
ಮೈಸೂರು; ನಗರದ ಕಾಳಿದಾಸ ರಸ್ತೆಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಯದುಗಿರಿ ಯತಿರಾಜ ಮಠ, ಮೈಸೂರು ಶಾಖೆಯ ಶ್ರೀ ಲಕ್ಷಿö್ಮÃನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಮೇ 30ರಂದು ಶ್ರೀ ಯದುಗಿರಿ ಯತಿರಾಜ ರಾಮಾನುಜ ಜೀಯರ್‌ರವರ ದಿವ್ಯ ಅನುಗ್ರಹದೊಂದಿಗೆ ಸೌರಮಾನ ಶ್ರೀ ಲಕ್ಷಿö್ಮÃನರಸಿಂಹ ಜಯಂತಿ ಹಾಗೂ ವಿಶೇಷ ‘ಸ್ವಾತಿ’ ಪೂಜೆ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 7.30ಕ್ಕೆ ವಿಶ್ವರೂಪ ದರ್ಶನ, 8.45ಕ್ಕೆ ಶ್ರೀ ಲಕ್ಷಿö್ಮÃನರಸಿಂಹಸ್ವಾಮಿ ನವಕಲಶ ಸ್ಥಾಪನ ತಿರುಮಂಜನ (ಅಭಿಷೇಕ) ಮತ್ತು ದಿವ್ಯ ಪ್ರಬಂದ ಪಾರಾಯಣ, ಮಧ್ಯಾಹ್ನ 1ಕ್ಕೆ ವಿಶೇಷ ಅಲಂಕಾರ, ಮಂತ್ರಪುಷ್ಪ, ಅಷ್ಟೋತ್ತರ, 1.30ಕ್ಕೆ ಮಹಾ ನೈವೇದ್ಯ, ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ಸಂಜೆ 7.00 ಗಂಟೆಗೆ ತಿರುವೀಧಿ ಉತ್ಸವ (ಮುಖ್ಯ ರಸ್ತೆಗಳಲ್ಲಿ), 8ಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, 9ಕ್ಕೆ ದೇವರಿಗೆ ಏಕಾಂತ ಸೇವೆ ನಡೆಯಲಿದೆ ಎಂದು ದೇವಸ್ಥಾನದ ಮುಖ್ಯಸ್ಥ ವಿದ್ವಾನ್ ಕೆ.ಆರ್.ಯೋಗಾನರಸಿಂಹನ್ (ಮುರುಳಿ ಅಯ್ಯಂಗಾರ್) ತಿಳಿಸಿದ್ದಾರೆ. ಭಕ್ತಾದಿಗಳು ಹೆಚ್ಚಿನ ಮಾಹಿತಿಗೆ ಮೊಬೈಲ್ 9342188323, 7598832271 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.