3Kaala News

ಸುಭಾಷಿತ 

ಒಬ್ಬರ ಯಶಸ್ಸನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದಾರೆಂದರೆ,
ಅವರಲ್ಲಿ ಶ್ರಮಪಡುವ ಯೋಗ್ಯತೆಯೂ ಇಲ್ಲ,
ಆ ಯಶಸ್ಸಿನ ಹಿಂದಿರುವ ಕಷ್ಟಗಳನ್ನು ಅರಿಯುವ ಯೋಗ್ಯತೆಯೂ ಇಲ್ಲ ಎಂದೇ ಅರ್ಥ.
ಸೋಮಾರಿಗಳ ಕಣ್ಣಿಗೆ ಸಾಧನೆ ಯಾವತ್ತೂ ಅದೃಷ್ಟದಂತೆ ಕಾಣುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಜೂ 21 ರಂದು ಮೈಸೂರು ಅರಮನೆ ಆವರಣದಲ್ಲಿ ಅಂತರಾಷ್ಟಿçಯ ಯೋಗ ದಿನಾಚರಣೆ: ಅಪರ ಜಿಲ್ಲಾಧಿಕಾರಿ ಐಶ್ವರ್ಯ ಆರ್


ಮೈಸೂರು; ಜಿಲ್ಲಾಡಳಿತದ ವತಿಯಿಂದ ಜೂನ್ 21 ರಂದು ಮೈಸೂರು ಅರಮನೆ ಆವರಣದಲ್ಲಿ 12 ನೇ ಅಂತರಾಷ್ಟಿçÃಯ ದಿನಾಚರಣೆಯನ್ನು ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಐಶ್ವರ್ಯ.ಆರ್ ತಿಳಿಸಿದರು.
ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ12 ನೇ ಅಂತರಾಷ್ಟಿçÃಯ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನರು ಯೋಗವನ್ನು ಯೋಗದಿನಕ್ಕೆ ಮಾತ್ರ ಮೀಸಲಿಡದೆ ಯೋಗಾಭ್ಯಾಸವನ್ನು ಪ್ರತಿದಿನ ಅಳವಡಿಸಿಕೊಳ್ಳಬೇಕು. ಯೋಗದ ವಿವಿಧ ಆಸನಗಳಿಂದ ದೇಹದ ಎಲ್ಲಾ ಸ್ನಾಯು ಹಾಗೂ ನರಗಳಿಗೆ ವ್ಯಾಯಾಮ ನೀಡಿ ಆರೋಗ್ಯಯುತ ಜೀವನಕ್ಕೆ ಸಹಾಯಕವಾಗುತ್ತದೆ ಎಂದರು.
ಜೂ. 21 ರಂದು ಬೆಳಿಗ್ಗೆ 6 ರಿಂದ 8ರವರೆಗೆ ವಿವಿಧ ಆಸನಗಳನ್ನು ಪ್ರದರ್ಶಿಸಲಾಗುವುದು. ಜಿಲ್ಲೆಯ ವಿವಿಧ ಯೋಗ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಕಾರ್ಯಕ್ರದಲ್ಲಿ ಯಾವುದಾದರೂ ಹೊಸತನವನ್ನು ತರಬಯಿಸಿದರೆ, ಈ ಕುರಿತು ಮುಕ್ತವಾಗಿ ಚರ್ಚಿಸುವಂತೆ ತಿಳಿಸಿದರು.
ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಅರಮನೆ ಆವರಣದ ಸ್ವಚ್ಛತೆ, ಕುಡಿಯುವ ನೀರು, ಅರಮನೆ ಮಂಡಳಿ ವತಿಯಿಂದ ವೇದಿಕೆ, ಧ್ವನಿವರ್ಧಕ, ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ: ರೇಣುಕಾ ದೇವಿ ಮಾತನಾಡಿ, ಈಗಾಗಲೇ ಯೋಗದಿನವನ್ನು ಪ್ರತಿದಿನ ಅಭ್ಯಾಸ ಮಾಡಲು ದಿನನಿತ್ಯ ಯೋಗ ಯೋಜನೆಯಡಿ ಜೂನ್ 22 ರಿಂದ ಒಂದು ವರ್ಷ 365 ದಿನ ಜನರಿಗೆ ಆನ್ಲೆöÊನ್ ಮೂಲಕ ಲಿಂಕ್ ಒದಗಿಸಲಾಗುವುದು.
ಯೋಗ ಫೆಡರೇಷನ್ ಮುಖ್ಯಸ್ಥ ಶ್ರೀಹರಿ ಮಾತನಾಡಿ, ಮೈಸೂರನ್ನು ಯೋಗ ಹಬ್ ಮಾಡಲು ಜೂನ್ 21 ರಂದು 120 ಸ್ಥಳಗಳಲ್ಲಿ ಯೋಗ ಪ್ರದರ್ಶನ ನೀಡಲು ಯೋಜಿಸಲಾಗಿದೆ. 1200 ತರಬೇತುದಾರರೊಂದಿಗೆ 1,20, 000 ಜನರು ಭಾಗವಹಿಸುವಂತೆ ಮಾಡಲು ಉದ್ದೇಶಿಸಲಾಗಿದೆ ಎಂದರು.
ಇದೇ ಸಂರ್ಭದಲ್ಲಿ ಯೋಗದಿನದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ಕೆ.ಜಿ.ದೇವರಾಜ್, ಸಹಾಯಕ ಪೊಲೀಸ್ ಆಯುಕ್ತ ರಾಘವೇಂದ್ರ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಪ್ರಭು, ವಿವಿಧ ಯೋಗ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಯೋಗದಿನದ ಆಸನಗಳು
ಪ್ರಾರ್ಥನೆ-01 ನಿಮಿಷ

ಚಲನಕ್ರಿಯೆ – 04 ನಿಮಿಷಗಳು
ಸಮಸ್ಥಿತಿ,ಕುತ್ತಿಗೆ ಮುಂದೆ-ಹಿAದೆ,ಕುತ್ತಿಗೆ ಬಲ-ಎಡ, ಕುತ್ತಿಗೆ ಬಲ-ಎಡಕ್ಕೆ ತಿರುಗಿಸುವುದು,ಕುತ್ತಿಗೆಯನ್ನು ವೃತ್ತಾಕಾರವಾಗಿ ತಿರುಗಿಸುವುದು,ಭುಜದ ವ್ಯಾಯಾಮ ಮೇಲೆ-ಕೆಳಗೆ,ವೃತ್ತಾಕಾರವಾಗಿ ತಿರುಗಿಸುವುದು, ಸೊಂಟದ ವ್ಯಾಯಾಮ, ಮಂಡಿಗಳ ವ್ಯಾಯಮ.

ಯೋಗಾಸನ -25 ನಿಮಿಷಗಳು
ತಾಡಾಸನ, ವೃಕ್ಷಾಸನ, ಪಾದಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋಣಾಸನ, ಭದ್ರಾಸನ, ವಜ್ರಾಸನ, ಉಷ್ಟಾçಸನ,ಶಶಂಕಾಸನ,ಉತ್ಥಾನ ಮಂಡೂಕಾಸನ,ವಕ್ರಾಸನ,ಮಕರಾಸನ,ಭುಜAಗಾಸನ, ಶಲಭಾಸನ, ಶವಾಸನ, ಸೇತುಬಂಧಾಸನ,ಉತ್ಥಾನ ಪಾದಾಸನ,
ಅರ್ಧ ಹಲಾಸನ,ಪವನಮುಕ್ತಾಸನ, ಶವಾಸನ,
ಪ್ರಾಣಾಯಾಮ,

ಧ್ಯಾನ ಮತ್ತು ಸಂಕಲ್ಪ :14 ನಿಮಿಷಗಳು
ಕಪಾಲಭಾತಿ,ನಾಡಿಶೋಧನ ಪ್ರಾಣಾಯಾಮ, ಶಿತಲೀ ಪ್ರಾಣಾಯಾಮ, ಬ್ರಾಮರೀ ಪ್ರಾಣಾಯಾಮ,ಧ್ಯಾನ.

ಶಾಂತಿ ಮಂತ್ರ : 1 ನಿಮಿಷ