
ಮೈಸೂರು; ನಗರದ ಗೋವಿಂದರಾವ್ ಮೆಮೋರಿಯಲ್ ಪಿಯು ಕಾಲೇಜಿನ ಮೊದಲ ಮಹಡಿಯ ಕಟ್ಟಡದಲ್ಲಿ ಪತ್ರಿಕಾ ಮತ್ತು ಪುಸ್ತಕ ಸಂಗ್ರಹಕ ಕಾಳಿಹುಂಡಿ ಶಿವಕುಮಾರ್ ಅವರು ಸಂಗ್ರಹಿಸಿರುವ ಬೃಹತ್ ಪುಸ್ತಕಗಳ ಪ್ರದರ್ಶನಗಳ ಕಾರ್ಯಕ್ರಮ ನೆರವೇರಿತು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ ಚಂದ್ರಶೇಖರ್, ಶಿಕ್ಷ ಪಿಯು ಕಾಲೇಜಿನ ಪ್ರಾಂಶುಪಾಲ ದೇವರಾಜ್ ಪಿ ಚಿಕ್ಕಹಳ್ಳಿ, ಮೈಸೂರು ಆಕಾಶವಾಣಿ ಕೇಳುಗರ ಬಳಗ ಸಮುದ್ಯತಾದ ಅಧ್ಯಕ್ಷ, ಗೋವಿಂದರಾವ್ ಮೆಮೋರಿಯಲ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ರವಿ ಕೆ, ಹಾಗೂ (ಆರ್ ಎಂ ಪಿ ನಿವೃತ್ತ ಹಿರಿಯ ಶ್ರುಶೂಷಕ ಕಣ್ಣೂರು ವಿ ಗೋವಿಂದಾಚಾರಿ ಅವರು ಪುಸ್ತಕಗಳನ್ನು ವೀಕ್ಷಿಸಿದರು, ಸಂಗ್ರಹಕ ಕಾಳಿಹುಂಡಿ ಶಿವಕುಮಾರ್ ಉಪಸ್ಥಿತರಿದ್ದರು. ಕನ್ನಡದ ಪುಸ್ತಕಗಳ ಭರಾಟೆಯ ಪ್ರದರ್ಶನಕ್ಕೆ ಕಾಲೇಜಿನ ಉಪನ್ಯಾಸಕರು, ಮಕ್ಕಳು, ಸಾರ್ವಜನಿಕರು ಪ್ರದರ್ಶನದಲ್ಲಿ ಪುಸ್ತಕಗಳನ್ನು ಆಸಕ್ತಿಯಿಂದ ವೀಕ್ಷಿಸಿದರು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ವ್ಯವಸ್ಥಿತವಾಗಿ ಜೋಡಿಸಲಾಗುವುದು ಕಾಳಿಹುಂಡಿ ಶಿವಕುಮಾರ್ ತಿಳಿಸಿದರು. ಇದೇ ಸಂದರ್ಭ ಅವರಿಗೆ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು.