Skip to main content

3Kaala News

ಸುಭಾಷಿತ 

ಅತಿಯಾಗಿ ಯಾರನ್ನೂ ಒತ್ತಾಯಪೂರ್ವಕವಾಗಿ ನಿಮ್ಮ ಜೀವನದಲ್ಲಿ ಉಳಿಸಿಕೊಳ್ಳಬೇಡಿ…”
ಅತಿಯಾಗಿ ಯಾರನ್ನೂ ಹಿಡಿದುಕೊಳ್ಳಲು ಪ್ರಯತ್ನಿಸಬೇಡಿ.
ಉಳಿಯುವ ಮನಸ್ಸಿದ್ದವರು ಕಾರಣವಿಲ್ಲದೆ ಉಳಿಯುತ್ತಾರೆ.
ಹೋಗುವ ಮನಸ್ಸಿದ್ದವರನ್ನು ಹಿಡಿದಿಟ್ಟರೂ ಪ್ರಯೋಜನವಿಲ್ಲ.
ಒತ್ತಾಯದಿಂದ ಉಳಿದ ಸಂಬಂಧಕ್ಕೆ ಆತ್ಮೀಯತೆ ಇರುವುದಿಲ್ಲ.
ಪ್ರೀತಿಯನ್ನು ಕೇಳಿ ಪಡೆಯಲು ಸಾಧ್ಯವಿಲ್ಲ.
ಗೌರವವನ್ನು ಬಲವಂತದಿಂದ ಗಳಿಸಲಾಗುವುದಿಲ್ಲ.
ನಿಮ್ಮ ವ್ಯಕ್ತಿತ್ವವೇ ನಿಮ್ಮ ದೊಡ್ಡ ಆಸ್ತಿ.
ಅದನ್ನು ಯಾರಿಗಾಗಿ ಕಳೆದುಕೊಳ್ಳಬೇಡಿ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಹೈನುಗಾರಿಕೆ ಕ್ಷೇತ್ರದಲ್ಲಿ ವೈಜ್ಞಾನಿಕ ಜ್ಞಾನಕ್ಕೆ ಉತ್ತೇಜನ


ಮೈಸೂರು: ಗ್ರಾಮೀಣ ರೈತರ ಆರ್ಥಿಕ ಸಬಲೀಕರಣ ಮತ್ತು ವೈಜ್ಞಾನಿಕ ಹೈನುಗಾರಿಕೆ ಉತ್ತೇಜಿಸುವ ಉದ್ದೇಶದಿಂದ ಹಾರ್ಟ್ ಸಂಸ್ಥೆಯ ವತಿಯಿಂದ “ಹಸು ಸಾಕಾಣಿಕೆ ಮತ್ತು ಗುಣಮಟ್ಟದ ಹಾಲು ಉತ್ಪಾದನೆ” ಕುರಿತು ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಮೈಸೂರಿನ ರಿಂಗ್ ರೋಡ್ ಸಮೀಪವಿರುವ ಹಾರ್ಟ್ ಸಂಸ್ಥೆ ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಾರ್ಟ್ ಸಂಸ್ಥೆಯ ಅಧ್ಯಕ್ಷ ಶಿವಕುಮಾರ್ ಮಾತನಾಡಿ., ಹೈನುಗಾರಿಕೆ ಗ್ರಾಮೀಣ ಆರ್ಥಿಕತೆಯ ಪ್ರಮುಖ ಆಧಾರವಾಗಿದ್ದು, ರೈತರು ಸಾಂಪ್ರದಾಯಿಕ ವಿಧಾನಗಳ ಜೊತೆಗೆ ವೈಜ್ಞಾನಿಕ ಪಶುಪಾಲನಾ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಉತ್ತಮ ತಳಿಯ ಹಸುಗಳ ಸಾಕಾಣಿಕೆ, ಸಮರ್ಪಕ ಪೌಷ್ಟಿಕ ಆಹಾರ ನಿರ್ವಹಣೆ, ಆರೋಗ್ಯ ರಕ್ಷಣೆ ಹಾಗೂ ಸ್ವಚ್ಛ ಹಾಲು ಉತ್ಪಾದನೆಯ ಮೂಲಕ ರೈತರು ಹೆಚ್ಚಿನ ಆದಾಯ ಗಳಿಸಿ ಸ್ವಾವಲಂಬಿಗಳಾಗಬಹುದು ಎಂದು ತಿಳಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಜೀವನಮಟ್ಟ ಸುಧಾರಣೆಗೆ ಹಾರ್ಟ್ ಸಂಸ್ಥೆ ನಿರಂತರವಾಗಿ ವಿವಿಧ ತರಬೇತಿ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪ್ರಸನ್ನ ಮಾತನಾಡಿ, ಅತ್ಯಂತ ಪರಿಣಾಮಕಾರಿ ಮತ್ತು ಪ್ರೇರಣಾದಾಯಕ ತರಬೇತಿ ಅಧಿವೇಶನ ನಡೆಸಿದರು. ಹಸುಗಳ ಆಯ್ಕೆ, ತಳಿ ಅಭಿವೃದ್ಧಿ, ಸಮತೋಲಿತ ಆಹಾರ ನಿರ್ವಹಣೆ, ರೋಗ ನಿರೋಧಕ ಕ್ರಮಗಳು, ಲಸಿಕಾ ಕಾರ್ಯಕ್ರಮಗಳು, ಹಾಲಿನ ಗುಣಮಟ್ಟ ಹೆಚ್ಚಿಸುವ ತಂತ್ರಗಳು ಹಾಗೂ ಹೈನುಗಾರಿಕೆಯನ್ನು ಲಾಭದಾಯಕ ಉದ್ಯಮವಾಗಿ ರೂಪಿಸುವ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು. ರೈತರೊಂದಿಗೆ ನೇರ ಸಂವಾದ ನಡೆಸಿ ಅವರ ಪ್ರಶ್ನೆಗಳಿಗೆ ಪ್ರಾಯೋಗಿಕ ಉತ್ತರಗಳನ್ನು ನೀಡುವ ಮೂಲಕ ಉತ್ತಮ ಮಾರ್ಗದರ್ಶನ ಒದಗಿಸಿದರು.
ತರಬೇತಿಯ ಸಂದರ್ಭದಲ್ಲಿ ಪ್ರಾಯೋಗಿಕ ಉದಾಹರಣೆಗಳು, ಅನುಭವ ಹಂಚಿಕೆ ಮತ್ತು ಸಂವಾದಾತ್ಮಕ ಚರ್ಚೆಗಳು ನಡೆದವು. ಭಾಗವಹಿಸಿದ್ದ ರೈತರು ಮತ್ತು ಯುವಕರು ತರಬೇತಿ ಕಾರ್ಯಕ್ರಮ ಹೈನುಗಾರಿಕೆಯಲ್ಲಿ ಹೊಸ ಜ್ಞಾನ ಹಾಗೂ ಕೌಶಲ್ಯಗಳನ್ನು ಪಡೆದುಕೊಳ್ಳಲು ಇದು ಉತ್ತಮ ಅವಕಾಶವಾಗಿದೆ ಎಂದು ಅಭಿಪ್ರಾಯಪಟ್ಟರು. ವಿಶೇಷವಾಗಿ, ಗುಣಮಟ್ಟದ ಹಾಲು ಉತ್ಪಾದನೆ ಮತ್ತು ವೈಜ್ಞಾನಿಕ ಹಸು ಸಾಕಾಣಿಕೆ ಕುರಿತು ಪಡೆದ ಮಾಹಿತಿಯು ತಮ್ಮ ದೈನಂದಿನ ಹೈನುಗಾರಿಕಾ ಚಟುವಟಿಕೆಗಳಿಗೆ ಬಹಳ ಉಪಯುಕ್ತವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ ಎಲ್ಲಾ ರೈತರು ಮತ್ತು ಅತಿಥಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು. ಇಂತಹ ತರಬೇತಿ ಕಾರ್ಯಕ್ರಮಗಳು ಗ್ರಾಮೀಣ ರೈತರ ಆದಾಯ ಹೆಚ್ಚಳ, ಸ್ವಯಂ ಉದ್ಯೋಗ ಸೃಷ್ಟಿ ಹಾಗೂ ಸುಸ್ಥಿರ ಹೈನುಗಾರಿಕೆ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಲಾಯಿತು.