
ಈಗಿನ ಕಾಲದ ಜನರು ಏನು ಬೇಕಾದರೂ ಬಿಡ್ತಾರೆ, ಆದರೆ ಒಂದು ನಿಮಿಷವೂ ಮೊಬೈಲ್ ನೋಡುವುದನ್ನು ಬಿಡಲ್ಲ ಎನ್ನುತ್ತಾರೆ. ಅಷ್ಟು ಮಟ್ಟಿಗೆ ಮೊಬೈಲ್ ಗೆ ಅಡೀಟ್ ಆಗಿದ್ದಾರೆ. ಅದರಲ್ಲೂ ಈಗಿನ ಯುವ ಜನರಂತೂ ತಮ್ಮ ಮೊಬೈಲ್ ಇಲ್ಲದಿದ್ದರೆ ಬದುಕುವುದೇ ಕಷ್ಟ ಎನ್ನುವಷ್ಟರ ಮಟ್ಟಕ್ಕೆ ಅವಲಂಬಿತರಾಗಿದ್ದಾರೆ. ಆದರೆ ಅಷ್ಟೇ ಪ್ರಮಾಣದಲ್ಲಿ ರೋಗಗಳಿಗೆ ತುತ್ತಾಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ . ಸ್ಮಾರ್ಟ್ಫೋನ್‌ಗಳ ಅತಿಯಾದ ಬಳಕೆ ಮತ್ತು ನಿರಂತರವಾಗಿ ಸ್ಕಿçÃನ್‌ಗಳನ್ನು ನೋಡುತ್ತಾ ಕಾಲ ಕಳೆಯುವವರಲ್ಲಿ `ಟೆಕ್ಸ್÷್ಟ ನೆಕ್’ ಅಥವಾ ಟೆಕ್ ನೆಕ್ ಕಾಯಿಲೆಯ ಪ್ರಕರಣಗಳು ಬೆಂಗಳೂರಿನಲ್ಲಿ ತೀವ್ರವಾಗಿ ಹೆಚ್ಚುತ್ತಿವೆ. ಸದಾ ತಲೆ ತಗ್ಗಿಸಿ ಮೊಬೈಲ್ ನೋಡುವುದರಿಂದ ಕುತ್ತಿಗೆಯ ನರಗಳಿಗೆ ಗಂಭೀರ ಹಾನಿಯಾಗುತ್ತಿದ್ದು, ಇದು ಯುವ ಪೀಳಿಗೆಯಲ್ಲಿ ಒಂದು ಸಾಂಕ್ರಾಮಿಕದAತೆ ಹರಡುತ್ತಿದೆ ಎಂದು ರಾಜಧಾನಿಯ ತಜ್ಞ ವೈದ್ಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಮುಖ್ಯಾಂಶಗಳು
ತಲೆ ತಗ್ಗಿಸಿ ಸದಾ ಮೊಬೈಲ್ ಬಳಸುವುದರಿಂದ ಕುತ್ತಿಗೆಯ ನರಗಳಿಗೆ ಹಾನಿಯಾಗುತ್ತಿದೆ.
ಬೆಂಗಳೂರಿನ ಒಪಿಡಿಗಳಲ್ಲಿ ದಿನಕ್ಕೆ 2-3 ಟೆಕ್ಸ್÷್ಟ ನೆಕ್ ಪ್ರಕರಣಗಳು ದಾಖಲಾಗುತ್ತಿವೆ.
ನರಗಳ ಮೇಲಿನ ಒತ್ತಡ ಹೆಚ್ಚಾದರೆ ಕೈಗಳ ದೌರ್ಬಲ್ಯಕ್ಕೆ ಕಾರಣವಾಗಬಹುದು.
ಹಿಂದೆ ಈ ಸಮಸ್ಯೆ ಹೆಚ್ಚಾಗಿ ಕಂಪ್ಯೂಟರ್ ಮುಂದೆ ದೀರ್ಘಕಾಲ ಕೂರುವ ಡೆಸ್ಕ್ ಉದ್ಯೋಗಿಗಳಲ್ಲಿ ಅಥವಾ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಹದಿಹರೆಯದವರು ಮತ್ತು ಕಾಲೇಜು ವಿದ್ಯಾರ್ಥಿಗಳು ಒಪಿಡಿ ದಿನಕ್ಕೆ ಕನಿಷ್ಠ 2 ರಿಂದ 3 ಪ್ರಕರಣಗಳಂತೆ ಈ ಕಾಯಿಲೆಯ ಲಕ್ಷಣಗಳೊಂದಿಗೆ ಚಿಕಿತ್ಸೆಗೆ ಬರುತ್ತಿದ್ದಾರೆ. ಸಾಂಕ್ರಾಮಿಕ ರೋಗದ ನಂತರ ಶಿಕ್ಷಣ, ಉದ್ಯೋಗ ಮತ್ತು ಮನರಂಜನೆ ಎಲ್ಲವೂ ಆನ್‌ಲೈನ್ ಆಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹೊಸ್ಮತ್ ಆಸ್ಪತ್ರೆಯ ಹಿರಿಯ ಮೂಳೆರೋಗ ತಜ್ಞರಾದ ಡಾ. ವಿಜಯ್ ಗಿರೀಶ್ ಹೇಳಿದ್ದಾರೆ.
ನರಗಳ ಮೇಲಿನ ಒತ್ತಡ ಮತ್ತು ಲಕ್ಷಣಗಳು
ಪ್ರಕೃತಿ ಆಸ್ಪತ್ರೆಯ ಮೂಳೆರೋಗ ತಜ್ಞ ಡಾ. ಅಕ್ಷಯ್ ಟಿ.ಎಂ. ಹೇಳುವಂತೆ, ಸ್ಮಾರ್ಟ್ಫೋನ್ ಬಳಸುವಾಗ ತಲೆಯನ್ನು ಮುಂಭಾಗಕ್ಕೆ ಬಾಗಿಸುವುದರಿಂದ ಕುತ್ತಿಗೆಯ ಭಾಗದ ಬೆನ್ನುಮೂಳೆಯ ಮೇಲಿನ ಒತ್ತಡವು ಗಣನೀಯವಾಗಿ ಹೆಚ್ಚುತ್ತದೆ. ಇದು ಕುತ್ತಿಗೆಯ ಸ್ನಾಯುಗಳು, ಅಸ್ಥಿರಜ್ಜುಗಳು ಮತ್ತು ಕೀಲುಗಳ ತೀವ್ರ ಆಯಾಸಕ್ಕೆ ಕಾರಣವಾಗುತ್ತದೆ.
ಆರಂಭದಲ್ಲಿ ಕುತ್ತಿಗೆ ನೋವು ಮತ್ತು ಬಿಗಿತದಿಂದ ಶುರುವಾಗುವ ಈ ಸಮಸ್ಯೆ, ಕ್ರಮೇಣ ಭುಜದ ಮಧ್ಯಭಾಗಕ್ಕೆ ಹರಡುತ್ತದೆ. ನಂತರ ತಲೆನೋವು ಮತ್ತು ಆಯಾಸ ಕಾಣಿಸಿಕೊಳ್ಳುತ್ತದೆ. ಪರಿಸ್ಥಿತಿ ತೀವ್ರಗೊಂಡಾಗ ಕುತ್ತಿಗೆಯ ನರಗಳು ಹಾನಿಗೊಳಗಾಗಿ, ಕೈಗಳಿಗೆ ತೀವ್ರವಾದ ಶೂಟಿಂಗ್ ನೋವು ದಾಟುತ್ತದೆ ಮತ್ತು ಕೈಗಳಲ್ಲಿ ದೌರ್ಬಲ್ಯ ಅಥವಾ ಮರಗಟ್ಟುವಿಕೆ ಉಂಟಾಗುತ್ತದೆ. ಉದಾಹರಣೆಗೆ, ಬೆಂಗಳೂರಿನ 28 ವರ್ಷದ ಐಟಿ ಉದ್ಯೋಗಿಯೊಬ್ಬರು ನಿರಂತರ ಸ್ಕಿçÃನ್ ಸಮಯ ಮತ್ತು ತಪುö್ಪ ಭಂಗಿಯಿAದಾಗಿ ಕೈಗಳ ಸಂಪೂರ್ಣ ಶಕ್ತಿ ಕಳೆದುಕೊಂಡು, ಕೊನೆಗೆ ಜಟಿಲವಾದ ಸರ್ಜರಿಗೆ ಒಳಗಾಗಬೇಕಾಯಿತು ಎಂದು ಅಪೊಲೊ ಕ್ಲಿನಿಕ್‌ನ ತಜ್ಞರಾದ ಡಾ. ಅರ್ನವ್ ಪಿ. ಉರ್ಸ್ ಹೇಳಿದ್ದಾರೆ.
ವೈದ್ಯರ ಪ್ರಕಾರ, ಆರಂಭಿಕ ಹಂತದಲ್ಲಿ ಸೂಕ್ತ ಭಂಗಿ ತಿದ್ದುಪಡಿ, ಎರ್ಗೋನಾಮಿಕ್ ಬದಲಾವಣೆಗಳು ಮತ್ತು ಕುತ್ತಿಗೆಯ ಸ್ನಾಯುಗಳನ್ನು ಬಲಪಡಿಸುವ ಫಿಸಿಯೋಥೆರಪಿ ಮೂಲಕ ಇದಕ್ಕೆ ಚಿಕಿತ್ಸೆ ನೀಡಬಹುದು. ಆದರೆ, ಮೊಬೈಲ್ ಇಲ್ಲದೆ ಇರಲು ಸಾಧ್ಯವೇ ಇಲ್ಲ ಎನ್ನುವ ನೋಮೋಫೋಬಿಯಾ' ಮತ್ತು ಬೆಡ್ ಮೇಲೆ ಮಲಗಿ ಗಂಟೆಗಟ್ಟಲೆ ರೀಲ್ಸ್ ವೀಕ್ಷಿಸುವಡೂಮ್‌ಸ್ಕೊçÃಲಿಂಗ್’ ಚಟದಿಂದಾಗಿ ಜನರು ಸ್ಕಿçÃನ್ ಸಮಯವನ್ನು ಕಡಿಮೆ ಮಾಡುತ್ತಿಲ್ಲ. ಇದು ಚಿಕಿತ್ಸೆಗೆ ದೊಡ್ಡ ಅಡ್ಡಿಯಾಗಿದೆ. ಮೊಬೈಲ್ ಫೋನ್‌ಗಳನ್ನು ಕಣ್ಣಿನ ನೇರ ಮಟ್ಟದಲ್ಲಿಟ್ಟುಕೊಳ್ಳುವುದು ಮತ್ತು ಪ್ರತಿ 20 ನಿಮಿಷಗಳಿಗೊಮ್ಮೆ ಕುತ್ತಿಗೆಗೆ ವಿರಾಮ ನೀಡುವುದು ಅತ್ಯಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.