Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸಕಾಲಿಕ ಚಿಕಿತ್ಸೆಯಿಂದ ಜೀವ ರಕ್ಷಣೆ ಸಾಧ್ಯ; ಡಾ. ನಾಗೇಶ್ ಪಿ. ಆರಾಧ್ಯ


ಮೈಸೂರು: ಸಕಾಲಿಕ ಚಿಕಿತ್ಸೆಯಿಂದ ಜೀವ ರಕ್ಷಣೆ ಸಾಧ್ಯ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ನಾಗೇಶ್ ಪಿ. ಆರಾಧ್ಯ ಹೇಳಿದರು.
ಜಿಲ್ಲಾ ಪಂಚಾಯತ್ ಮೈಸೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಹಾಗೂ ನಿರಾಶ್ರಿತರ ಪರಿಹಾರ ಕೇಂದ್ರ ಮೈಸೂರು ಇವುಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಮೈಸೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ವಿಶ್ವ ಸ್ಟ್ರೋಕ್ ದಿನ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಸಾರ್ವಜನಿಕರಿಗೆ ಮೆದುಳಿನ ಆರೋಗ್ಯ ಸೇವೆಯನ್ನು ಸುಲಭವಾಗಿ ತಲುಪಿಸುವುದು ನಮ್ಮ ಆದ್ಯತೆಯಾಗಿದೆ. ಸ್ಟ್ರೋಕ್ ಸಂಭವಿಸಿದಾಗ ಸಮಯವೇ ಮೆದುಳು. ಅಂದರೆ ಆರಂಭಿಕ ಗೋಲ್ಡನ್ ಅವರ್ (ಮೊದಲ ೪.೫ ಗಂಟೆಗಳ) ಒಳಗಾಗಿ ದೊರೆಯುವ ಚಿಕಿತ್ಸೆಯು ರೋಗಿಯ ಜೀವವನ್ನು ಉಳಿಸಲು ಅತ್ಯಂತ ನಿರ್ಣಾಯಕ ಎಂದು ತಿಳಿಸಿದರು.
ಜಿಲ್ಲಾ ಆಸ್ಪತ್ರೆಯ ಮೊದಲನೇ ಮಹಡಿಯ ಕೊಠಡಿ ಸಂಖ್ಯೆ ೧೦೮ ರಲ್ಲಿ ನುರಿತ ವೈದ್ಯರ ತಂಡ ಲಭ್ಯವಿದ್ದು, ಪಾರ್ಶ್ವವಾಯು (ಸ್ಟ್ರೋಕ್), ತಲೆನೋವು, ಮೂರ್ಛೆ ರೋಗ (ಅಪಸ್ಮಾರ) ಮತ್ತು ಮರೆವಿನ ಕಾಯಿಲೆಗಳಿಗೆ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ. ಸಾರ್ವಜನಿಕರು ಇದರ ಸೌಲಭ್ಯ ಪಡೆದುಕೊಳ್ಳಬೇಕೆಂದು ಹೇಳಿದರು.

ಏಚಿಃಊI ತಂಡದ ವೈದ್ಯಾಧಿಕಾರಿ ಡಾ. ಶಾಲಿನಿ ಮಾತನಾಡಿ, ಪಾರ್ಶ್ವವಾಯುವಿನ ಲಕ್ಷಣಗಳನ್ನು ‘ಃಇ ಈಂSಖಿ’ ಸೂತ್ರದ ಮೂಲಕ ಆರಂಭಿಕ ಹಂತದಲ್ಲೇ ಗುರುತಿಸುವುದು ಅತ್ಯಗತ್ಯ. ಇದರಿಂದ ತಕ್ಷಣದ ವೈದ್ಯಕೀಯ ನೆರವು ಒದಗಿಸಿ, ರೋಗಿಯ ಶೀಘ್ರ ಚೇತರಿಕೆಗೆ ನೆರವಾಗಬಹುದು ಹಾಗೂ ಸಾವು-ನೋವಿನ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕ ಅಯ್ಯಪ್ಪ, ವೈದ್ಯಾಧಿಕಾರಿ ಡಾ. ರಮೇಶ್, ಫಿಜಿಯೋಥೆರಪಿಸ್ಟ್ಗಳಾದ ಚಿತ್ರ ಹಾಗೂ ಶೃತಿ ಪಿ.ಟಿ., ಸಹಾಯಕ ಸಾಂಖಿಕ ಅಧಿಕಾರಿ ಅನಿಲ್ ಕ್ರಿಸ್ಟಿ ಮತ್ತು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸುಮಂತ್ ಜಿ. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.