
ಯಾವ್ಯಾವ ಸೆಲೆಬ್ರಿಟಿಗಳೂ ಹೋಗ್ತಾರೆ ಗೊತ್ತಾ
ಬೆಂಗಳೂರು: ‘ಕಲರ್ಸ್ ಕನ್ನಡ’ದ ಕನ್ನಡದ ಬಿಗ್ ಬಾಸ್ 13ನೇ ಸೀಸನ್ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಮೂಲಗಳ ಪ್ರಕಾರ, ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಗ್ ಬಾಸ್ ಶುರುವಾಗುವ ನಿರೀಕ್ಷೆಯಿದೆ.
ಈ ಬಾರಿ ಸಾಮಾನ್ಯರಿಗೆ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳಾಗುವ ಅವಕಾಶವಿದೆ.
ತಾವು ‘ಬಿಗ್ ಬಾಸ್’ಗೆ ಯಾಕೆ ಹೋಗಬೇಕೆನ್ನುವ 3 ನಿಮಿಷದ ವಿಡಿಯೋವನ್ನು ‘ಕಲರ್ಸ್ ಕನ್ನಡ’ಕ್ಕೆ ಕಳುಹಿಸಬೇಕು ಆ ಮೂಲಕ ಅಡಿಷನ್‌ನಲ್ಲಿ ಭಾಗಿಯಾಗಬಹುದು.
ಸಾಮಾನ್ಯರಿಗೆ ಅವಕಾಶವಿದ್ರೂ ಸಂಪೂರ್ಣವಾಗಿ ಸಾಮಾನ್ಯರೇ ಬಿಗ್ ಬಾಸ್ ಮನೆಯಲ್ಲಿ ಇರುವುದಿಲ್ಲ. ಇದರ ಜತೆ ಸೆಲೆಬ್ರಿಟಿಗಳೂ ಇರಲಿದ್ದಾರೆ.
ಪ್ರೋಮೊ, ಅಪ್ಲೇಟ್‌ಗಳು ಹೊರಬೀಳುತ್ತಿದ್ದಂತೆ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯೂ ಹರಿದಾಡಲು ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸ್ಪರ್ಧಿಗಳ ಒಂದು ಪಟ್ಟಿ ವೈರಲ್ ಆಗಿದೆ. ಇಲ್ಲಿದೆ ಆ ಪಟ್ಟಿ..
ಬಿಗ್ ಬಾಸ್ ಗೆ ಹೋಗ್ತಾರಾ ಕೊಡಗಿನ ಚೆಲುವೆ:
ರಿಷಬ್ ಅವರ ‘ಹರಿಕಥೆ ಅಲ್ಲ ಗಿರಿಕಥೆ’ ಮೂಲಕ ಖ್ಯಾತಿ ಪಡೆದು, ‘ಗಜರಾಮ’ ಚಿತ್ರದಲ್ಲಿ ನಟಿಸಿರುವ ತಪಸ್ವಿ ಪೂಣಚ್ಚ ಅವರು ಈ ಸಲ ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎನ್ನುವ ಕುರಿತು ಕೆಲ ಸೋಶಿಯಲ್ ಮೀಡಿಯಾ ಪೇಜ್ ಗಳಲ್ಲಿ ಸುದ್ದಿ ಹರಿದಾಡಿದೆ.
ಈ ಸುದ್ದಿ ವೈರಲ್ ಆಗಿದ್ದ, ಇದುವರೆಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಸದ್ಯ ನಟಿ ‘ಪ್ರೇಮದ ಊರಲಿ’ ಎನ್ನುವ ಸಿನ್ಮಾದಲ್ಲಿ ಬ್ಯುಸಿಯಾಗಿದ್ದಾರೆ.
ಕಿರುತೆರೆ ನಟ ಭರತ್ ಬೋಪಣ್ಣರೂ ಹೋಗ್ತಾರಾ;
ಕಿರುತೆರೆಯಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ, ‘ಬ್ರಹ್ಮಗಂಟು’ ಮೂಲಕ ಅಪಾರ ಜನಪ ಪಡೆದುಕೊಂಡು ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಭರತ್ ಬೋಪಣ್ಣ ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎನ್ನಲಾಗುತ್ತಿದೆ.
ಕನ್ನಡದ ‘ವಿಜಯಾನಂದ’, ‘ಡೆಮೊ ಪೀಸ್’, ‘ಟ್ರೋಮ್ಯಾನ್ಸ್’ (ಮಲಯಾಳಂ), ‘ಮಿಷನ್ ಚಾಪ್ಟರ್ 1’ (ತಮಿಳು) ಮುಂತಾದ ಚಿತ್ರಗಳಲ್ಲಿ ನಟಿಸಿರುವ ಭರತ್ ಹ್ಯಾಂಡ್ಲಮ್ ಹಂಕ್ ಆಗಿ ಮಿಂಚುತ್ತಿದ್ದಾರೆ.
ಭರತ್ ಬಿಗ್ ಬಾಸ್ ಹೋಗುತ್ತಾರೆ ಎನ್ನುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡಿದೆ. ಆದರೆ ಅಧಿಕೃತ ಮಾಹಿತಿಗೆ ಇನ್ನಷ್ಟು ಸಮಯ ಕಾಯಬೇಕು.
ಕಿರುತೆರೆ ನಟಿ ಸಮೀಕ್ಷಾ;
ಕನ್ನಡದ ‘ರಾನಿ’ ಚಿತ್ರದಲ್ಲಿ ನಟಿಸಿ ಹಲವು ಧಾರವಾಹಿಗಳಲ್ಲಿ ನಟಿಸಿರುವ ಬಿಗ್ ಬಾಸ್‌ಗೆ ಬರುತ್ತಾರೆ ಎನ್ನಲಾಗುತ್ತಿದೆ. ಯಾವುದಕ್ಕೂ ಕಾದುನೋಡಬೇಕಿದೆ.
ಯೂಟ್ಯೂಬರ್ ಸ್ಯಾಮ್ ಸಮೀರ್:
ಕಳೆದ ವರ್ಷವೂ ಜನಪ್ರಿಯ ಯೂಟ್ಯೂಬರ್, ಬ್ಲಾಗರ್ ಸ್ಯಾಮ್ ಸಮೀರ್ ಅವರ ಹೆಸರು ‘ಬಿಗ್ ಬಾಸ್’ ಸ್ಪರ್ಧಿಗಳ ಪಟ್ಟಿಯಲ್ಲಿ ಕೇಳಿ ಬರುತ್ತಿದೆ. ಈ ಸಲ ಅವರು ಬರುತ್ತಾರೆ ಎನ್ನಲಾಗಿದೆ.
ಬಿಗ್ ಬಾಸ್‌ಗೆ ಕಾಮಿಡಿ ಕಿಲಾಡಿಗಳ ದಂಡು;
ಇನ್ನು ಕನ್ನಡದ ಹಲವು ಕಾಮಿಡಿ ಶೋಗಳಲ್ಲಿ ರಿಯಾಲಿಟಿ ಶೋಗಳಲ್ಲಿ ತಮ್ಮ ಪ್ರತಿಭೆಯಿಂದಲೇ ಸಖತ್ ಸೌಂಡ್ ಮಾಡಿರುವ ಹುಲಿ ಕಾರ್ತಿಕ್ ಅವರ ಹೆಸರು ಕಳೆದ ಕೆಲ ಸೀಸನ್‌ಗಳಿಂದ ಬಿಗ್ ಬಾಸ್ ಸ್ಪರ್ಧಿಗಳ ಲಿಸ್ಟ್ನಲ್ಲಿ ಕೇಳಿ ಬರುತ್ತಿದೆ. ಈ ಸಲ ಅವರು ಬರುತ್ತಾರೆ ಎನ್ನಲಾಗುತ್ತಿದೆ.
ಇದರ ಜತೆಗೆ ಸೀರುಂಡೆ ರಘು, ಹುಲಿ ಕಾರ್ತಿಕ್, ಮಾನಸಾ, ಜಗಪ್ಪ ಅವರುಗಳಲ್ಲಿ ಕೆಲವರು ‘ಬಿಗ್ ಬಾಸ್ ಮನೆಗೆ. ಸ್ಪರ್ಧಿಗಳಾಗಿ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಯೋಗಿಶ್ವರ್ ಪುತ್ರಿ ‘ಬಿಗ್ ಬಾಸ್’ ಮನೆಗೆ;
ಕರ್ನಾಟಕದ ಹಿರಿಯ ರಾಜಕಾರಣಿ ಹಾಗೂ ಶಾಸಕ ಸಿ.ಪಿ. ಯೋಗೇಶ್ವರ್ ಅವರ ಪುತ್ರಿ ನಿಶಾ ಯೋಗೇಶ್ವರ್. ಇತ್ತೀಚಿನ ವರ್ಷಗಳಲ್ಲಿ ತಮ್ಮ ತಂದೆಯೊAದಿಗಿನ ಆಂತರಿಕ ಕೌಟುಂಬಿಕ ಭಿನ್ನಾಭಿಪ್ರಾಯಗಳು ಮತ್ತು ರಾಜಕೀಯ ವಿವಾದಗಳ ಮೂಲಕ ಇವರು ಸಾರ್ವಜನಿಕವಾಗಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಸುದ್ದಿಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸಕ್ರಿಯರಾಗಿರುವ ಅವರು ‘ಬಿಗ್ ಬಾಸ್’ ಮನೆಗೆ ಬರುತ್ತಾರೆ ಎನ್ನುವ ಮಾತು ಹರಿದಾಡಿದೆ.
‘ಬಿಗ್ ಬಾಸ್’ ಬರುತ್ತಾರಾ ನಟಿ ನಿಖಿತಾ ಸ್ವಾಮಿ;
ಇನ್ನು ಕನ್ನಡದ ‘ಫಸ್ಟ್ ನೈಟ್ ವಿತ್ ದೆವ್ವ’, ‘ಶಿಖಂಡಿ’ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ನಟಿ ನಿಖಿತಾ ಸ್ವಾಮಿ ಈ ಸಲದ ಬಿಗ್ ಬಾಸ್ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ.
ಮತ್ತೆ ‘ದೊಡ್ಡನೆ’ಗೆ ಓಂ ಪ್ರಕಾಶ್ ರಾವ್:
ಕನ್ನಡದ ನಿರ್ದೇಶಕ ಓಂ ಪ್ರಕಾಶ್ ರಾವ್ ಬಿಗ್ ಬಾಸ್ ಸೀಸನ್ 4’ರಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ತನ್ನ ನೇರ ನುಡಿಯಿಂದಲೇ ಗಮನ ಸೆಳೆಯುವ ಅವರು ಮತ್ತೊಮ್ಮೆ ಬಿಗ್ ಬಾಸ್ ಮನೆಗೆ ಬರುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.ಈಗಾಗಲೇ ಅವರು ‘ಕ್ವಾಟ್ಲಿ ಕಿಚನ್ ಸೀಸನ್ -2’ನ ಭಾಗವಾಗಿದ್ದಾರೆ. ಬಿಗ್ ಬಾಸ್‌ಗೆ ಬರುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.
ವರ್ಷಾ ಕಾವೇರಿ:
ಕಳೆದ ಎರಡು ಸೀಸನ್‌ನಿಂದ ಯೂಟ್ಯೂಬರ್ ವರ್ಷಾ ಕಾವೇರಿ ಬಿಗ್ ಬಾಸ್ ಮನೆಗೆ ಬರುತ್ತಾರೆ ಎನ್ನಲಾಗುತ್ತಿದೆ. ಈ ಬಾರಿ ಬಂದರೂ ಬರಬಹುದು.
ವರುಣ್ ಆರಾಧ್ಯ:
ಸಾಮಾಜಿಕ ಜಾಲತಾಣ ಪ್ರಭಾವಿ , ಕಂಟೆAಟ್ ಕ್ರಿಯೇಟರ್ ಮತ್ತು ಯೂಟ್ಯೂಬರ್ ಆಗಿರುವ ವರುಣ್ ಆರಾಧ್ಯ ಅವರ ಹೆಸರು ಕೂಡ ಬಿಗ್ ಬಾಸ್ ಸಂಭಾವ್ಯರ ಪಟ್ಟಿಯಲ್ಲಿ ಕೇಳಿ ಬಂದಿದೆ.
ಇದಲ್ಲದೆ ‘ರಾಮಾಚಾರಿ’ ಖ್ಯಾತಿಯರಿತ್ವಿಕ್ ಕೃಪಾಕರ್, ನಟಿ ಮೌನ ಗುಡ್ಡೆಮನೆ, ‘ಯಜಮಾನ’ ಸೀರಿಯಲ್ ನಟಿ ಮಧುಶ್ರೀ ಭೈರಪ್ಪ, ‘ಹಳ್ಳಿ ಪವರ್’ ಖ್ಯಾತಿಯ ರಗಡ್ ರಶ್ಮಿ ಸೇರಿದಂತೆ ಇನ್ನು ಅನೇಕರ ಹೆಸರು ತಳುಕು ಹಾಕಿಕೊಂಡಿದೆ. ಯಾವುದಕ್ಕೂ ಅಧಿಕೃತವಾಗುವವರೆಗೂ ಕಾಯಬೇಕಿದೆ.