
ಬ್ರಿಟಿಷರ ನಾಡಿನಲ್ಲಿಯೇ ನುಗ್ಗಿ ಅವರ ವಿರುದ್ಧ ಹೋರಾಟ ನಡೆಸಿದ ಸಾವರ್ಕರ್ ನಿಜವಾದ ವೀರ: ಸಂಸದ ಯದುವೀರ್
ಮೈಸೂರು; ದೇಶದ ಸ್ವಾತಂತ್ರ÷್ಯಕ್ಕಾಗಿ ವಿನಾಯಕ ದಾಮೋದರ ಸಾವರ್ಕರ್ ಅವರು, ತಮ್ಮ ಜೀವಿತಾವಧಿಯ ಬಹುಪಾಲು ಜೈಲಿನಲ್ಲಿ ಸವೆದು ತಮ್ಮನ್ನು ತಾವೇ ಸಮರ್ಪಿಸಿಕೊಂಡರು ಎಂದು ಸಂಸದ ಯದುವೀರ್ ಕೃಷ್ಣದತ್ತಚಾಮರಾಜ ಒಡೆಯರ್ ತಿಳಿಸಿದರು.
ಸಾವರ್ಕರ್ ಪ್ರತಿಷ್ಠಾನ ಮೈಸೂರು ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತದಲ್ಲಿ ಆಯೋಜಿಸಲಾಗಿತ್ತು.ಸ್ವಾತಂತ್ರ÷್ಯ ವೀರ ನಾಯಕ ದಾಮೋದರ ಸಾವರ್ಕರ್ ರವರ 143ನೇ ಜಯಂತಿಯನ್ನು ಸಾವರ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ÷್ಯ ಬಂದ ನಂತರವೂ ಸಾವರ್ಕರ್ ಅವರು ಅನುಭವಿಸಿದ ಶಿಕ್ಷೆ ನೋವು ಹೇಳತೀರದು. ಬ್ರಿಟಿಷರ ನಾಡಿಗೆ ಹೋಗಿ ಅವರ ವಿರುದ್ಧ ಹೋರಾಟಕ್ಕಾಗಿ ಸಂಘಟನೆಯನ್ನು ಸಜ್ಜುಗೊಳಿಸಿದ ವೀರ ಸಾವರ್ಕರ್ ಎಂದು ಬಣ್ಣಿಸಿದರು. ಅಂಡಮಾನಿನ ಜೈಲಿನ ಚಿಕ್ಕ ಕೋಣೆಯೊಂದರಲ್ಲಿ ಕಠಿಣ ಕರಿನೀರಿನ ಶಿಕ್ಷೆ ಅನುಭವಿಸಿದ್ದರು, ಅಂತಹ ಮಹಾನ್ ವ್ಯಕ್ತಿಯ ಜಯಂತಿಯAದು ಅವರ ತ್ಯಾಗವನ್ನು ನೆನೆದು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ನಂತರ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಾವರ್ಕರ್ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ರಾಕೇಶ್ ಭಟ್, ನಗರ ಪಾಲಿಕೆ ಮಾಜಿ ಸದಸ್ಯರುಗಳಾದ ಪ್ರಶಾಂತ್ ಗೌಡ, ಜಗದೀಶ್, ಸಂದೇಶ್, ಪ್ರಮೋದ್ ಗೌಡ, ಸಂಜಯ್, ಸಂತೋಷ್, ಟಿ ಎಸ್ ಅರುಣ್, ದೀಪಕ್, ರವಿ, ಗೈಡ್ ಚಂದ್ರು, ಸಂಜಯ್ ಪ್ರಸನ್ನ, ಡಿ. ರಾಘವೇಂದ್ರ, ಚೇತನ್, ಭಾಗ್ಯರಾಜ್, ಮಧು ಸೋಮಶೇಖರ್, ಚಂದನ್ ಗೌಡ, ಮುರಳಿ, ನಾಗೇಂದ್ರ, ವಿಷ್ಣುವರ್ಧನ್ ಹಾಗೂ ಇನ್ನಿತರರು ಹಾಜರಿದ್ದರು