Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಪೀಳಿಗೆಯ ಆರೋಗ್ಯಕರ ಹಾಗೂ ಸಂಸ್ಕಾರಯುತ ಬೆಳವಣಿಗೆಗೆ ಶ್ರೀಗರ್ಭ ಗರ್ಭಸಂಸ್ಕಾರವು ಅತ್ಯಗತ್ಯ


ಮೈಸೂರು; ಶ್ರೀಗರ್ಭ ಗರ್ಭಸಂಸ್ಕಾರವು ಸನಾತನ ಪರಂಪರೆಯಿAದ ಬಂದ ಅಮೂಲ್ಯ ಸಂಸ್ಕಾರವಾಗಿದ್ದು, ಮುಂದಿನ ಪೀಳಿಗೆಯ ಆರೋಗ್ಯಕರ ಹಾಗೂ ಸಂಸ್ಕಾರಯುತ ಬೆಳವಣಿಗೆಗೆ ಇದು ಅತ್ಯಂತ ಅನಿವಾರ್ಯವೆಂದು ಆಯುಷ್ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಲಕ್ಷಿö್ಮ ನಾರಾಯಣ ಹೇಳಿದರು.
ಸೋಮವಾರ ನಗರದ ಪತ್ರಕರ್ತರ ಭವನದಲ್ಲಿ ಪರಮಹಂಸ ಯೋಗ ಮಹಾವಿದ್ಯಾಲಯದ ಸಹಭಾಗಿತ್ವದಲ್ಲಿ ನಡೆದ ಶ್ರೀಗರ್ಭ ಗರ್ಭಸಂಸ್ಕಾರ ಮಹಾವಿದ್ಯಾಲಯದ ಪ್ರಥಮ ವಾರ್ಷಿಕೋತ್ಸವ ಹಾಗೂ ಗ್ರಾಜುಯೇಷನ್ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಶ್ರೀಗರ್ಭ ಸಂಸ್ಥಾಪಕರಾದ ಡಾ. ಕಾವ್ಯಾ ಎಸ್ ಅವರು ಗರ್ಭ ಸಂಸ್ಕಾರದ ಮಹತ್ವವನ್ನು ವೈಜ್ಞಾನಿಕ ಹಾಗೂ ಸಂಸ್ಕಾರಯುತ ದೃಷ್ಟಿಕೋನದಿಂದ ವಿವರಿಸಿ, ಗರ್ಭಾವಸ್ಥೆಯಲ್ಲಿಯೇ ಮಗುವಿನ ಸಮಗ್ರ ಬೆಳವಣಿಗೆಗೆ ಸೂಕ್ತ ಮಾರ್ಗದರ್ಶನ ಅಗತ್ಯವೆಂದು ತಿಳಿಸಿದರು.
ಇದೇ ವೇಳೆ ವಿದ್ಯಾರ್ಥಿಯರಾದ ಕೆ.ಆರ್. ವೆಂಕಟಾಚಲಶೆಟ್ಟಿ, ಸಹನಶ್ರೀ ವಿ.. ಶಿವರತ್ನ, ಶ್ರೀಲಕ್ಷಿ÷್ಮÃ ಸಿ.ಕೆ., ಸ್ವಪ್ನ ಎಂ.ಡಿ., ರೂಪಾ ಕುಮಟಗಿ, ಸ್ಪಂದನಾ ಡಿ., ಚಂದನ ಎಸ್. ಅವರಿಗೆ ಗ್ರಾಜುಯೇಷನ್ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅಂತರಾಷ್ಟಿçÃಯ ಯೋಗ ರಾಯಭಾರಿ ಶಿವಪ್ರಕಾಶ್ ಗುರುಜಿ, ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ಕೆ.ಜಿ.ದೇವರಾಜು, ಆಧ್ಯಾತ್ಮಿಕ ಚಿಂತಕರಾದ ಮುಕುಂದನ್, ಡಾ. ಭಾವನಾ ಉಪಸ್ಥಿತರಿದ್ದರು.