
ಮೈಸೂರು: ಬ್ರಾಹ್ಮಣ ಸಮುದಾಯವು ಸಂಘಟಿತವಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಮಾತ್ರ, ಸಮಾಜದ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲು ಸಾಧ್ಯ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದರು.
ಮೈಸೂರಿನ ದಟ್ಟಗಳ್ಳಿಯ ಸಾ.ರಾ.ಕನ್ವೆನ್ಸನ್ ಹಾಲ್‌ನಲ್ಲಿ ನಡೆದ ಮೂಗೂರು ಕರ್ನಾಟಕ ಬ್ರಾಹ್ಮಣ ಸಂಘದ ಶತಮಾನೋತ್ಸವ ಸಂಭ್ರಮ, ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ, ಪ್ರತಿಭಾವಂತ ವಿದ್ಯಾರ್ಥಿಗಳ ಪುರ ಸ್ಥಾರ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮುದಾಯದ ಪ್ರಗತಿಗೆ ಆಂತರಿಕ ಒಗ್ಗಟ್ಟು ಮತ್ತು ಸಂಘಟನಾ ಶಕ್ತಿ ಪ್ರಮುಖ ಆಧಾರಗಳಾಗಿವೆ. ಪರಸ್ಪರ ಸಹಕಾರ ಮತ್ತು ಬಾಂಧವ್ಯ ವೃದ್ಧಿಸುವ ಇಂತಹ ಕಾರ್ಯಕ್ರಮಗಳು ಸಮಾಜದ ಏಕತೆಯನ್ನು ಬಲಪಡಿ ಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ 180ಕ್ಕೂ ಹೆಚ್ಚು ದಂಪತಿಗಳಿAದ ಲೋಕ ಕಲ್ಯಾಣಾರ್ಥ ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 70 ಗಣ್ಯರನ್ನು ಸನ್ಮಾನಿಸಲಾಯಿತು. ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಪುರಸ್ಕಾರ ವಿತರಿಸಲಾಯಿತು. ಈ ವೇಳೆ ವಿದ್ವಾನ್ ಟಿ.ವಿ.ಸತ್ಯನಾರಾಯಣ, ಸಂಘದ ಅಧ್ಯಕ್ಷ ಎಂ.ವಿಶ್ವನಾಥಯ್ಯ, ಪ್ರಧಾನ ಕಾರ್ಯದರ್ಶಿ ಕೆ.ಆರ್. ಮಂಜುನಾಥ್, ಖಜಾಂಚಿ ಎಚ್.ಎಸ್.ಶ್ರೀಕಂಠಶರ್ಮ, ಕಾರ್ಯದರ್ಶಿ ಹೊಮ್ಮ ಮಂಜುನಾಥ್, ಎಚ್.ಎಸ್ .ನಾಗಶಯನ, ಮತ್ತಿತರರು ಉಪಸ್ಥಿತರಿದ್ದರು.