
ಮೈಸೂರು; ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾಡಿರುವ ಅಭಿವೃದ್ಧಿ ಕೆಲಸ, ಆಡಳಿತ ಎಲ್ಲರಿಗೂ ಮಾರ್ಗದರ್ಶಕವಾಗಿದೆ; ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.
ಮೈಸೂರಿನ ಇಟ್ಟಿಗೆಗೂಡಿನಲ್ಲಿರುವ ಮಾರಿಯಮ್ಮನ ಸಮುದಾಯ ಭವನದಲ್ಲಿ ಟೀಂ ಮೈಸೂರು ತಂಡದ ವತಿಯಿಂದ ಏರ್ಪಡಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ 142ನೇ ಜಯಂತಿ ಹಾಗೂ 2025 – 26ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇಕಡ 85ಕ್ಕೂ ಹೆಚ್ಚು ಅಂಕಗಳನ್ನು ಪಡೆದು ತೇಗರ್ಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈಸೂರು ಸಂಸ್ಥಾನವನ್ನಾಳಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಸದಾ ಕಾಲ ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಬೇಕಾದುದು, ನಮ್ಮಂತಹ ರಾಜಕೀಯ ಪ್ರತಿನಿಧಿಗಳಿಗೆ ಅವರ ಮಾಡಿರುವ ಸಮಾಜಮುಖಿ ಕಾರ್ಯಗಳು ಸ್ಫೂರ್ತಿದಾಯಕವಾದುದು ಮತ್ತು ಅನುಕರಣೀಯವಾದುದು ಎಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಸ್ಮರಿಸಿದರು. ಪ್ರತಿಭೆಗೆ ಮನ್ನಣೆ ನೀಡುವ ಇಂತಹ ವಿಶಿಷ್ಟ ಸೇವಾಕಾರ್ಯವನ್ನು , ನಿಸ್ವಾರ್ಥ ಸಾಮಾಜಿಕ ಸೇವೆಯನ್ನು ಸಲ್ಲಿಸುತ್ತಿರುವ ಟೀಂ ಮೈಸೂರಿನ ಕಾರ್ಯ ವೈಖರಿಗಳ ಬಗ್ಗೆ ಸಂತಸ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ.ಆರ್. ನಾಗರಾಜ್ ಮಾತನಾಡಿ, ಪತ್ರಿಭೆ ಎಲ್ಲರಲ್ಲಿಯೂ ಇರುತ್ತದೆ, ಅದನ್ನು ಗುರುತಿಸಿ ಪ್ರೋತ್ಸಾಹ ನೀಡುವುದು ಮುಖ್ಯ ಎಂದು ತಿಳಿಸಿದರು. ವಿದ್ಯಾರ್ಥಿಗಳ ಸಾಧನೆಯ ಹಿಂದೆ ಶಿಕ್ಷಕರ, ಪೋಷಕರ ಶ್ರಮವೂ ಇರುತ್ತದೆ, ಅವರನ್ನು ಮರೆಯಬಾರದೆಂಬ ಕಿವಿಮಾತನ್ನು ಹೇಳಿದರು. ಅಂಕಗಳಿಗಿAತ ನಿಮ್ಮ ವ್ಯಕ್ತಿತ್ವ ಮುಖ್ಯ, ಆತ್ಮವಿಶ್ವಾಸ ಪ್ರಧಾನವಾದುದು ಎಂದು ತಿಳಿಸಿದರು. ಪ್ರತಿಭೆ ಎಲ್ಲರಲ್ಲಿಯೂ ಅಡಗಿರುತ್ತದೆ, ಅದನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ ಎಂದು ತಿಳಿಸಿದರು. ಅಂಕಗಳಿಗಿAತ ಜ್ಞಾನ ಮುಖ್ಯವಾದುದು, ನಿಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಿ ಅಪಮಾನಿಸಬೇಡಿ ಎಂದು ಪೋಷಕರಿಗೆ ತಿಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಟೀಂ ಮೈಸೂರು ತಂಡದ ಸಂಚಾಲಕರಾದ ಗೋಕುಲ್ ಗೋವರ್ಧನ್ ರವರು, ತಮ್ಮ ತಂಡ ಹಸಿರು ಮೈಸೂರು ಅಭಿಯಾನದಡಿಯಲ್ಲಿ ಗಿಡಗಳನ್ನು ನೆಟ್ಟು, ಪಾಲನೆ ಪೋಷಣೆಯನ್ನು ಮಾಡಿ ಬೆಳೆಸುತ್ತಿರುವ ಪರಿಸರ ಕಾಳಜಿ ಬಗ್ಗೆ ತಿಳಿಸಿದರು. ದೇಶಭಕ್ತರ ಜಯಂತಿ, ಯೋಧರ ಸ್ಮರಣೆ ಹಾಗೂ ಇನ್ನಿತರ ಉಪಯುಕ್ತ ಕಾರ್ಯಕ್ರಮಗಳ ಮೂಲಕ ಜನರಲ್ಲಿ ದೇಶಭಕ್ತಿ ಮೂಡಿಸುತ್ತಿರುವುದಕ್ಕಾಗಿ ತಮ್ಮ ತಂಡ ಶ್ರಮಿಸುತ್ತಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದರು. ಸಮಾಜಕ್ಕೆ ತಮ್ಮಿಂದಾದ ಸೇವೆಯನ್ನು ಮಾಡುವ ಮೂಲಕ ಸಮಾಜದ ಋಣವನ್ನು ತೀರಿಸಬೇಕೆಂಬ ಸಲಹೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಇದೇ ವೇಳೆ ಎಸ್.ಎಸ್.ಎಲ್.ಸಿ ಯ 35 ಮತ್ತು ಪಿ.ಯು.ಸಿ. ಯ 17 ವಿದ್ಯಾರ್ಥಿಗಳಿಗೆ ಶಾಸಕ ಟಿ.ಎಸ್. ಶ್ರೀವತ್ಸ ರವರು, ನಿವೃತ್ತ ಪ್ರಾಧ್ಯಾಪಕರಾದ ನಾಗರಾಜ್ ರವರು ಹಾಗೂ ಪ್ರಕಾಶ್, ನಗರಪಾಲಿಕೆ ಮಾಜಿ ಸದಸ್ಯೆ ಛಾಯಾ ನವೀನ್, ತಂಡದ ಗೋಕುಲ್ ಗೋವರ್ಧನ್ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಟೀಂ ಮೈಸೂರು ತಂಡದ ಸದಸ್ಯ ಹರೀಶ್ ವಿ.ಶೆಟ್ಟಿ, ಕಿರಣ್ ಜೈರಾಮ್ ಗೌಡ, ಅನಿಲ್ ಜೈನ್, ಹರೀಶ್ ಬಾಬು, ಮುರಳಿ, ಶಿವಪ್ರಸಾದ್, ಅಭಿನಂದನ್, ಯತೀಶ್, ತ್ರಿಮೂರ್ತಿ, ದಾಮೋದರ್, ಮನೋಹರ್, ಹರೀಶ್ ಶೆಟ್ಟಿ, ಸುಂದರ್ ಮೂರ್ತಿ, ಹರೀಶ್ ಇಟ್ಟಿಗೆಗೂಡು, ಶೇಖರ್, ಗಣೇಶ್ ಪ್ರಸಾದ್, ಹೇಮಂತ್, ಪ್ರಸನ್ನ ರಾಜ್ ಗುರು, ರಾಘವೇಂದ್ರ, ಬಸವರಾಜ್ ಬಳ್ಳಾರಿ, ತಿಲಕ್, ಹರೀಶ್ ಗೋಕುಲಂ, ಸಚಿನ್, ಕೃಷ್ಣ, ಮಂಜು ಬಂಕ್, ಹರೀಶ್ ಫಾರ್ಮ, ಜಯಂತ್, ವೈಶಾಖ್, ಶ್ರೀಮತಿ ಸಹನಾ, ಸುಕೃತ, ನಂದಿನಿ, ಭಾಂದವ್ಯ, ಕುಮಾರಿ ಕಲ್ಯಾಣಿ ಹಾಗೂ ಇನ್ನಿತರರು ಹಾಜರಿದ್ದರು.