
*ದಲಿತರಿಗೆ ಸಮರ್ಪಕ ಸ್ಥಾನಮಾನಗಳನ್ನು ಒದಗಿಸಿದಿದ್ದರೆ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುವ ಎಚ್ಚರಿಕೆ
ಮೈಸೂರು: ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಪ್ರಬಲ ಖಾತೆ ಜತೆಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಹೈಕಮಾಂಡ್‌ನ್ನು ಒತ್ತಾಯಿಸಿ ಸೋಮವಾರ ಮೈಸೂರಿನಲ್ಲಿ ಅಖಿಲ ಕರ್ನಾಟಕ ಡಾ.ಎಚ್.ಸಿ.ಮಹದೇವಪ್ಪ ಅಭಿಮಾನಿ ಬಳಗದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಪುರಭವನ ಎದುರಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಜಮಾಯಿಸಿದ ನೂರಾರು ಕಾರ್ಯಕರ್ತರು ಮೈಸೂರು ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪರವಾಗಿ ನಾನಾ ಘೋಷಣೆಗಳನ್ನು ಕೂಗಿದರು. ಸ್ವಾತಂತ್ರ÷್ಯ ಬಂದ ದಿನಗಳಿಂದಲೂ ದಲಿತ ಸಮುದಾಯ ಕಾಂಗ್ರೆಸ್ ಬೆಂಬಲಿಸಿಕೊAಡು ಬಂದರೂ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡುತ್ತಿಲ್ಲ. ಸಿದ್ದರಾಮಯ್ಯ ಅವರ ನಂತರ ದಲಿತರಿಗೆ ಸಿಎಂ ಸ್ಥಾನ ಕೊಡುತ್ತೇವೆ ಎನ್ನುವ ಮಾತನ್ನಾಡಿ ಈಗ ಒಕ್ಕಲಿಗ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುತ್ತಿರುವುದು ಸರಿಯಲ್ಲ ಎಂದು ಆರೋಪಿಸಿದರು. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಡಾ.ಎಚ್.ಸಿ.ಮಹದೇವಪ್ಪ ಅವರೇ ಮೂಲ ಕಾರಣ. ಇಡೀ ರಾಜ್ಯದಲ್ಲಿ ದಲಿತರು,ಶೋಷಿತ,ಅಲ್ಪಸಂಖ್ಯಾತ ಸಮುದಾಯವನ್ನು ಸಂಘಟಿಸಿ ಕಾಂಗ್ರೆಸ್ ಪರವಾಗಿ ಅಲೆ ಎಬ್ಬಿಸುವಂತೆಮಾಡಿದ್ದಾರೆ. ರಾಜ್ಯದ ದಲಿತನಾಯಕ, ಹಲವು ಯೋಜನೆಗಳ ಜಾರಿಯ ಹಿಂದಿರುವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಮಹತ್ವದ ಖಾತೆ,ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು. ಡಾ.ಎಚ್.ಸಿ.ಮಹದೇವಪ್ಪ ಎಂಬ ಬಹುದೊಡ್ಡ ನಾಯಕ. ಅಂಬೇಡ್ಕರ್ ವಾದಿಯನ್ನು ಕಾಂಗ್ರೆಸ್ ಮರೆಯಬಾರದು. ಈ ಹಿಂದೆ ಲೋಕೋಪಯೋಗಿ ಸಚಿವರಾಗಿದ್ದಾಗ ಡಾ.ಎಚ್.ಸಿ.ಮಹದೇವಪ್ಪ ಅವರು ದಾಖಲಿಸಿದ ಕೆಲಸ ಕಾರ್ಯಗಳು ಐತಿಹಾಸಿಕವಾಗಿವೆ. ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಶಾಲೆಯಲ್ಲಿ ಸಂವಿಧಾನ ಪೀಠಿಕೆ ಓದುವುದು, ಬೀದರ್‌ನಿಂದ ಚಾಮರಾಜನಗರ ಜಿಲ್ಲೆಯವರೆಗೆ ಪ್ರಜಾಪ್ರಭುತ್ವದ ಉಳಿವಿಗಾಗಿ ಮಾನವ ಸರಪಳಿ ನಿರ್ಮಾಣ ಮಾಡಿ, ಯಶಸ್ವಿಗೊಳಿಸಿದ್ದರಿಂದಾಗಿ ರಾಷ್ಟçಮಟ್ಟದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಬಲ ಸಿಕ್ಕಿದೆ ಎಂಬುದನ್ನು ವರಿಷ್ಠರು ಮರೆಯಬಾರದು ಎಂದರು.
ದಲಿತರು ಕಾಂಗ್ರೆಸ್ ಪಕ್ಷವನ್ನು ನಂಬಿರುವಷ್ಟು ಇನ್ಯಾವ ಪಕ್ಷವನ್ನು ನಂಬಿದ್ದಾರೆ? ಕಾಂಗ್ರೆಸ್ ಪಕ್ಷವೇ ತಮ್ಮ ಬದುಕನ್ನು ಹಸನು ಮಾಡುತ್ತದೆ ಎಂದು ನಂಬಿರುವ ದಲಿತರ ಆತ್ಮಗೌರವಕ್ಕೆ ದಕ್ಕೆ ತರಬಾರದು. ಕಾಂಗ್ರೆಸ್ ಪಕ್ಷಕ್ಕೆ ಹೃದಯವೇ ದಲಿತರು ಎಂಬುದನ್ನು ಸಾಕ್ಷೀಕರಿಸಲು ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಡಿಸಿಎಂ ಮಾಡಿ ಸಮಾನ ಗೌರವ ಕೊಡಬೇಕು ಎಂದು ಹೇಳಿದರು. ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಡಿಸಿಎಂ ಮಾಡಲು ಸಿದ್ದರಾಮಯ್ಯರು ಒತ್ತಾಸೆಯಾಗಿ ನಿಲ್ಲಬೇಕು. ಏಕೆಂದರೆ ಯಾವತ್ತೂ ಸಿದ್ದರಾಮಯ್ಯರನ್ನು ಬಿಟ್ಟುಕೊಟ್ಟಿಲ್ಲ. ಒಂದು ವೇಳೆ ಡಿಸಿಎಂ ಸ್ಥಾನ ನೀಡದೆ ಹೋದಲ್ಲಿ ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶೇ.80ರಷ್ಟು ಮತ ನೀಡುವ ದಲಿತರನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು. ಮಾಜಿ ಮಹಾಪೌರ ಪುರುಷೋತ್ತಮ್,ಅಭಿಮಾನಿ ಬಳಗದ ಹಿನಕಲ್ ಪಿ.ನಂಜುAಡ, ಎ.ಎನ್.ಸ್ವಾಮಿ, ಡಾ.ಕೆ.ಎನ್.ಬಸವರಾಜು, ಕೆ.ವಿ.ಭರತರಾಜ್, ಆರ್.ಮಹೇಶ್. ಎಚ್.ಕೆ.ಮಂಜುನಾಥ, ಬಿ.ಎಂ.ಮಹದೇವ, ನಾಗೇಶ್,ಬಾಬು ಎಂ.ಹರೀಶ್ ಕುಮಾರ್,ಸೋಮಯ್ಯ ಮಲೆಯೂರು,ನರಸಿಂಹಮೂರ್ತಿ, ಸತೀಶ್, ಚೆಲುವ, ರಾಜು, ಮಹದೇವು ಮಂಡಕಳ್ಳಿ, ವನಜಾಕ್ಷಿ, ಸುಶೀಲ, ಸಂಗೀತ,ಸುಕನ್ಯಾ, ರಾಜೇಂದ್ರ,ರಾಮಚAದ್ರ, ಮಹೇಶ್ ಸೋಸಲೆ, ಸಿದ್ದಸ್ವಾಮಿ,ನಾಗರಾಜು, ಚುಂಚನಹಳ್ಳಿ ಮಲ್ಲೇಶ್,? ವಿಷಕಂಠ, ಮರಿದೇವಯ್ಯ, ಮಂಜುನಾಥ್ ಹೈರಿಗೆ, ಸಿದ್ದರಾಜು, ಪ್ರಸಾದ್, ಶಿವಣ್ಣ,ಪ್ರಶಾಂತ್, ದೇವರಾಜು,ದೇವೇಂದ್ರ, ರವಿ, ಉಮೇಶ್,ಪುಟ್ಟರಾಜು ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.