
ಮೈಸೂರು: ಜಾಗತಿಕವಾಗಿ ಯೋಗ ನಗರವೆಂದು ಮನ್ನಣೆ ಗಳಿಸಿರುವ ಅರಮನೆ ನಗರಿ ಮೈಸೂರು ಮತ್ತೊಂದು ವಿಶ್ವ ಯೋಗ ದಿನಾಚರಣೆ ಸಂಭ್ರಮಕ್ಕೆ ಸಜ್ಜಾಗಿದೆ. 12ನೇ ಅಂತಾರಾಷ್ಟಿçÃಯ ಯೋಗ ದಿನವನ್ನು ವಿಭಿನ್ನ ಹಾಗೂ ಹೊಸತನದೊಂದಿಗೆ ಆಚರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ವಿಶ್ವ ಯೋಗ ದಿನ ನಮಗೆಲ್ಲ ಹಬ್ಬವಿದ್ದಂತೆ. ಅದೇ ದಿನ ಮಾಡಿದರೆ ಸಂತೋಷ. ಆದರೆ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಲೂ ಅವಕಾಶ ನೀಡಿದ್ದೇವೆ. ಈ ಬಾರಿಯ ಜೂನ್ 21ರ ವಿಶ್ವ ಯೋಗ ದಿನ ಭಾನುವಾರ ಇದೆ. ತಮ್ಮ ಅನುಕೂಲಕ್ಕೆ ಅನುಗುಣವಾಗಿ ಶನಿವಾರ ಅಥವಾ ಸೋಮವಾರ ಯೋಗಾಭ್ಯಾಸ ಏರ್ಪಡಿಸಲು ಶಾಲಾ-ಕಾಲೇಜು, ಸಂಘ-ಸAಸ್ಥೆ, ಕಚೇರಿ- ಕೈಗಾರಿಕೆಗಳಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಯೋಗ ಫೆಡರೇಷನ್ ಆಫ್ ಮೈಸೂರು ಅಧ್ಯಕ್ಷ ಶ್ರೀಹರಿ ದ್ವಾರಕನಾಥ್ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ ವಿಶ್ವ ಯೋಗ ದಿನ ಘೋಷಣೆ ನೀಡಿದಾಗ, ಯಾರಿಗೂ ಸ್ಪಷ್ಟತೆ ಅಥವಾ ಮುನ್ನೋಟ ಇರಲಿಲ್ಲ. ಮೊದಲ ವರ್ಷ ಮಳೆಯ ನಡುವೆಯೂ 10 ಜನ ಸೇರಿಸಿ ಯೋಗ ಮಾಡಿದ್ದೆವು. 2017ರಲ್ಲಿ 55,000 ಜನ ಸೇರಿಸಿ ಗಿನ್ನಿಸ್ ದಾಖಲೆ ನಿರ್ಮಿಸಲಾಯಿತು. ನಂತರದ ವರ್ಷಗಳಲ್ಲಿ 65,000 ಮತ್ತು 75,000 ಜನ ಸೇರಿಸಿದ್ದೆವು. ಇದೆಲ್ಲದರ ಪರಿಣಾಮ 2022ರಲ್ಲಿ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಮೈಸೂರಿಗೆ ಬಂದರು.
ಕೋವಿಡ್ ಕಾಲದಲ್ಲೂ ಮನೆಮನೆಯಲ್ಲಿ ಲಕ್ಷಾಂತರ ಜನ ಯೋಗ ಮಾಡಿದ್ದಾರೆ. ಈ ಎಲ್ಲ ಹೆಗ್ಗಳಿಕೆಯೊಂದಿಗೆ 2026ರ ಯೋಗ ದಿನವನ್ನು ಜನ ಇರುವಲ್ಲಿಯೇ ಯೋಗ ಮಾಡುವಂತೆ ಪ್ರೇರೇಪಿಸುವ ಮೂಲಕ ವಿಶಿಷ್ಟವಾಗಿ ರೂಪಿಸಲಾಗಿದೆ ಎಂದು ವಿವರಿಸಿದರು.
120 ಸಂಸ್ಥೆಗಳು, 1.20 ಲಕ್ಷ ಜನರ ಗುರಿ: ಮೈಸೂರು ಜಿಲ್ಲೆ ಮತ್ತು ನಗರ ವ್ಯಾಪ್ತಿಯ 120 ಸಂಸ್ಥೆಗಳು ಯೋಗಾಭ್ಯಾಸದಲ್ಲಿ ಭಾಗವಹಿಸುವ ಉತ್ಸಾಹ ತೋರಿವೆ. 1,200 ತರಬೇತಿ ಪಡೆದ ಯೋಗ ಶಿಕ್ಷಕರು ಮತ್ತು ತರಬೇತುದಾರರು ಕಾರ್ಯಕ್ರಮಗಳ ನೇತೃತ್ವ ವಹಿಸಲಿದ್ದಾರೆ. 1.20 ಲಕ್ಷಕ್ಕೂ ಹೆಚ್ಚು ಜನರನ್ನು ಯೋಗಾಭ್ಯಾಸದಲ್ಲಿ ತೊಡಗಿಸುವ ಗುರಿ ಹೊಂದಲಾಗಿದೆ. ನಗರದ ಪ್ರಮುಖ ತಾಣಗಳಲ್ಲಿ ಸಾವಿರಾರು ಯೋಗಾಸಕ್ತರು, ವಿದ್ಯಾರ್ಥಿಗಳು, ಉದ್ಯೋಗಿಗಳು, ಮಹಿಳೆಯರು, ಹಿರಿಯ ನಾಗರಿಕರು, ವಿವಿಧ ಸಂಘಟನೆಗಳ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಯೋಗಕ್ಕೆ ಹೆಚ್ಚಿದ ಜನರ ಬೆಂಬಲ;
ಯೋಗದ ಪರಂಪರೆ, ಇತಿಹಾಸ ಮತ್ತು ಸಾಧಕರನ್ನು ಹೊಂದಿದ್ದರೂ, ಮೈಸೂರಿನ ಯೋಗ ಶಕ್ತಿ ಒಂದು ಕಾಲದಲ್ಲಿ “ಬೂದಿ ಮುಚ್ಚಿದ ಕೆಂಡ”ದAತಿತ್ತು. ಆದರೆ ಒಂದು ದಶಕದಲ್ಲಿ ಯೋಗ ದಿನಾಚರಣೆಯ ಮೂಲಕ ಅದು ಮತ್ತೊಮ್ಮೆ ವಿಶ್ವದ ಗಮನ ಸೆಳೆಯುವಂತಾಗಿದೆ.
ಯೋಗ ದಿನಾಚರಣೆ ಯಶಸ್ವಿಯಾಗಲು ಹಲವು ಸಂಘ-ಸAಸ್ಥೆಗಳು ಕೈಜೋಡಿಸುತ್ತಾ ಬಂದಿವೆ. ಪ್ರಮುಖವಾಗಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಯೋಗ ನರಸಿಂಹಸ್ವಾಮಿ ದೇವಸ್ಥಾನ ಸೇರಿದಂತೆ ಹಲವು ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಂಸ್ಥೆಗಳೂ ಸಹಕಾರ ನೀಡುತ್ತಿವೆ.
ಇವುಗಳ ಜತೆಗೆ ಶಾಲಾ-ಕಾಲೇಜುಗಳು, ಕೈಗಾರಿಕಾ ಸಂಸ್ಥೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು, ವಾಣಿಜ್ಯ ಸಂಘಟನೆಗಳು, ಅಪಾರ್ಟ್ಮೆಂಟ್ ಸಮುದಾಯಗಳು, ರಿಯಲ್ ಎಸ್ಟೇಟ್ ಸಂಸ್ಥೆಗಳು ಸೇರಿದಂತೆ ಅನೇಕ ಸಂಘಟನೆಗಳು ಈ ಬಾರಿ ಯೋಗ ದಿನಾಚರಣೆಗೆ ಎಲ್ಲ ರೀತಿಯ ಸಹಕಾರ ನೀಡುತ್ತಿವೆ.
ಮುಂದೆ 2 ಕೋಟಿ ಜನರಿಂದ ಯೋಗಾಸನದ ಗುರಿ
ಯೋಗ ಫೆಡರೇಷನ್ ಆಫ್ ಮೈಸೂರು, ಮುಂದಿನ ವರ್ಷಕ್ಕೆ ಮತ್ತೊಂದು ಮಹತ್ವಾಕಾಂಕ್ಷೆಯ ಗುರಿಯನ್ನು ಘೋಷಿಸಿದೆ. 2027ಕ್ಕೆ ಕರ್ನಾಟಕ ರಾಜ್ಯಾದ್ಯಂತ ಎರಡು ಕೋಟಿ ಜನರನ್ನು ಯೋಗಾಭ್ಯಾಸದಲ್ಲಿ ತೊಡಗಿಸುವ ಸಂಕಲ್ಪವನ್ನು ಕೈಗೊಂಡಿದೆ.
ಈ ಗುರಿ ಸಾಧಿಸಲು ಜಿಲ್ಲಾಡಳಿತಗಳು, ಆಯುಷ್ ಇಲಾಖೆ, ವಿವಿಧ ಸಂಘ-ಸAಸ್ಥೆಗಳು ಹಾಗೂ ಸ್ವಯಂಸೇವಕರ ಸಹಕಾರ ಅಗತ್ಯವಾಗಿದೆ. ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಗಳು ಈ ಅಭಿಯಾನಕ್ಕೆ ಬೆಂಬಲ ನೀಡುವ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗುರಿ ಎರಡು ಕೋಟಿ ಇದ್ದರೂ ಒಂದು ಕೋಟಿ ಆಗಬಹುದು ಅಥವಾ ಮೂರು ಕೋಟಿ ಜನರೂ ಸೇರಬಹುದು. ಯೋಗದ ಬಗ್ಗೆ ಜನರಲ್ಲಿ ಇರುವ ಆಸಕ್ತಿ ಮತ್ತು ವಿಶ್ವಾಸವನ್ನು ನೋಡಿದರೆ ಈ ಗುರಿ ಅಸಾಧ್ಯವಲ್ಲ ಎಂದು ತಿಳಿಸಿದರು.
ಒಟ್ಟಾರೆ ಬಾರಿಯ ಅಂತಾರಾಷ್ಟಿçÃಯ ಯೋಗ ದಿನವನ್ನು “ಙogಚಿ ಜಿoಡಿ ಊeಚಿಟಣhಥಿ ಂgeiಟಿg” ಎಂಬ ಘೋಷವಾಕ್ಯದಡಿ ಆಚರಿಸಲಾಗುತ್ತಿದ್ದು, ಆರೋಗ್ಯಕರ ಮತ್ತು ಸಕ್ರಿಯ ವೃದ್ಧಾಪ್ಯಕ್ಕಾಗಿ ಯೋಗದ ಮಹತ್ವವನ್ನು ಜನರಿಗೆ ತಲುಪಿಸುವ ಉದ್ದೇಶ, ಗುರಿಯೊಂದಿಗೆ ಸಂಪೂರ್ಣವಾಗಿ ಸಜ್ಜಾಗುತ್ತಿದೆ.
ಮೈಸೂರು ಯೋಗ ಕೇಂದ್ರ ;
ಮೈಸೂರು ಸಾಂಸ್ಕöÈತಿಕ ನಗರಿ ಎನ್ನಿಸಿಕೊಳ್ಳುವ ಜತೆಗೆ ಆರೋಗ್ಯ ನಗರ ಮತ್ತು ಯೋಗ ನಗರವಾಗಿಯೂ ಗುರುತಿಸಿಕೊಂಡಿದೆ. ದೇಶ-ವಿದೇಶಗಳಿಂದ ಸಾವಿರಾರು ಜನರು ಯೋಗ ಕಲಿಯಲು ಮತ್ತು ಅಭ್ಯಾಸ ಮಾಡಲು ಮೈಸೂರಿಗೆ ಬರುತ್ತಿದ್ದಾರೆ. ಜನರಲ್ಲಿ ಆರೋಗ್ಯದ ಅರಿವು ಹೆಚ್ಚಾದಂತೆ ಯೋಗದತ್ತ ಆಕರ್ಷಣೆ ಸಹಜವಾಗಿ ಹೆಚ್ಚುತ್ತಿದೆ ಎಂದರು.
2015ರಲ್ಲಿ ವಿಶ್ವ ಯೋಗ ದಿನ ಯಶಸ್ವಿಯಾಗಲು ಆಗ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ಎಸ್ಪಿವೈಎಸ್ಎಸ್) ಅಧ್ಯಕ್ಷರಾಗಿದ್ದ ಡಾ.ಮಾರುತಿ ಕಾರಣಕರ್ತರು. ಮೈಸೂರಿನಲ್ಲಿದ್ದ ಯೋಗ ಸಂಸ್ಥೆಗಳು ಮತ್ತು ಆಸಕ್ತರನ್ನು ಒಗ್ಗೂಡಿಸಲು ಡಾ.ಮಾರುತಿ ಶ್ರಮಿಸಿದ್ದರು. ಅಕಾಲಿಕ ನಿಧನಕ್ಕೆ ತುತ್ತಾದ ಅವರಿಗೆ ಪ್ರಸಕ್ತ ಸಾಲಿನ ಯೋಗ ದಿನವನ್ನು ಅರ್ಪಿಸುತ್ತಿದ್ದೇವೆ ಎಂದು ತಿಳಿಸಿದರು.
