Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ವಿಶ್ವ ಪರಿಸರ ದಿನ ಅಂಗವಾಗಿ ಸೋಲಾರ್ ಇಂಡಕ್ಷನ್ ಸ್ಟೌವ್‌ಗೆ ಚಾಲನೆ ನೀಡಿದ ಶಾಸಕ ಟಿ.ಎಸ್. ಶ್ರೀವತ್ಸ


ಮೈಸೂರು: ಸನ್ ಪ್ರೀತ್ ಸಸ್ಟೆöÊನೆಬಿಲಿಟಿ ಸೊಲ್ಯೊಷನ್ಸ್ ಸಂಸ್ಥೆಯು ವಿನ್ಯಾಸಗೊಳಿಸಿರುವ ಗೃಹ ಬಳಕೆಯ ಸೋಲಾರ್ ಇಂಡಕ್ಷನ್ ಸ್ಟೌವ್ ಗೆ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಸಂಪೂರ್ಣ ಸೌರ ಶಕ್ತಿಯಿಂದ ಕಾರ್ಯ ನಿರ್ವಹಿಸುವ ಸೋಲಾರ್ ಇಂಡಕ್ಷನ್ ಸ್ಟೌವ್ ಅನೇಕ ವಿಶೇಷತೆಗಳಿಂದ ಕೂಡಿದ್ದು, ಇದರಲ್ಲಿ ರಾತ್ರಿ ವೇಳೆಯೂ ಸೇರಿದಂತೆ ಮೂರೂ ಹೊತ್ತಿನ ಅಡುಗೆ ಮಾಡಬಹುದಾಗಿದೆ. ಸರಳ ವಿನ್ಯಾಸ ಮತ್ತು ಸುಲಭವಾಗಿ ಬಳಕೆ ಮಾಡಬಹುದಾದ ಮಾದರಿಯಾಗಿರುವ ಈ ಉಪಕರಣವನ್ನು ಮೊಬೈಲ್ ಆಪ್ ಮುಖಾಂತರವೂ ನಿಯಂತ್ರಿಸಬಹುದಾಗಿದೆ.
ಪ್ರಸ್ತುತ ಸಂದರ್ಭದಲ್ಲಿ ಇಂತಹ ತಂತ್ರಜ್ಞಾನಗಳು ಅತ್ಯಂತ ಅಗತ್ಯವಾಗಿದ್ದು, ಕೇಂದ್ರ ಸಚಿವರ ಗಮನಕ್ಕೆ ತರುವ ಮುಖಾಂತರ ಇದನ್ನು ಜನಪ್ರಿಯಗೊಳಿಸಲು ಬೇಕಾದ ಎಲ್ಲ ಪ್ರಯತ್ನವನ್ನೂ ಮಾಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸನ್ ಪ್ರೀತ್ ಸಂಸ್ಥೆಯ ಪ್ರವೀಣ್ ಕುಮಾರ್, ಎಲ್. ಎನ್. ಹೆಗ್ಡೆ, ರಚನಾ ಎನರ್ ಕೇರ್ ಸಂಸ್ಥೆಯ ಅನಿಲ್ ಕುಮಾರ್ ನಾಡಿಗೇರ್, ನಾಗಭೂಷಣ್ ಮತ್ತಿತರರು ಉಪಸ್ಥಿತರಿದ್ದರು.