3Kaala News

ಸುಭಾಷಿತ 

ಒಬ್ಬರ ಯಶಸ್ಸನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದಾರೆಂದರೆ,
ಅವರಲ್ಲಿ ಶ್ರಮಪಡುವ ಯೋಗ್ಯತೆಯೂ ಇಲ್ಲ,
ಆ ಯಶಸ್ಸಿನ ಹಿಂದಿರುವ ಕಷ್ಟಗಳನ್ನು ಅರಿಯುವ ಯೋಗ್ಯತೆಯೂ ಇಲ್ಲ ಎಂದೇ ಅರ್ಥ.
ಸೋಮಾರಿಗಳ ಕಣ್ಣಿಗೆ ಸಾಧನೆ ಯಾವತ್ತೂ ಅದೃಷ್ಟದಂತೆ ಕಾಣುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸಮೃದ್ಧ, ರೋಗನಿರೋಧಕ ಶಕ್ತಿ ನುಗ್ಗೆ ಸೊಪ್ಪು!


ವಿಟಮಿನ್, ಕಬ್ಬಿಣ, ಆ0ಟಿ ಆಕ್ಸಿಡೆಂಟ್ಗಳಿ0ದ ಸಮೃದ್ಧ, ರೋಗನಿರೋಧಕ ಶಕ್ತಿ ಹೊಂದಿರುವ ಆಹಾರ ಯಾವುದು ಗೊತ್ತಾ.. ಅದು ನುಗ್ಗೆ ಸೊಪ್ಪು! ಹೌದು ನುಗ್ಗೆ ಸೊಪ್ಪು. ಇದನ್ನು ತಿನ್ನುವ್ಯದರಿಂದ ಏನೆಲ್ಲಾ ದೈಹಿಕ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ. ನುಗ್ಗೆ ಸೊಪ್ಪಿನ ದೋಸೆ ಮಾಡಿಕೊಂಡು ತಿಂದಿದ್ದಿರಾ !
ಎಲುಬು, ಮಧುಮೇಹ, ಹೃದಯ ಆರೋಗ್ಯಕ್ಕೆ ಸಹಕಾರಿ, ಪಲ್ಯ, ದೋಸೆ, ಸೂಪ್ ರೂಪದಲ್ಲಿ ಸೇವನೆ ಹೆಚ್ಚುತ್ತಿದೆ. ನುಗ್ಗೆ ಸೊಪ್ಪಿನಲ್ಲಿರುವ ಆಂಟಿ ಆಕ್ಸಿಡೆಂಟ್ಗಳು ದೇಹವನ್ನು ವಿವಿಧ ಸೋಂಕುಗಳು ಮತ್ತು ಕಾಯಿಲೆಗಳಿಂದ ರಕ್ಷಿಸುತ್ತವೆ. ಮಧುಮೇಹ, ರಕ್ತದೊತ್ತಡ ಹಾಗೂ ಹೃದಯ ಸಂಬAಧಿ ಸಮಸ್ಯೆಗಳನ್ನು ನಿಯಂತ್ರಿಸಲು ಸಹ ಇದು ಸಹಕಾರಿ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಕಡಿಮೆ ವೆಚ್ಚದಲ್ಲಿ ಹೆಚ್ಚು ಪೌಷ್ಟಿಕಾಂಶಗಳನ್ನು ನೀಡುವ ಈ ಸೊಪ್ಪು ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನರ ಆಹಾರ ಪದ್ಧತಿಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ.
ನುಗ್ಗೆ ಸೊಪ್ಪಿನ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳು ನುಗ್ಗೆ ಸೊಪ್ಪು 2 ಕಪ್, ಈರುಳ್ಳಿ 1, ಹಸಿಮೆಣಸು 2, ಸಾಸಿ, ಉದ್ದಿನಬೇಳೆ ತಲಾ 1 ಟೀ ಸ್ಪೂನ್, ತೆಂಗಿನ ತುರಿ 2 ಚಮಚ, ಉಪುö್ಪ, ಎಣ್ಣೆ. ಮಾಡುವ ವಿಧಾನ ಒಗ್ಗರಣೆ ಮಾಡಿ ಈರುಳ್ಳಿ ಬಾಡಿಸಿ. ನಂತರ ನುಗ್ಗೆ ಸೊಪುö್ಪ ಸೇರಿಸಿ ಬೇಯಿಸಿ. ಉಪುö್ಪ ಹಾಗೂ ತೆಂಗಿನ ತುರಿ ಸೇರಿಸಿ ಕಲಸಿದರೆ ಪಲ್ಯ ಸಿದ್ಧ.
ನುಗ್ಗೆ ಸೊಪ್ಪಿನ ದೋಸೆ ಮಾಡಲು ಬೇಕಾಗುವ ಪದಾರ್ಥಗಳು ದೋಸೆ ಹಿಟ್ಟು 2 ಕಪ್, ನುಗ್ಗೆ ಸೊಪ್ಪು1 ಕಪ್, ಹಸಿಮೆಣಸು 2, ಜೀರಿಗೆ ಅರ್ಧ ಟೀ ಸ್ಪೂನ್, ಉಪುö್ಪ.ನುಗ್ಗೆ ಸೊಪುö್ಪ ಮತ್ತು ಹಸಿಮೆಣಸನ್ನು ಸಣ್ಣದಾಗಿ ಕತ್ತರಿಸಿ ದೋಸೆ ಹಿಟ್ಟಿಗೆ ಸೇರಿಸಿ. ಜೀರಿಗೆ ಮತ್ತು ಉಪುö್ಪ ಹಾಕಿ ಕಲಸಿ ಬಿಸಿ ತವೆಯಲ್ಲಿ ದೋಸೆಯಂತೆ ಹರಡಿ ಬೇಯಿಸಬೇಕು. ಚಟ್ನಿಯೊಂದಿಗೆ ಸವಿಯಬಹುದು.
ನುಗ್ಗೆ ಸೊಪ್ಪಿನ ಸೂಪ್ ಮಾಡಲು ಬೇಕಾಗುವ ಪದಾರ್ಥಗಳು ನುಗ್ಗೆ ಸೊಪ್ಪು 1 ಕಪ್, ಈರುಳ್ಳಿ 1, ಬೆಳ್ಳುಳ್ಳಿ 3 ಎಸಳು, ಮೆಣಸು ಪುಡಿ ಅರ್ಧ ಟೀ ಸ್ಪೂನ್, ಉಪುö್ಪ, ಬೆಣ್ಣೆ 1 ಚಮಚ. ಬೆಣ್ಣೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಾಡಿಸಿ. ನುಗ್ಗೆ ಸೊಪುö್ಪ ಹಾಗೂ 2 ಕಪ್ ನೀರು ಸೇರಿಸಿ 10 ನಿಮಿಷ ಕುದಿಸಬೇಕು. ನಂತರ ತಣ್ಣಗಾದ ಮೇಲೆ ರುಬ್ಬಿ ಮತ್ತೆ ಕುದಿಸಿ ಉಪುö್ಪ ಮತ್ತು ಮೆಣಸು ಪುಡಿ ಸೇರಿಸಿದರೆ ಪೌಷ್ಟಿಕಾಂಶಯುಕ್ತ ಸೂಪ್ ಸಿದ
ಆರೋಗ್ಯ ಹಾಗೂ ರುಚಿಯ ಸಮನ್ವಯವಾಗಿರುವ ನುಗ್ಗೆ ಸೊಪ್ಪಿನ ಈ ಮೂರು ತಿನಿಸುಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಆದ್ದರಿಂದ ನುಗ್ಗೆ ಸೊಪ್ಪನ್ನು ನಿಯಮಿತವಾಗಿ ಆಹಾರದಲ್ಲಿ ಸೇರಿಸಿಕೊಳ್ಳುವುದು ಆರೋಗ್ಯಕರ ಜೀವನಶೈಲಿಗೆ ಉತ್ತಮ ಆಯ್ಕೆಯಾಗಿದೆ.ಭಾರತದಲ್ಲಿ ವ್ಯಾಪಕವಾಗಿ ಬಳಸಲಾಗುವ “ಮಿರಾಕಲ್ ಟ್ರೀ” ಅಥವಾ ಸೂಪರ್ಫುಡ್ ಎಂದು ಪರಿಗಣಿತವಾಗಿದೆ. ನಿಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದಂತೆ, ಇದು ಆಂಟಿ-ಆಕ್ಸಿಡೆAಟ್ಗಳಿAದ ಸಮೃದ್ಧವಾಗಿದೆ ಮತ್ತು ವಿವಿಧ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ