
ನಂಜನಗೂಡು: ದಕ್ಷಿಣ ಕಾಶಿ ಎಂದು ಪ್ರಸಿದ್ಧಿಯಾಗಿರುವ ನಂಜನಗೂಡು ಪಟ್ಟಣದಲ್ಲಿ ವಿಜೃಂಭಣೆಯಿAದ ಹನುಮ ಜಯಂತಿಯನ್ನು ಆಚರಣೆ ಮಾಡಲಾಯಿತು.
ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಮುಂಭಾಗ ಏರ್ಪಡಿಸಲಾಗಿದ್ದ ಹನುಮ ಜಯಂತಿ ಕಾರ್ಯಕ್ರಮವನ್ನು ಸಿದ್ದಲಿಂಗಸ್ವಾಮೀಜಿ, ಇಮ್ಮಡಿ ಮುರುಗಿ ಸ್ವಾಮೀಜಿ, ಪಟ್ಟದ ನಾಗರಾಜ ಸ್ವಾಮೀಜಿ, ಜ್ಞಾನಾನಂದ ಚೆನ್ನ ರಾಜ ಅರಸ್ ಸ್ವಾಮೀಜಿ, ಮಾಜಿ ಶಾಸಕ ಹರ್ಷವರ್ಧನ್ ಅವರು ಹನುಮ ಮತ್ತು ಶ್ರೀ ರಾಮ ಮೆರವಣಿಗೆಯ ಪ್ರತಿಮೆಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾಜಿ ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, “ಪ್ರತಿ ವರ್ಷ ಹನುಮ ಜಯಂತಿ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ಹನುಮ ಜಯಂತಿಯು ಯುವಕರಿಗೆ ಭಾತೃತ್ವ ಮತ್ತು ಸ್ವಾತಂತ್ರದ ಸಂಕೇತವಾಗಿದೆ” ಎಂದು ತಿಳಿಸಿದರು. ಬಳಿಕ ಆರಂಭವಾದ ಹನುಮನ ಪ್ರತಿಮೆಯ ಮೆರವಣಿಗೆಯಲ್ಲಿ ಸುಮಾರು 38 ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು. ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಸಾಗಿತು. ಸಾವಿರಾರು ಹಿಂದೂ ಕಾರ್ಯಕರ್ತರು ಭಾಗವಹಿಸಿ, ಜೈ ಶ್ರೀರಾಮ್ ಘೋಷಣೆಗಳನ್ನು ಮೊಳಗಿಸಿದರು. ಮೆರವಣಿಗೆ ಭಾಗವಹಿಸಿದ್ದ ಜಾನಪದ ಕಲಾತಂಡಗಳು ಆಕರ್ಷಕ ಪ್ರದರ್ಶನ ನೀಡಿದವು. ಕೇಸರಿ ಭಾವುಟಗಳು ಹಾರಾಡಿದವು. ನೂರಾರು ಮಂದಿ ಯುವಕರು ವೀರ ಹನುಮನಿಗೆ ಜಯಕಾರ ಹಾಕಿ, ಹಾಡಿ ಕುಣಿದರು.ಯಾವುದೇ ಅಹಿತಕರ ಘಟನೆ ನಡಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಹಾಗೆಯೇ ನಂಜನಗೂಡು ನಂಜನಗೂಡು ನಗರದಾದ್ಯಂತ ಬಂದೋ ಬಸ್ತ್ಗಾಗಿ ಎಸ್‌ಪಿ, 2 ಎಎಸ್ಪಿ, 5 ಡಿವೈಎಸ್ಪಿ, 17 ಇನ್ಸೆ÷್ಪಕ್ಟರ್, 43 ಪಿಎಸ್‌ಐ, 89 ಎಎಸ್‌ಐ, 4 ಕೆಎಸ್‌ಆರ್‌ಪಿ, 3 ಕ್ಯೂಆರ್‌ಡಿ, 4 ಡಿಆರ್ ಸೇರಿದಂತೆ ಒಟ್ಟು 550 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.