
ಮೈಸೂರು; ಪ್ರಸ್ತುತ ದಿನಗಳಲ್ಲಿ ವಿಶ್ವಕ್ಕೆ ಯೋಗ ಶಿಕ್ಷಕರುಗಳ ಸ್ವಂತ ಮಾನ್ಯತೆಯನ್ನು ಪಡೆದಿದ್ದು, ಉದ್ಯೋಗಾವಕಾಶಗಳು ಇದೆ ಎಂದು ಪರಮಹಂಸ ಯೋಗ, ಮಹಾವಿದ್ಯಾಲಯ ಇಂಟರ್ನ್ಯಾಷನಲ್ ಯೋಗ ಸ್ಕೂಲ್ನ ಛೇರ್ಮನ್ ಶಿವಪ್ರಕಾಶ್ ತಿಳಿಸಿದರು.
ಮಂಗಳವಾರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಐವೈಟಿ ಕೋರ್ಸ್ನ್ನು ನುರಿತ ತಜ್ಞರುಗಳ ಸಾರಥ್ಯದಲ್ಲಿ ಯೋಗಾಸನ, ಯೋಗಥೆರಷಿ ಪ್ರಣಾಯಾಮ, ಧ್ಯಾನ ಮುದ್ರಾಥೆರಪಿ, ಯೋಗಶಾಸ್ತç, ಪತಂಜಲಿ ಯೋಗ ಸೂತ್ರ ಅನಾಟಮಿ ಪಿಸಿಯಾಲಜಿ, ಕಲಿಯುವ ವಿಧಾನ, ಕಲಿಸುವ ಕಲೆ, ಆಹಾರಕ್ರಮ ಮನೆ ಮದ್ದು, ಜೀವನ ಕೌಶಲ್ಯ, ಧನಾತ್ಮಕ ಜೀವನ ಶೈಲಿ ಹಾಗೂ ಇನ್ನಿತರ ವಿದ್ಯೆಗಳನ್ನು ಹೇಳಿಕೊಡಲಾಗುತ್ತದೆ. ಈ ಐವೈಟಿ ಕೋರ್ಸ್ನ್ನು ವಿಕೆಂಡ್ ದಿನಗಳಾದ ಶನಿವಾರ ಸಂಜೆ 5 ರಿಂದ 8 ರವರೆಗೆ ಹಾಗೂ ಭಾನುವಾರ ಬೆಳಿಗ್ಗೆ 6.30 ರಿಂದ 9.30 ರವರೆಗೆ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ಯೋಗ ಪಾರ್ಕ್ ಪಕ್ಕದಲ್ಲಿರುವ ಪರಮಹಂಸ ಯೋಗ ಮಹಾವಿದ್ಯಾಲಯ ನಂಬಲ್ ನ್ಯಾಷನಲ್ ಯೋಗ ಸ್ಕೂಲ್ ನಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಿದರು. ಆಸಕ್ತಿಯುಳ್ಳವರು ಹೆಚ್ಚಿನ ಮಾಹಿತಿಗಾಗಿ ಮೊ.ನಂ 95382 05222, 70901 57993ನ್ನು ಸಂಪರ್ಕಿಸಬೇಕೆAದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ಕೆ.ಜಿ. ದೇವರಾಜ್, ಮೈಸೂರು ಯೋಗೀಶ್ ಸಂಸ್ಥೆಯ ಸಂಸ್ಥಾಪಕ ಯೋಗವರಿನ್ನ ಯೋಗಪ್ರಕಾಶ್, ಹಿಮಾಲಯ ಯೋಗ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಆನಂತ ಎನ್, ಸಂಸ್ಥೆಯ ಅಧ್ಯಾಪಕರುಗಳಾದ ಬಿ.ಜೆ. ವಿಜಯಕುಮಾರ್, ಡಾ. ಕಾವ್ಯ ಎಸ್. ಹಾಗೂ ಬಿ.ಕೆ. ಲಕ್ಷಿ÷್ಮ ಉಪಸ್ಥಿತರಿದ್ದರು.