
ಬೆಂಗಳೂರು; ಬೆಳ್ಳಂಬೆಳಗ್ಗೆ ಕಿಡಿಗೇಡಿಗಳು ನಾನು ಸತ್ತೋದೆ ಅನ್ನೋ ಸುದ್ದಿ ಹಬ್ಬಿಸಿದ್ದಾರೆ. ನಾನು ಬದುಕಿದ್ದೀನಿ, ಆರೋಗ್ಯವಾಗಿ ಇದೀನಿ ಎಂದು ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಹೇಳಿದರು.
ಬೆಳಗ್ಗೆ ಏಳೋ ಮುಂಚೆನೇ ಯಾರೋ ಅವಿವೇವಿಕಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳನ್ನು ಹಾಕಿ ನಾನು ಸತ್ತುಹೋದೆ ಅಂತ ಸುದ್ದಿ ಹಬ್ಬಿಸಿದಾರೆ. ಅದೆಲ್ಲ ಶುದ್ಧ ಸುಳ್ಳು. ನನ್ನ ಆರೋಗ್ಯಚನಾಗಿದೆ, ಬೆಳಗ್ಗೆಯಿಂದ ಪಾಪ ನನ್ನ ಮಕ್ಕಳು, ಮೊಮ್ಮಕ್ಕಳು ಕಾಲ್ ಮಾಡ್ತಾನೇ ಇದಾರೆ. ದೇವರ ಆಶೀರ್ವಾದ ಇರೋವರೆಗೂ ಗಟ್ಟಿಯಾಗಿನೇ ಇರ್ತೀನಿ ಎಂದು ನುಡಿದರು. .ಬದುಕಿರೋ ಮನುಷ್ಯ ಸತ್ತುಹೋದ ಅಂತ ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳನ್ನು ಸುಮ್ಮನೇ ಬಿಡಲ್ಲ. ಅವರನ್ನು ಬೆನ್ನತ್ತಿ ತಕ್ಕ ಶಿಕ್ಷೆ ಕೊಡಿಸುತ್ತೇನೆ ಎಂದು ಗುಡುಗಿದ್ದಾರೆ.