
*ಶಾಲೆಗೆ ಬಂದ ಮಕ್ಕಳಿಗೆ ಅದ್ಧೂರಿ ಸ್ವಾಗತ,
ಆರತಿ ಬೆಳಗಿದರು, ಪುಸ್ತುಗಳು, ಹೂವುಗಳನ್ನು ನೀಡಿ ಸ್ವಾಗತಿಸಿದರು.
ಸರ್ಕಾರಿ ಶಾಲೆಗಳು ಇಂದು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿವೆ: ಶಾಸಕ ಟಿ.ಶ್ರೀವತ್ಸ
ಮೈಸೂರು: ಜಿಲ್ಲೆಯಲ್ಲಿ ಶಾಲೆಗಳು ಆರಂಭವಾಗಿದ್ದು, ಮಕ್ಕಳ ಕಲರವ ಶುರುವಾಗಿದೆ. ಸೋಮವಾರ ಶಾಲೆಗಳ ಬಾಗಿಲು ತೆರೆಯುತ್ತಿದ್ದಂತೆ ಶಾಲೆಗಳಿಗೆ ಆಗಮಿಸಿದ ಮಕ್ಕಳಿಗೆ ಶಾಸಕರು, ಅಧಿಕಾರಿಗಳು, ಶಾಲಾಭಿವೃದ್ಧಿ ಸಮಿತಿಯವರು, ವಿವಿಧ ಸಂಘ, ಸಂಸ್ಥೆಗಳವರು ಭರ್ಜರಿ ಸ್ವಾಗತವನ್ನು ನೀಡಿ, ಬರಮಾಡಿಕೊಂಡರು. ಕೆಲವಡೆ ಮಕ್ಕಳಿಗೆ ಆರತಿ ಬೆಳಗಿ, ಹೂವುಗಳನ್ನು ನೀಡಿದರೆ, ಮತ್ತೆ ಹಲವಡೆ ಮಕ್ಕಳಿಗೆ ಪುಸ್ತಕ, ಸಿಹಿಯನ್ನು ನೀಡಿ ಸ್ವಾಗತಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಮೈಸೂರು ದಕ್ಷಿಣ ವಲಯದ ವ್ಯಾಪ್ತಿಯಲ್ಲಿ ತಾಲ್ಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಮತ್ತು ಮಹಾ ಪೋಷಕ ಸಭೆಯನ್ನು ಕರ್ನಾಟಕ ಪಬ್ಲಿಕ್ ಶಾಲೆ ಕುವೆಂಪುನಗರದಲ್ಲಿ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ. ಶ್ರೀವತ್ಸ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಕಾಲ ಈಗ ದೂರವಾಗಿದೆ. ಗುಣಮಟ್ಟದ ಶಿಕ್ಷಣ ಮತ್ತು ಅತ್ಯಾಧುನಿಕ ಸೌಲಭ್ಯಗಳ ಮೂಲಕ ಸರ್ಕಾರಿ ಶಾಲೆಗಳು ಇಂದು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿವೆ” ಎಂದು ಹೇಳಿದರು.
ಸರ್ಕಾರಿ ಶಾಲೆಯಲ್ಲಿ 2023ರಲ್ಲಿ ಎಸ್.ಎಸ್.ಎಲ್.ಸಿಯಲ್ಲಿ 620 ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಕೇವಲ 4 ಇತ್ತು. ಇದು ಏರಿಕೆಯಾಗುತ್ತಿದ್ದು, ಗುಣಾತ್ಮಕ ಶಿಕ್ಷಣಕ್ಕೆ ಸರ್ಕಾರಿ ಶಾಲೆಗಳು ಸಹ ಸಾಕ್ಷಿಯಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳಲ್ಲಿ ಇಂದು ಹೊಸ ಕಟ್ಟಡಗಳು, ಅತ್ಯಾಧುನಿಕ ಶೌಚಾಲಯಗಳು ಮತ್ತು ಪೂರಕವಾದ ಶೈಕ್ಷಣಿಕ ವಾತಾವರಣ ನಿರ್ಮಾಣವಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳಲ್ಲಿ ‘ಸ್ಟೆಮ್ ಲ್ಯಾಬ್ ಗಳ ಸ್ಥಾಪನೆಯಾಗಿದ್ದು, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ಲಭ್ಯವಾಗುತ್ತಿದೆ ಎಂದರು.
ಕಾರ್ಯಕ್ರಮಕ್ಕೆ ಶಿಕ್ಷಕರು ಬಹಳ ಉತ್ಸಾಹದಿಂದ ಮತ್ತು ವರ್ಣರಂಜಿತವಾಗಿ ಆಗಮಿಸಿದ್ದಾರೆ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಶ್ರಮ ಅನನ್ಯ ಎಂದರು.
ಉತ್ತಮ ಕಲಿಕೆ, ಉಜ್ಜಲ ಭವಿಷ್ಯ” ಘೋಷವಾಕ್ಯದಡಿ ನಡೆದ ಪ್ರಾರಂಭೋತ್ಸವದಲ್ಲಿ ಮುಖ್ಯಶಿಕ್ಷಕರು, ಶಿಕ್ಷಕರು, ಎಸ್ಡಿಎಂಸಿ ಪದಾಧಿಕಾರಿಗಳು, ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸಿದರು.
ಜಾಗೃತಿ ಮೆರವಣಿಗೆ: ಸೇರಿರಿ ಸೇರಿರಿ ಸರ್ಕಾರಿ ಶಾಲೆಗೆ ಸೇರಿ’, ‘ವಿದ್ಯೆಯೇ ಜೀವನದ ಆಧಾರ’ ಎಂಬ ಫಲಕಗಳನ್ನು ಹಿಡಿದು ವಿದ್ಯಾರ್ಥಿಗಳು ಜಾಗೃತಿ ಮೂಡಿಸಿದರು
ಕಾರ್ಯಕ್ರಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗ ಮತ್ತಿತರರು ಉಪಸ್ಥಿತರಿದ್ದರು
ಆರತಿ ಬೆಳಗಿ,ಪುಷ್ಪವೃಷ್ಟಿ ಮೂಲಕ ವಿದ್ಯಾರ್ಥಿಗಳನ್ನು ಸಂಭ್ರಮದಿAದ ಸ್ವಾಗತಿಸಿದರು
ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯನ್ನು ಹಸಿರು ತೋರಣದಲ್ಲಿ ಶಾಲೆಯನ್ನು ಸಿಂಗರಿಸಿ
ಆರತಿ ಬೆಳಗಿ,ಪುಷ್ಪವೃಷ್ಟಿ ,ಸಿಹಿ ವಿತರಿಸಿ ಮಕ್ಕಳಿಗೆ ಹೂಗೊಚ್ಚ ನೀಡಿ ಸಂಭ್ರಮದಿAದ ಸ್ವಾಗತಿಸಿದ ಶಿಕ್ಷಕರುಗಳು ಈ ಸಂದರ್ಭದಲ್ಲಿ ಅಪೂರ್ವ ಸ್ನೇಹ ಬಳಗ ಹಾಗೂ ಹಳೆಯ ವಿದ್ಯಾರ್ಥಿನಿ ರಮ್ಯಾ ಇವರು ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ಪೌಚ್ ಪೆನ್ನು ಪೆನ್ಸಿಲನ್ನು ಕೊಡುಗೆ ನೀಡಿದರು.
ಈ ಸಂದರ್ಭದಲ್ಲಿ ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್,ನಜರ್ಬಾದ್ ನಟರಾಜ್, ರವಿ ಶಾಸ್ತಿç,ಮಾಜಿನಗರ ಪಾಲಿಕಾ ಸದಸ್ಯರಾದ ಜಗದೀಶ್, ಶಿಕ್ಷಕರು ಶಿವಯ್ಯ , ಸಹ ಶಿಕ್ಷಕಿ
ಕುಮಾರಿಶಿಲ್ಪ, ನಾಗರತ್ನ ,ದಳವಾಯಿ ಪ್ರೌಢಶಾಲೆ ಮಹಾದೇವ ,ಶಿಕ್ಷಕರು ಮಮತಾ ಕುಮಾರಿ ,ಹಳೆಯ ವಿದ್ಯಾರ್ಥಿನಿ ರಮ್ಯಾ,ಎಸ್ ಎನ್ ರಾಜೇಶ್ ,ಶಿವಲಿಂಗ ಸ್ವಾಮಿ,ಜತ್ತಿ ಪ್ರಸಾದ್ ಹಾಗೂ ಇನ್ನಿತರರು ಹಾಜರಿದ್ದರು
ಶಾಲಾ ಪ್ರಾರಂಭೋತ್ಸವ ಮೈಸೂರು ಜಿಲ್ಲಾಡಳಿತದಿಂದ ಶಾಲಾ ಮಕ್ಕಳಿಗೆ ಸ್ವಾಗತ;
ಜಿಲ್ಲೆಯ ನಂಜನಗೂಡು ತಾಲೂಕಿನ ನಗರದ ಹೃದಯ ಭಾಗದಲ್ಲಿರುವ ಹಳ್ಳದ ಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇಂದು ಅಪರ ಜಿಲ್ಲಾಧಿಕಾರಿ ಐಶ್ವರ್ಯ ರವರು ಮಕ್ಕಳಿಗೆ ಗುಲಾಬಿ ಹಾಗೂ ಸಿಹಿ ನೀಡುವುದರ ಮುಖಾಂತರ ಮಕ್ಕಳನ್ನು ಶಾಲೆಗೆ ಸ್ವಾಗತಿಸಿದರು.
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗಲಿ ಎಂದು ದಾಖಲಾತಿ ಆಂದೋಲನಕ್ಕೆ ಹಸಿರು ನಿಶಾನೆ ತೋರಿ ಶುಭಾಶಯ ಕೋರಿದರು
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಸರ್ಕಾರದ ಸೌಲಭ್ಯಗಳಾದ ಉಚಿತ ಪಠ್ಯ ಪುಸ್ತಕ ಸಮವಸ್ತçಗಳನ್ನು ನೀಡಿ, ಮಕ್ಕಳು ಚೆನ್ನಾಗಿ ಓದಿ ಸಮಾಜಕ್ಕೆ ಉತ್ತಮ ಪ್ರಜೆಗಳಾಗಬೇಕು. ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ಕ್ಷೇತ್ರಧಿಕಾರಿ ಎಂ ಮಹೇಶ್, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಬಸವರಾಜು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸೋಮಶೇಖರ್ ಸಿಆರ್ ಪಿ ಗಂಗಾಧರ್ ಮುಂತಾದವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಭಾರತೀಯ ಜಿಗಲಿಯಂಟ್ ಫೌಂಡೇಶನ್ ಅವರು ಮಕ್ಕಳಿಗೆ ನೀಡುವ ಉಚಿತ ಮೊಬೈಲ್ ಕಂಪ್ಯೂಟರ್ ಬಸ್ ಅನ್ನು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು