3Kaala News

ಸುಭಾಷಿತ 

ಒಬ್ಬರ ಯಶಸ್ಸನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದಾರೆಂದರೆ,
ಅವರಲ್ಲಿ ಶ್ರಮಪಡುವ ಯೋಗ್ಯತೆಯೂ ಇಲ್ಲ,
ಆ ಯಶಸ್ಸಿನ ಹಿಂದಿರುವ ಕಷ್ಟಗಳನ್ನು ಅರಿಯುವ ಯೋಗ್ಯತೆಯೂ ಇಲ್ಲ ಎಂದೇ ಅರ್ಥ.
ಸೋಮಾರಿಗಳ ಕಣ್ಣಿಗೆ ಸಾಧನೆ ಯಾವತ್ತೂ ಅದೃಷ್ಟದಂತೆ ಕಾಣುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ನಟನ’ ಮಕ್ಕಳ ವಾರಾಂತ್ಯರ0ಗಶಾಲೆಗೆ ಮಕ್ಕಳ ಆಯ್ಕೆ ಪ್ರಕ್ರಿಯೆಗೆ ಸಂದರ್ಶನ

ಮೈಸೂರು; ಇಲ್ಲಿನ ನಟನರಂಗಶಾಲೆಯು ತನ್ನ ಚಟುವಟಿಕೆಯ ಭಾಗವಾಗಿ 8ರಿಂದ 14ವರ್ಷದ ಮಕ್ಕಳ ಮನೋವಿಕಾಸ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವಚಿತೆ ಅಭಿನಯ ಮತ್ತು ರಂಗತರಬೇತಿ ನೀಡುವ ನಿಟ್ಟಿನಲ್ಲಿ ಆಯ್ಕೆ ಪ್ರಕ್ರಿಯೆ ಮತ್ತು ಸಂದರ್ಶನವನ್ನು ಜೂನ್ 14 ರಂದು ನಡೆಸಲಿದೆ.
ಪ್ರತಿ ಶನಿವಾರ ಮಧ್ಯಾಹ್ನ 04.30ರಿಂದ 06.30ರ ವರೆಗೆ ಮತ್ತು ಭಾನುವಾರ ಬೆಳಿಗ್ಗೆ 10 ರಿಂದ 12ರ ವೆರೆಗೆತರಗತಿಯನ್ನು ನಡೆಸುತ್ತಿದ್ದು, 2026-27ನೇ ಸಾಲಿನ ಪ್ರವೇಶ ಪ್ರಕ್ರಿಯೆ ಮತ್ತು ಮಕ್ಕಳ ಸಂದರ್ಶನ ಇದೇ ಜೂನ್14ರಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನರಂಗಶಾಲೆಯಲ್ಲಿ ನಡೆಯಲಿದೆ. ಆಯ್ಕೆಯಾದ ಮಕ್ಕಳು ರಂಗತರಬೇತಿ ಪಡೆದು ಪ್ರದರ್ಶನಗಳಲ್ಲಿ ಪಾಲ್ಗೊಂಡು ನಂತರ ವರುಷದಕೊನೆಯಲ್ಲಿ ಪ್ರಮಾಣ ಪತ್ರವನ್ನು ಪಡೆದುಕೊಳ್ಳುತ್ತಾರೆ.
ಆಸಕ್ತ ಮಕ್ಕಳು ಜೂನ್ 14 ರಂದು ಸಂದರ್ಶನದಲ್ಲಿ ಭಾಗವಹಿಸತಕ್ಕದ್ದು. ಸಂದರ್ಶನದಲ್ಲಿಆಯ್ಕೆಯಾದ ಸೀಮಿತ ಮಕ್ಕಳಿಗೆ ಮಾತ್ರತರಗತಿಗೆ ಸೇರುವ ಅವಕಾಶವಿದ್ದು, ಆ ದಿನವೇ ಅರ್ಜಿ ಪಡೆದು ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 7259537777, 9480468327, 9845595505 ಸಂಪರ್ಕಿಸಿ.