
ಮೈಸೂರು ; ವಿಶ್ವ ಯೋಗ ದಿನದಂದು ಅರಮನೆ ನಗರಿ, ಯೋಗ ನಗರಿ ಎಂದು ಹೆಸರಾಗಿರುವ ಮೈಸೂರು ನಗರದ ವಿವಿಧೆಡೆ 1.20 ಲಕ್ಷ ಜನ ಏಕಕಾಲಕ್ಕೆ ಯೋಗಾಭ್ಯಾಸ ಮಾಡುವ ಮಹಾಸಂಕಲ್ಪದೊAದಿಗೆ ಭಾನುವಾರ ಸಾಮೂಹಿಕ ಯೋಗಾಭ್ಯಾಸ ಮಾಡಲಾಯಿತು.
ಯೋಗ ಫೆಡರೇಷನ್ ಆಫ್ ಮೈಸೂರು ವತಿಯಿಂದ ನಗರದ ಅಂಬಾವಿಲಾಸ ಅರಮನೆ ಮುಂಗಾದ ಮೈದಾನದಲ್ಲಿ ಆಯೋಜಿಸಲಾಗಿದ್ದ ಮಹಾಸಂಕಲ್ಪ ದಿನಸ್ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಯೋಗಪಟುಗಳು ಸಾಮೂಹಿಕ ಯೋಗ್ಯಾಭ್ಯಾಸ ಮಾಡಿದರು.
ಆಯುಷ್ ಸಚಿವಾಲಯದ ಸಾಮಾನ್ಯ ಯೋಗ ಶಿಷ್ಟಾಚಾರದ ಪ್ರಕಾರ, 45 ನಿಮಿಷಗಳ ಯೋಗಾಭ್ಯಾಸ ಮಾಡಲಾಯಿತು.
ಪ್ರಾರ್ಥನೆ, ಚಾಲನಾ ಕ್ರಿಯೆಗಳ ನಂತರ ನಿಂತು ಮಾಡುವ ತಾಡಾಸನ, ವೃಕ್ಷಾಸನ, ಪಾದ-ಹಸ್ತಾಸನ, ಅರ್ಧ ಚಕ್ರಾಂತಾಸನ ಮತ್ತು ತ್ರಿಕೋಣಾಸನ ಅಭ್ಯಾಸಿಸಲಾಯಿತು
ಭದ್ರಾಸನ, ವಜ್ರಾಸನ, ಅರ್ಧ ಉಷ್ಟಾçಸನ, ಉಷ್ಟಾçಸನ, ಶಶಕಾಸನ, ಉತ್ತಾನ ಮಂಡೂಕಾಸನ ಮತ್ತು ವಕ್ರಾಸನ, ಮಕರಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ತಾನಪಾದಾಸನ, ಅರ್ಧಹಲಾಸನ, ಪವನಮುಕ್ತಾಸನ ಮತ್ತು ಶವಾಸನದ ಬಳಿಕ ಕಪಾಲಭಾತಿ, ಪ್ರಾಣಾಯಾಮ, ನಾಡಿಶೋಧನೆ, ಧ್ಯಾನ ಅಭ್ಯಾಸದ ನಂತರ ಯೋಗ ದಿನ ಯಶಸ್ಸಿಗೆ ಸಂಕಲ್ಪದ ಪ್ರಮಾಣ ವಚನ ಸ್ವೀಕರಿಸಲಾಯಿತು.
ಸಂಕಲ್ಪ ಸೂತ್ರ ಕಟ್ಟಿಸಿಕೊಂಡ ಸಂಸದ ಯದುವೀರ್: ಇದಕ್ಕೂ ಮುನ್ನ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪತಂಜಲಿ ಗುರುಗಳ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಎಸ್‌ಎಸ್ ಯೋಗ ಸಂಸ್ಥೆಯ ಸಂಸ್ಥಾಪಕ ಶ್ರೀಹರಿ ದ್ವಾರಕನಾಥ್ ಅವರು ಸಂಸದರಿಗೆ ಸಂಕಲ್ಪದ ದಾರ ಕಟ್ಟಿದರು.
ಇದೇ ವೇಳೆ ವಿಶ್ವ ಯೋಗ ದಿನದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಬಳಿಕ ಮಾತನಾಡಿದ ಯದುವೀರ್, ಪ್ರತಿ ವರ್ಷ ಯೋಗ ದಿನ ಆಚರಣೆ ಮಾಡುತ್ತಿದ್ದೇವೆ. ಇದು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಯಬೇಕು. ಈ ವರ್ಷ 120 ಜಾಗಗಳಲ್ಲಿ 1.20 ಲಕ್ಷ ಜನರನ್ನು ಸೇರಿಸಿ ದಾಖಲೆ ಮಾಡಲು ಹೊರಟಿರುವುದು ಸಂತೋಷ ಎಂದರು.
ಯೋಗಕ್ಕೆ ಮಹತ್ವ ಇರುವ ಮೈಸೂರಿನಲ್ಲಿ ಮಹಾ ಸಂಕಲ್ಪದಲ್ಲಿ ಭಾಗವಹಿಸಿರುವುದು ಖುಷಿ ನೀಡಿದೆ. ಮೈಸೂರಿನ ಯೋಗ ಪರಂಪರೆಗೆ ಮುಮ್ಮಡಿ ಕೃಷ್ಣರಾಜ ಕಾಲಕ್ಕಿಂತಲೂ ಪ್ರಾಚೀನವಾದ ಇತಿಹಾಸವಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಯೋಗ ಗುರು ಕೃಷ್ಣಮಾಚಾರಿ ಅವರ ಸಂಬAಧದೊAದಿಗೆ ಮೈಸೂರು ಯೋಗಕ್ಕೆ ಹೆಸರಾಗಿದೆ. ನಮ್ಮ ಪೂರ್ವಿಕರು ಸಂಗೀತ, ಸಂಸ್ಕöÈತಿಯ ಯೋಗದ ಪರಂಪರೆಗೆ ಪ್ರೋತ್ಸಾಹ ನೀಡಿದ್ದರು ಎಂದು ಸ್ಮರಿಸಿದರು.
ಜಿಎಸ್‌ಎಸ್ ಯೋಗ ಸಂಸ್ಥೆಯ ಸಂಸ್ಥಾಪಕ ಶ್ರೀಹರಿ ದ್ವಾರಕನಾಥ್ ಮಾತನಾಡಿ, ಫಿಟ್ ಮೈಸೂರು ಮಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಮೈಸೂರಿಗೆ ಕರೆಸೋಣ ಎಂದರು.
ಮೈಸೂರಿಗರು ಶಿಸ್ತುಬದ್ಧ ಯೋಗಾಭ್ಯಾಸ ಮತ್ತು ಸಂಘಟನೆಯ ಮೂಲಕ ವಿಶ್ವ ಯೋಗ ದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೈಸೂರಿಗೆ ಕರೆಸಿಕೊಂಡಿದ್ದೆವು. ಈಗ ಫಿಟ್ ಮೈಸೂರು ಅಭಿಯಾನಕ್ಕೆ ಮತ್ತೊಮ್ಮೆ ಪ್ರಧಾನಿ ಕರೆಸಿಕೊಳ್ಳೋಣ ಎಂದು ಆಶಿಸಿದರು.
ನರೇಂದ್ರ ಮೋದಿ ಅವರು ಯೋಗ ದಿನ ಪ್ರಕಟಿಸಿದ ಮೊದಲ ವರ್ಷ ಮಳೆ ನಡುವೆಯೂ 10 ಸಾವಿರ ಜನ ಸೇರಿದ್ದೆವು. 55,506 ಸಾವಿರ ಜನ ಸೇರಿ ಯೋಗ ಮಾಡಿದ್ದು ದಾಖಲೆ ಆಗಿದೆ. ಕೋವಿಡ್ ಕಾಲದಲ್ಲೂ ಲಕ್ಷಾಂತರ ಜನ ಯೋಗ ಮಾಡಿದ್ದೆವು. ಈ ವರ್ಷ ಉದ್ಯಾನ, ಅಪಾರ್ಟ್ಮೆಂಟ್, ಶಾಲೆ ಸೇರಿದಂತೆ 120 ಜಾಗಗಳಲ್ಲಿ ಪ್ರತ್ಯೇಕವಾಗಿ ಯೋಗಾಭ್ಯಾಸ ನಡೆಸಲಾಗುವುದು. 1200 ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ 1.20 ಲಕ್ಷ ಜನ ಯೋಗ ಮಾಡಲಿದ್ದಾರೆ. ಇದಕ್ಕೆ ಸಂಘ- ಸಂಸ್ಥೆಗಳು, ಸುತ್ತೂರು ಮಠ, ಶಾಲಾ- ಕಾಲೇಜುಗಳು ಕೈಜೋಡಿಸಿವೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಭಾರತ್ ಸ್ವಾಭಿಮಾನ್ ಟ್ರಸ್ಟ್ ಸಂಸ್ಥಾಪಕ ಶಶಿಕುಮಾರ್, ಎಸ್‌ಪಿವೈಎಸ್‌ಎಸ್ ಸಂಸ್ಥೆಯ ನಂಜುAಡಸ್ವಾಮಿ, ಯೋಗ ಸ್ಪೋರ್ಟ್ ಫೌಂಡೇಶನ್ ಗಣೇಶ್ ಕುಮಾರ್, ಮೈಸೂರು ಯೋಗ ಒಕ್ಕೂಟ ಅಧ್ಯಕ್ಷ ಕೆ.ಜಿ.ದೇವರಾಜು, ಮೈಸೂರು ಯೋಗ ಅಸೋಸಿಯೇಷನ್ ಸಂಸ್ಥೆಯ ಅನಂತು, ಪ್ರಮುಖರಾದ ಸುಮಿತ್, ವೆಂಕಟೇಶ್, ರವಿಕುಮಾರ್ ಮುಂತಾದರಿದ್ದರು.