ಸಿಡಿಲಾಘಾತಕ್ಕೆ ಕುಸಿದು ಬಿದ್ದು, ನಿತ್ರಾಣಗೊಂಡಿದ್ದ ರೋಷನ್ ಅವರನ್ನು ಸ್ಥಳೀಯರ ನೆರವಿ ನೊಂದಿಗೆ ಹತ್ತಿರದ ಎನ್‌ಜೆ ಆಸ್ಪತ್ರೆಗೆ, ನಂತರ ಜಯದೇವ ಹೃದ್ರೋಗ ಆಸ್ಪತ್ರೆಗೆ ಕರೆ ದೊಯ್ಯಲಾಗಿದೆ. ಆದರೆ, ಪರೀಕ್ಷಿಸಿದ ವೈದ್ಯರು ರೋಷನ್ ಮೃತ ಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.
ಬಳಿಕ ಮೃತದೇಹವನ್ನು ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ಶವಾಗಾರಕ್ಕೆ ಸ್ಥಳಾಂತರಿಸಲಾಯಿತು.