Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸೇವೆಯಿಂದ ನಿವೃತ್ತರಾದ ಪೊಲೀಸ್ ಅಧಿಕಾರಿಗಳಿಗೆ ಬೀಳ್ಕೋಡುಗೆ


ಮೈಸೂರು; ಪೊಲೀಸ್ ಇಲಾಖೆಯಲ್ಲಿ ಸುಧೀರ್ಘ ಅವಧಿಯವರೆಗೆ ಪ್ರಾಮಾಣಿಕತೆ ಹಾಗೂ ಕರ್ತವ್ಯಪರತೆಯಿಂದ ಸೇವೆ ಸಲ್ಲಿಸಿ ವಯೋ ನಿವೃತ್ತಿಗೊಂಡ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಿ ಬೀಳ್ಕೋಡಲಾಯಿತು.
ಪಿಎಸ್‌ಐಗಳಾದ ಭಾಸ್ಕರ್ ಕೆ.ಎಸ್, ಗೋಪಾಲಕೃಷ್ಣ ಕೆ, ಎಆರ್‌ಎಸ್‌ಐಗಳಾದ ಚಿಕ್ಕಮಲ್ಲಪ್ಪ, ನಂಜುAಡಯ್ಯ ಸಿ.ಎಂ , ಪ್ರಶಾಂತ್ ಎಎಸ್‌ಐಗಳಾದ ಮನೋಹರ್, ರಾಮಸ್ವಾಮಿ ಹೆಚ್.ಜಿ ಹಾಗೂ ಮುಖ್ಯಪೇದೆ ಮಿತ್ರಕುಮಾರ್ ರವರನ್ನು ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಪರ ಪೊಲೀಸ್ ಅಧೀಕ್ಷಕ ಮಲ್ಲಿಕ್ ಸಿ ರವರು, ನಿವೃತ್ತ ಅಧಿಕಾರಿಗಳ ಸೇವೆಯನ್ನು ಸ್ಮರಿಸಿ, ಅವರ ಮುಂದಿನ ನಿವೃತ್ತ ಜೀವನವು ಆರೋಗ್ಯ, ಸಂತೋಷ ಮತ್ತು ನೆಮ್ಮದಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದರು.